ಪೈರಸಿ ವಿರುದ್ಧ ಕಿಚ್ಚನ ಯುದ್ಧ – ಕಾಲ್ಕೆರೆದು ಬಂದ್ರಾ ಸೆಲೆಬ್ರಿಟಿಸ್?

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಕ್ ರಿಲೀಸ್ ಗೆ ಕೌಂಟ್ಡೌನ್ ಶುರುವಾಗಿದೆ. ಇದೇ ಡಿಸೆಂಬರ್ 25ರಂದು ಸಿನಿಮಾ ರಿಲೀಸ್ ಆಗ್ತಿದೆ. ಸಿನಿಮಾ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ಕಿಚ್ಚ ಸುದೀಪ್ ತಮ್ಮ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರ ಮಾಡುತ್ತಿರುವ ದರ್ಶನ್ ಅಭಿಮಾನಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ವಿ. ಸೋಮಣ್ಣ ಲಾಬಿ? – ಕಮಲ ಪಾಳಯದಲ್ಲೂ ನಾಯತಕ್ವ ಬದಲಾವಣೆ?
ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾ ಇವೆಂಟ್ ವೇಳೆ ನಟ ಕಿಚ್ಚ ಸುದೀಪ್ ಆಡಿದ ಮಾತುಗಳು ನಾನಾ ಚರ್ಚೆ ಹುಟ್ಟುಹಾಕಿವೆ. ಮಾರ್ಕ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ವೇಳೆ ವೇದಿಕೆಯ ಮೇಲೆ ಮಾತನಾಡುವಾಗ ಸುದೀಪ್, ಕೆಲವು ಮಾತುಗಳನ್ನ ಹುಬ್ಬಳ್ಳಿಗೆ ಬಂದು ಇಲ್ಲಿ ವೇದಿಕೆ ಮೇಲೆ ಮಾತಾಡಿದ್ರೆ ಇಡೀ ಕರ್ನಾಟಕಕ್ಕೆ ಎಲ್ಲಿ, ಹೇಗೆ ತಟ್ಟಬೇಕೋ ತಟ್ಟುತ್ತೆ. ಅದೇ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ. ಅಷ್ಟೇ ಅಲ್ಲ, ಪ್ರತಿಸಲ ಈ ಊರಲ್ಲಿ ನಮಗೆ ಸಿಕ್ಕಿರುವ ಪ್ರೀತಿ, ವಿಶ್ವಾಸ, ಬೆಂಬಲ ನಾವ್ಯಾವತ್ತೂ ಮರೆಯೋದಿಲ್ಲ. ಜುಲೈ5ನೇ ತಾರೀಖು ಒಂದು ಪ್ರಾಮಿಸ್ ಮಾಡಿದ್ದೆ. ಡಿಸೆಂಬರ್ 25ಕ್ಕೆ ಬಾಗಿಲು ತಟ್ಟುತ್ತೇನೆ ಎಂದಿದ್ದೆ. ಜೋರಾಗಿ ತಟ್ಟುತ್ತಿದ್ದೇವೆ ನಾವು. ಈ ಜರ್ನಿಯಲ್ಲಿ 25ಕ್ಕೆ ಥಿಯೇಟರ್ನಲ್ಲಿ ಒಂದು ಸಿನಿಮಾ ರಿಲೀಸ್ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಿದೆ. ಈ ವೇದಿಕೆ ಮೇಲಿಂದ ನಾನು ಹೇಳ್ತಾ ಇದ್ದೇನೆ..ಯುದ್ಧಕ್ಕೆ ಸಿದ್ಧ..ಯಾಕೆಂದ್ರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ನನಗೆ ಅನ್ನಿಸುತ್ತೆ ಸೈಲೆಂಟ್ ಆಗಿರೋದು ಒಳ್ಳೆಯದೋ..ಕೆಟ್ಟದ್ದೋ ಗೊತ್ತಿಲ್ಲ. ಆದ್ರೆ ನಿಮಗೋಸ್ಕರ, ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಕಾರಣಕ್ಕೋಸ್ಕರ, ನಾವೆಲ್ಲರೂ ಒಳ್ಳೇ ಹೆಸರಲ್ಲಿ ಇರಬೇಕು ಎಂಬ ಒಂದು ಕಾರಣಕ್ಕೆ ಬಾಯಿ ಮುಚ್ಚಿಕೊಂಡಿದ್ದೆ ಹೊರತು ನನಗೆ ಬಾಯಿ ಇಲ್ಲ ಎಂದಲ್ಲ. ನನ್ನ ಸಹನೆಯಿಂದಾಗಿ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ಆಗುತ್ತಲೇ ಇರುತ್ತದೆ. ಅದನ್ನ ತಾವು ತಡೆದುಕೊಳ್ಳುತ್ತಿದ್ದೀರಿ. ಆದ್ರೆ ಈಗ ಹೇಳ್ತಾ ಇದ್ದೇನೆ..ತಡೆಯೋತನಕ ತಡೀರಿ. ಮಾತಾಡೋ ಟೈಮ್ನಲ್ಲಿ ಮಾತಾಡಿ ಎಂದು ಹೇಳಿದ್ರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದ್ರ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕಿಚ್ಚನಿಗೆ ಟಾಂಗ್ ನೀಡಿದ್ರು.
ಇನ್ನು ನಿನ್ನೆ ಅಭಿಮಾನಿಗಳ ಜೊತೆ ಮಾತನಾಡುತ್ತಾ ವಿಜಯಲಕ್ಷ್ಮಿ ,ದರ್ಶನ್ ಅವ್ರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ. ವೇದಿಕೆ ಮೇಲೆ , ಚಾನಲ್ ಗಳಲ್ಲಿ ಕುತ್ಕೊಂಡು ಮಾತಾಡ್ತಾರೆ. ಜೊತೆಗೆ ಅವ್ರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆಏನೇನೋ ಮಾತಾಡ್ತಾ ಇರ್ತಾರೆ. ಆದ್ರೆ ದರ್ಶನ್ ಅವ್ರು ಬಂದಾಗ ಅವ್ರು ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ ಎಂದಿದ್ದಾರೆ. ಇದೀಗ ದಚ್ಚು ಮಾತಿಗೆ ಕಿಚ್ಚ ಪ್ರತಿಕ್ರಿಯೆ ಕೊಡ್ತಾರಾ ಎಂದು ಕಾದುನೋಡ್ಬೇಕು.
ಇನ್ನು ಕಿಚ್ಚ ಸುದೀಪ್ ಹೇಳಿಕೆ ಬಗ್ಗೆ ನಿರ್ದೇಶಕರೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಬುಕ್ ಮೈ ಶೋಗಳಲ್ಲಿ ಕೆಟ್ಟದಾಗಿ ಕಮೆಂಟ್ಸ್ ಹಾಕೋದು, ಫೇಕ್ ರಿವ್ಯೂಗಳ ಸ್ಕ್ರೀನ್ ಶಾರ್ಟ್ಗಳನ್ನು ಹಾಕೋದು, ಥಿಯೇಟರ್ಗೆ ಬಂದ ಕೆಲವೇ ಗಂಟೆಗಳಲ್ಲಿ ಲಿಂಕ್ಗಳಲ್ಲಿ ಹಾಕುತ್ತಾರೆ. ಇಂತಹವರಿಂದಾಗಿ ಸಿನಿಮಾಗಳು ಹೀನಾಯ ಸ್ಥಿತಿಗೆ ತಲುಪುತ್ತಿವೆ. ಪೈರಸಿ ಮತ್ತು ಸುಳ್ಳು ವಿಮರ್ಶೆ ಮಾಡುವ ಕಿಡಿಗೇಡಿಗಳಿಗೆ ಸುದೀಪ್ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿದ್ದಾರೆ. ಮಾರ್ಕ್, ಡೆವಿಲ್ ಮತ್ತು 45 ಸಿನಿಮಾಗೂ ಪೈರಸಿ ಆಗಬಾರದು. ಇಂತಹವರ ವಿರುದ್ಧ ಹೋರಾಟ ಮಾಡಬೇಕು ಅಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ.

ನೋಡಿರಿ

