ಅವಮಾನವಾದ ಜಾಗದಲ್ಲೇ ಬಹುಮಾನ – ಕಿಚ್ಚನ ಕೈಯಲ್ಲಿ ತಮಿಳುನಾಡಿನಲ್ಲಿ ರಾರಾಜಿಸಿದ ಕನ್ನಡ ಬಾವುಟ

ಅವಮಾನವಾದ ಜಾಗದಲ್ಲೇ ಬಹುಮಾನ –  ಕಿಚ್ಚನ ಕೈಯಲ್ಲಿ ತಮಿಳುನಾಡಿನಲ್ಲಿ  ರಾರಾಜಿಸಿದ ಕನ್ನಡ ಬಾವುಟ

ಕನ್ನಡ ಬಾವುಟಕ್ಕೆ ಅವಮಾನ ಆದ ಜಾಗದಲ್ಲೇ ಕಿಚ್ಚ ಬಾವುಟ ಹಾರಿಸುವ ಮೂಲಕ‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ಶಬರಿಮಲೆಗೆ ಹೋಗುವ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದ ಮಾಲಾಧಾರಿಗಳಿಗೆ ಸಮಸ್ಯೆ ಮಾಡಲಾಗಿತ್ತು. ಕರ್ನಾಟಕದ ಬಾವುಟ ಹೊಂದಿರುವ ವಾಹನಗಳನ್ನು ಅಡ್ಡಗಟ್ಟಿ ತೆರವು ಗೊಳಿಸಲಾಗಿತ್ತು. ಈ ರೀತಿಯ ಅವಹೇಳನಕಾರಿ ಘಟನೆಗಳು ಪದೇ ಪದೆಯಾಗಿ ನಡೆಯುತ್ತಿದೆ. ತಮಿಳಿನಾಡಿನಲ್ಲಿ ಕರ್ನಾಟಕದ ಧ್ವಜದ ಬಗ್ಗೆ ಅನೇಕರು ಖಂಡಿಸಿದ್ದರು. ಇದೀಗ ಅವಮಾನ ಆದ ಸ್ಥಳದಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಬಾಸ್ ಕರ್ನಾಟಕ ಧ್ವಜವನ್ನು ಎತ್ತಿ ಹಿಡಿಯುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನವರಿ 25ರಂದು ಕರ್ನಾಟಕ ಬುಲ್ಡೋಜರ್ಸ್ ಮತ್ತು ಭೋಜ್​​ಪುರಿ ದಬಾಂಗ್ ಮ್ಯಾಚ್ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದಿದ್ದು ಮ್ಯಾಚ್ ಮುಗಿದ ಬಳಿಕ ಸುದೀಪ್ ಕರ್ನಾಟಕದ ಬಾವುಟ ಹಾರಿಸಿದ್ದಾರೆ.

ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದಿಂದ ತೆರಳೋ ಮಾಲಾಧಾರಿಗೆಳಿಗೆ ಸಮಸ್ಯೆ ಮಾಡಲಾಗಿತ್ತು. ಕರ್ನಾಟಕದ ಬಾವುಟ ಹೊಂದಿರುವ ವಾಹನಗಳನ್ನು ಅಡ್ಡಗಟ್ಟಲಾಗಿತ್ತು. ವಾಹನದ ಮೇಲಿನ ಬಾವುಟಗಳನ್ನು ತೆಗೆಸಲಾಗಿದೆ. ಈ ರೀತಿಯ ಘಟನೆ ಪದೇ ಪದೇ ನಡೆಯುತ್ತಿದೆ. ಇದನ್ನು ಅನೇಕರು ಖಂಡಿಸಿದ್ದರು. ತಮಿಳುನಾಡಿನಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂತು. ಆದ್ರೆ ಕಿಚ್ಚ ಸುದೀಪ್ ತಮಿಳು ನಾಡಿನಲ್ಲಿ ಬಾವುಟ ಹಾರಿಸಿ, ಅಭಿಮಾನಗಳ ಮನ ಗೆದಿದ್ದಾರೆ.  ನಿನ್ನೆ  ಕರ್ನಾಟಕ ಬುಲ್ಡೋಜರ್ಸ್ vs ಭೋಜ್​​ಪುರಿ ದಬಾಂಗ್ ಮ್ಯಾಚ್ ನಡೆದಿದೆ. ಈ ಪಂದ್ಯ ನಡೆದಿದ್ದು ತಮಿಳುನಾಡಿನ ಕೊಯಿಮತ್ತೂರಿನಲ್ಲಿ. ಪಂದ್ಯ ಮುಗಿದ ಬಳಿಕ ಸುದೀಪ್ ಬಾವುಟ ಹಾರಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ನಿಧಿ ಸರ್ಕಾರಕ್ಕೆ ಒಪ್ಪಿಸಿದ ಕುಟುಂಬಕ್ಕೆ ಬಂಪರ್ – ಗಣರಾಜ್ಯೋತ್ಸವ ದಿನವೇ ಒಲಿಯಿತು ಅದೃಷ್ಟ!

ಸಿಸಿಎಲ್​​ನಲ್ಲಿ ಅದ್ಭುತ ಸಿಕ್ಸ್ ಹೊಡೆದ ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ಸ್​​ಗೆ ಜನವರಿ 25ರಂದು ನಡೆದಿದ್ದು ಮೂರನೇ ಪಂದ್ಯ. ಈ ಮೊದಲು ಎರಡೂ ಪಂದ್ಯಗಳನ್ನು ಆಡಿ ಗೆದ್ದಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ 20 ಓವರ್​​ನಲ್ಲಿ 202 ರನ್ ಕಲೆ ಹಾಕಿತು. ಈ ಬೃಹತ್ ಮೊತ್ತ ಬೆನ್ನು ಹತ್ತಿದ ಬುಲ್ಡೋಜರ್ಸ್ ತಂಡ ಉತ್ತಮ ಆರಂಭವನ್ನೇ ಕಂಡಿತು. ಆದರೆ, ನಂತರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಕೊನೆಯ ಓವರ್​​ನಲ್ಲಿ 26 ರನ್​ ಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. 184 ರನ್​​ಗೆ ದಬಾಂಗ್ಸ್ ಆಲ್​ ಔಟ್ ಆಯಿತು. ಈ ಮೂಲಕ ಬುಲ್ಡೋಜರ್ಸ್ ಗೆದ್ದು, ಅಂಕಪಟ್ಟಿಯಲ್ಲಿ ಟಾಪ್ ಸ್ಥಾನ ಗಳಿಸಿತು.

 

Kishor KV