ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ಕಿಚ್ ಸುದೀಪ್ ಕ್ಯಾರವನ್ – 6.5 ಕೋಟಿ ಕ್ಯಾರವನ್ ವಿಶೇಷತೆಯೇನು ಗೊತ್ತಾ?

ಸೋಷಿಯಲ್ ಮೀಡಿಯಾದಲ್ಲಿ ಕಿಚ್ ಸುದೀಪ್ ಕ್ಯಾರವನ್ ಫುಲ್ ಹವಾ ಎಬ್ಬಿಸಿದೆ. ಕಪ್ಪು ಬಣ್ಣದ ಐಷರಾಮಿ ಕ್ಯಾರವನ್ ಈಗ ಸಖತ್ ಟ್ರೆಂಡಿಂಗ್ನಲ್ಲಿದೆ. ಇದು ಕಿಚ್ಚ ಸುದೀಪ್ ಅವರ ಕ್ಯಾರವನ್ ಆಗಿದ್ದು, ಅವರು ಹೇಳಿದ್ದಂತೆ ವಿನ್ಯಾಸ ಮಾಡಲಾಗಿದೆ.
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಸದ್ಯ ಸ್ಯಾಂಡಲ್ವುಡ್ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬೆಲೆಯ ಕ್ಯಾರವನ್ ಇದಾಗಿದೆ ಎಂದು ಹೇಳಲಾಗುತ್ತಿದೆ. ಈ ಕ್ಯಾರವನ್ನ ಒಟ್ಟು ಬೆಲೆ ಬರೋಬ್ಬರಿ ಸುಮಾರು 6.5 ಕೋಟಿ ರೂಪಾಯಿ. ಖ್ಯಾತ ಡಿಸೈನರ್ ದಿಲೀಪ್ ಛಾಬ್ರಿಯಾ ಅವರು ಕ್ರಿಯೇಟ್ ಮಾಡಿರುವ ‘DC2’ ಸಂಸ್ಥೆಯ ಜಿಮ್ ಮಾಡ್ಯುಲರ್ ಕ್ಯಾರವನ್ ಇದಾಗಿದ್ದು, ಸುದೀಪ್ ಅವರ ಇಷ್ಟಕ್ಕೆ ತಕ್ಕಂತೆ ಇದನ್ನು ಕಸ್ಟಮೈಸ್ ಮಾಡಲಾಗಿದೆ.
ಇದನ್ನೂ ಓದಿ:ಶನಿವಾರ ಏಕರೂಪದ ಶಾಲಾ ಅವಧಿ ಜಾರಿ – ಕರ್ನಾಟಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ
ಮಹಾರಾಷ್ಟ್ರದ ಪುಣೆಯಲ್ಲಿ ಈ ಕ್ಯಾರವಾನ್ ರೆಡಿ ಆಗಿದೆ.ಈ ಐಷಾರಾಮಿ ಕ್ಯಾರವನ್ನ ಮತ್ತೊಂದು ವಿಶೇಷವೆಂದರೆ, ಇದರ ಮೇಲೆ ಕಿಚ್ಚ ಸುದೀಪ್ ಅವರ ಹೆಸರನ್ನು ಸೂಚಿಸುವ ‘K’ (ಕಿಚ್ಚ) ಎಂಬ ಸಿಂಬಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ನಟ ಸುದೀಪ್ ಅವರು ತಮ್ಮ ಕಾರಿನ ಮೇಲೂ ಇದೇ ರೀತಿಯ ಸಿಂಬಲ್ ಹೊಂದಿದ್ದು, ಈಗ ಅದೇ ಲೋಗೋವನ್ನು ತಮ್ಮ ಹೊಸ ಕ್ಯಾರವನ್ ಮೇಲೂ ಹಾಕಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಕ್ಯಾರವನ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.
‘ಬಿಲ್ಲ ರಂಗ ಬಾಷಾ’ ಸಿನಿಮಾದ ಶೂಟಿಂಗ್ ಜೂನ್ 26ರಿಂದ ಭರ್ಜರಿಯಾಗಿ ಶುರು ಆಗಿದೆ. ಸುಮಾರು ಒಂದು ವರ್ಷದ ದೀರ್ಘ ಬಿಡುವಿನ ಬಳಿಕ ಈ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭಗೊಂಡಿದೆ. ಕನಕಪುರದ ಬಳಿ ಬೃಹತ್ ಆದ ಸೆಟ್ ಒಂದನ್ನು ನಿರ್ಮಿಸಲಾಗಿದ್ದು, ಅಲ್ಲಿ ಈ ಸಿನಿಮಾದ ಪ್ರಮುಖ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ.‘ಬಿಲ್ಲ ರಂಗ ಬಾಷಾ’ ಚಿತ್ರದ ಶೂಟಿಂಗ್ ಅಡ್ಡಾಗೆ ಸುದೀಪ್ ಅವರ ಈ ಕಾಸ್ಟ್ಲಿ ಕ್ಯಾರವನ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ.

ನೋಡಿರಿ

