CCLನಲ್ಲಿ ಫಿನಾಲೆ ತಲುಪಿದ ಕಿಚ್ಚ ಸುದೀಪ್ ಟೀಮ್ -ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್‌ಗೆ ಎಂಟ್ರಿ

CCLನಲ್ಲಿ ಫಿನಾಲೆ ತಲುಪಿದ ಕಿಚ್ಚ ಸುದೀಪ್ ಟೀಮ್ -ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್‌ಗೆ ಎಂಟ್ರಿ

ಸಿಸಿಎಲ್ 2024ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕಿಚ್ಚ ಸುದೀಪ್ ಟೀಮ್ ಕರ್ನಾಟಕ ಬುಲ್ಡೋಜರ್ಸ್ ತಂಡ ಫಿನಾಲೆ ತಲುಪಿದೆ. ಬೆಂಗಾಲ್ ಟೈಗರ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಫೈನಲ್‌ಗೆ ಎಂಟ್ರಿಕೊಟ್ಟಿದೆ.

ಇದನ್ನೂ ಓದಿ:ʼಏನು ಹೇಳಲಿ ನಾನು ಹೊಸತರʼ.. – ರೊಮ್ಯಾಂಟಿಕ್‌ ಹಾಡಿಗೆ ಹೆಜ್ಜೆ ಹಾಕಿದ ನಮ್ರತಾ, ಕಿಶನ್‌

ತಿರುವನಂತಪುರದ ಗ್ರೀನ್‌ಫೀಲ್ಡ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಮಧ್ಯೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕಿಚ್ಚ ಸುದೀಪ್ ಟೀಮ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮಾರ್ಚ್ 25ರಂದು ಫೈನಲ್ ಮ್ಯಾಚ್ ನಡೆಯಲಿದೆ.

ಸಿಸಿಎಲ್‌ನ ಫಾರ್ಮ್ಯಾಟ್ ಬೇರೆ ರೀತಿಯಲ್ಲಿ ಇದೆ. 10 ಓವರ್‌ಗಳ ನಾಲ್ಕು ಇನ್ನಿಂಗ್ಸ್ ಇರುತ್ತದೆ. ಈ ಪೈಕಿ ಎರಡೂ ತಂಡಗಳು ಮೊದಲು 10 ಓವರ್ ಆಡಬೇಕು. ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ತಲಾ 10 ಓವರ್ ಆಡಬೇಕು. ಮೊದಲು ಬ್ಯಾಟ್ ಮಾಡಿದ ಬೆಂಗಾಲ್ ಟೈಗರ್ಸ್ 86ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಈ ಸಣ್ಣ ಮೊತ್ತವನ್ನು ಬೆನ್ನು ಹತ್ತಿದ ಸುದೀಪ್ ಪಡೆ 114ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಈ ಮೂಲಕ 28ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಬೆಂಗಾಲ್ ಟೈಗರ್ಸ್ ಒಳ್ಳೆಯ ಪ್ರದರ್ಶನ ನೀಡಿತು. ಎರಡನೇ ಇನ್ನಿಂಗ್ಸ್ ಆಡಿದ ಬೆಂಗಾಲ್ ಟೈಗರ್ಸ್ 127ರನ್ಗೆ 6 ವಿಕೆಟ್ ಕಳೆದುಕೊಂಡಿತು. ಈ ಮೂಲಕ 100 ರನ್ಗಳ ಟಾರ್ಗೆಟ್ನ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆನ್ನು ಹತ್ತಿತು. ಉತ್ತಮ ಆರಂಭ ಕಂಡ ತಂಡ ಇನ್ನೂ ಎರಡು ಓವರ್ ಇರುವಾಗಲೇ ಎರಡು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತು. ಈ ಮೂಲಕ ಫಿನಾಲೆ ಕನಸನ್ನು ನನಸಾಗಿಸಿಕೊಂಡಿತು .

ಈ ಮೊದಲು 2013 ಹಾಗೂ 2014ರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಂ ಸಿಸಿಎಲ್ ಟ್ರೋಫಿ ಗೆದ್ದಿತ್ತು. ಈಗ ಮತ್ತೊಮ್ಮೆ ಗೆಲ್ಲುವ ಕನಸು ಕಾಣುತ್ತಿದೆ.

Sulekha