ಕಿತ್ತೊಗಿರೋ ಕಾಮೆಂಟ್ಸ್‌ಗೆ ನಾನು ತಲೆ ಕೆಡಿಸಿಕೊಳ್ಳಲ್ಲ! – ಮಗಳು ಸಾನ್ವಿ ಬಗ್ಗೆ ಕೆಟ್ಟ ಕಮೆಂಟ್ ಮಾಡಿದವರಿಗೆ ಕಿಚ್ಚನ ವಾರ್ನ್!

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ರಿಲೀಸ್ ಆಗಿದೆ. ಮಾರ್ಕ್‌ಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದ್ದಂತೆ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಗಳ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವರಿಗೆ ಕಿಚ್ಚ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ವೈಸ್ ಅಲ್ಲ ಈಗ CAPTAIN!!.. ಅಶ್ವಿನಿ ಮುಂದೆ ಗೆದ್ದ ಜಗತ್ ಕಿಲಾಡಿ! – ಗಿಲ್ಲಿ ದರ್ಬಾರ್‌ಗೆ ಮನೆ ಮಂದಿ ಸುಸ್ತು
ನಟ ಕಿಚ್ಚ ಸುದೀಪ್ ತಮ್ಮ ಮಗಳ ಕುರಿತ ಅಸಭ್ಯ ಕಾಮೆಂಟ್‌ಗಳಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಕಿತ್ತೊಗಿರೋ ಕಾಮೆಂಟ್‌ಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದಕ್ಕಿಂತ ನಾವು ಇಲ್ಲಿ ಕೂತು ಚೀಪ್ ವಿಚಾರಗಳ ಬಗ್ಗೆ ಮಾತಾಡದೇ, ಸರಿಯಾದ ಸೆಲೆಬ್ರೇಶನ್ ಮತ್ತು ಸಿನಿಮಾ ಕುರಿತು ಚರ್ಚೆ ಮಾಡೋಣ ಎಂದಿದ್ದಾರೆ.
ನನ್ನ ಬಗ್ಗೆ ಅಥವಾ ನನ್ನ ಮಗಳ ಬಗ್ಗೆ ಮಾತನಾಡಿ ತಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುವವರಿಗಾಗಿ ನಾನು ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನನ್ನ ಮಗಳು ನನ್ನಿಗಿಂತಲೂ ಹೆಚ್ಚು ಸ್ಟ್ರಾಂಗ್. ನಾನು ಜೀವನದಲ್ಲಿ ಎದುರಿಸಿದ ಸಮಸ್ಯೆಗಿಂತ ಹತ್ತುಪಟ್ಟು ಹೆಚ್ಚು ಅವಳು ಫೇಸ್ ಮಾಡುತ್ತಾಳೆ. ಭವಿಷ್ಯದಲ್ಲಿ ಅವಳು ನನ್ನಿಗಿಂತಲೂ ದೊಡ್ಡದಾಗಿ ಹತ್ತರಷ್ಟು ಬೆಳೆಯುತ್ತಾಳೆ ಎಂಬ ವಿಶ್ವಾಸ ನನಗೆ ಇದೆ ಎಂದು ಸುದೀಪ್ ಹೇಳಿದರು.
ಕೆಲವರು ಉದ್ದೇಶಪೂರ್ವಕವಾಗಿ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಸುದೀಪ್ ಪ್ಯಾಂಟ್ ಬಿಟ್ಟರೆ ಬೇರೆ ಏನು ಹಾಕಿಕೊಳ್ಳುವುದಿಲ್ಲ ಎನ್ನುವಂತಹ ಸಿಲ್ಲಿ ಮಾತುಗಳನ್ನು ನಾನು ಮಾಡೋದಿಲ್ಲ. ನಾನು ಬಿಚ್ಚಿ ತೋರಿಸಿಲ್ಲ, ಹಾಗೆ ಮಾಡುವ ಉದ್ದೇಶವೂ ಇಲ್ಲ. ಇಂಟೆಲಿಜೆನ್ಸ್ ಇಂದ ಬಂದಿದೆ ಅಂದ್ರೆ ಮಾಧ್ಯಮ ದಿಂದನೇ ಬಂದಿರಬಹುದು. ನಿಮ್ಮಲ್ಲೇ ಕೂತಿರುವ ಯಾರಾದರೂ ವ್ಯಕ್ತಿ ನನ್ನ ವಿರುದ್ಧ ಆರೋಪ ಮಾಡಬೇಕಾದರೆ, ಅದು ವಿಥ್ ಪ್ರೂಫ್ ಆಗಿರಬೇಕು. ಯಾವುದೇ ಕಮರ್ಷಿಯಲ್ ಉದ್ದೇಶವಿಲ್ಲದೆ ಹೇಳಿರುವುದಾದರೆ ಮಾತ್ರ ನಾನು ಅದನ್ನು ಪರಿಗಣಿಸುತ್ತೇನೆ ಎಂದು ಹೇಳಿದರು.

ನೋಡಿರಿ

