ಬಿಗ್‌ ಬಾಸ್‌ ಗೆ ಸುದೀಪ್‌ ಗುಡ್‌ ಬೈ! – ಶೋನಲ್ಲಿ ಮೋಸ, ಅನ್ಯಾಯ, ಬೇಸರ.. ಕಿಚ್ಚ ಶೋ ಬಿಡಲು ಇದೇನಾ ಕಾರಣ?

ಬಿಗ್‌ ಬಾಸ್‌ ಗೆ ಸುದೀಪ್‌ ಗುಡ್‌ ಬೈ! – ಶೋನಲ್ಲಿ ಮೋಸ, ಅನ್ಯಾಯ, ಬೇಸರ.. ಕಿಚ್ಚ ಶೋ ಬಿಡಲು ಇದೇನಾ ಕಾರಣ?

ಬಿಗ್‌ ಬಾಸ್‌.. ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ.. ಕಳೆದ 11 ವರ್ಷದಿಂದ ಕನ್ನಡದಲ್ಲಿ ಬಿಗ್‌ ಬಾಸ್‌ ಶೋ ವೀಕ್ಷಕರನ್ನ ಮನರಂಜಿಸಿದೆ. ಬಿಗ್‌ ಬಾಸ್‌ ಕನ್ನಡ ಅಂದಾಗ ನಮಗೆ ನೆನಪಾಗೋದೇ ಕಿಚ್ಚ ಸುದೀಪ್‌. 11 ಸೀಸನ್‌ ಗಳನ್ನ ಅಚ್ಚುಕಟ್ಟಾಗಿ ಹೋಸ್ಟ್‌ ಮಾಡ್ತಾ ಬಂದಿದ್ದಾರೆ.. ಆದ್ರೆ ಮುಂದಿನ ಸೀಸನ್‌ ಗಳಿಂದ ಕಿಚ್ಚ ಸುದೀಪ್‌ ಶೋನ ಹೋಸ್ಟ್‌ ಮಾಡ್ತಿಲ್ಲ.. ‘ ನಾನು ಹೋಸ್ಟ್ ಆಗಿ ನಡೆಸಿಕೊಡುವ ಕಟ್ಟ ಕಡೆಯ ಫಿನಾಲೆ ಇದೇ ಅಂತಾ ಹೇಳಿಕೊಂಡಿದ್ದಾರೆ ಬಾದ್‌ ಷಾ.. ಅಷ್ಟಕ್ಕೂ ಸುದೀಪ್‌ ಬಿಗ್‌ ಬಾಸ್‌ ಬಿಡುವ ನಿರ್ಧಾರ ಮಾಡಿದ್ದು ಯಾಕೆ? ಕಾರಣ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಲಿಕಾ ಬಕ್ರಾವಾದ್ರಾ ಧನು.. ಬಿಗ್‌ “ಮೋಸವಾಯ್ತಾ” ಬಾಸ್?‌  – ರಜತ್‌ ಗಿಂತ ಗೌತಮಿ ವೀಕಾ?

ಬಿಗ್ ಬಾಸ್ ಕನ್ನಡ ಸೀಸನ್‌ 11 ಅಂತಿಮ ಘಟ್ಟ ತಲುಪಿದೆ. ಗ್ರ್ಯಾಂಡ್ ಫಿನಾಲೆ ವಾರ ನಡಿತಿದೆ. ಇದೇ ಶನಿವಾರ ಹಾಗೂ ಭಾನುವಾರ ಅಂದ್ರೆ ಜನವರಿ 25 ಮತ್ತು 26 ರಂದು ‘ಬಿಗ್ ಬಾಸ್ ಕನ್ನಡ ಸೀಸನ್‌ 11 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಕಳೆದ 11 ವರ್ಷಗಳಿಂದ ಬಾದ್‌ಷಾ ಕಿಚ್ಚ ಸುದೀಪ್‌ ಕಾರ್ಯಕ್ರಮ ಹೋಸ್ಟ್‌ ಮಾಡ್ತಾ ಬಂದಿದ್ರು.. ಕರುನಾಡಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಕಾರಣ ಸುದೀಪ್. ಹನ್ನೊಂದು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮವಹಿಸಿದ್ರು.. ಎಲ್ಲೇ ಇರ್ಲಿ.. ಎಷ್ಟು ದೊಡ್ಡ ಕೆಲಸವೇ ಇರ್ಲಿ.. ಬಿಗ್‌ ಬಾಸ್‌ ವಿಚಾರದಲ್ಲಿ ಸುದೀಪ್‌ ಕಾಂಪ್ರಮೈಸ್‌ ಮಾಡ್ಕೊಳ್ತಿರ್ಲಿಲ್ಲ.. ಪ್ರತಿ ಶನಿವಾರ ವೀಕ್ಷಕರ ಮುಂದೆ ಕಿಚ್ಚ ಹಾಜರ್‌ ಆಗ್ತಿದ್ರು.. ಆದ್ರೀಗ ಸುದೀಪ್‌ ಬಿಗ್‌ ಬಾಸ್‌ ಶೋಗೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ.  ಈ ಬಗ್ಗೆ ಸುದೀಪ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.  ಕಳೆದ 11 ಸೀಸನ್‌ಗಳಿಂದ ನಾನು ‘ಬಿಗ್ ಬಾಸ್‌’ ಕಾರ್ಯಕ್ರಮವನ್ನ ಖುಷಿಯಿಂದ ನಡೆಸಿಕೊಟ್ಟಿದ್ದೇನೆ. ನೀವೆಲ್ಲರೂ ತೋರಿದ ಪ್ರೀತಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಹೋಸ್ಟ್ ಆಗಿ ನಾನು ನಡೆಸಿಕೊಡುವ ಕಡೆಯ ಫಿನಾಲೆ ಇದು. ನಿಮ್ಮೆಲ್ಲರಿಗೂ ಮನರಂಜನೆ ನೀಡಲು ನಾನು ನನ್ನ ಬೆಸ್ಟ್ ನೀಡುತ್ತೇನೆ. ಇದು ಖಂಡಿತವಾಗಿಯೂ ಅವಿಸ್ಮರಣೀಯ ಪಯಣ. ಈ ಕಾರ್ಯಕ್ರಮವನ್ನ ನನ್ನ ಕೈಲಾದಷ್ಟು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕೆ ನನಗೆ ಖುಷಿಯಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ನನ್ನ ಧನ್ಯವಾದಗಳು ಎಂದು ಎಕ್ಸ್‌ನಲ್ಲಿ ಕಿಚ್ಚ ಸುದೀಪ್‌ ಪೋಸ್ಟ್ ಮಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಆರಂಭದಲ್ಲೇ ಕಿಚ್ಚ ಸುದೀಪ್‌ ಮುಂದಿನ ಸೀಸನ್‌ ನಿಂದ ಶೋ ನಡೆಸಿಕೊಡೋದಿಲ್ಲ ಅಂತಾ  ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿ ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಬಿಗ್‌ ಬಾಸ್‌ ಸೀಸನ್‌ ಶೋ ನಡೆಸಲು ಒಪ್ಪಿಗೆ ನೀಡಿದ್ದರು. ಅದಾದ್ಮೇಲೆ ಕೆಲ ಸಂದರ್ಶನಗಳಲ್ಲಿ ತನ್ನ ರೆಸಿಗ್ನೇಷನ್‌ ಲೆಟರ್‌ ಅನ್ನ ಕಲರ್ಸ್‌ ಕನ್ನಡದವರು ಇನ್ನೂ ಅಪ್ರೂವ್‌ ಮಾಡಿಲ್ಲ ಅಂತಾ ಹೇಳ್ತಾ ಬಂದಿದ್ರು.. ಇವ್ರ ಮಾತು ಕೇಳಿದ ಫ್ಯಾನ್ಸ್‌ ಮುಂದಿನ ಸೀಸನ್‌ ಗಲ್ಲೂ ಸುದೀಪ್‌ ಶೋ  ನಡೆಸುತ್ತಾರೆ ಅಂತಾ ಭಾವಿಸಿದ್ರು.. ಆದ್ರೆ ಸುದೀಪ್‌ ಇದೇ ತನ್ನ ಕಡೆಯ ಶೋ ಅಂತಾ ಅಧಿಕೃತವಾಗಿ ಅನೌನ್ಸ್‌ ಮಾಡಿದ್ದಾರೆ.

ಇದೀಗ ಫ್ಯಾನ್ಸ್‌ ಸುದೀಪ್‌ ಶೋ ಬಿಡಲು ಕಾರಣ ಏನು ಅಂತಾ ಚರ್ಚೆ ಮಾಡ್ತಾ ಇದ್ದಾರೆ.. ಬಿಗ್‌ ಬಾಸ್‌ ನಲ್ಲಿ ಮೋಸ, ಅನ್ಯಾಯವೇ ನಡಿತಾ ಇದೆ.. ಇದು ಸುದೀಪ್ ಗೂ ಇಷ್ಟ ಆಗ್ತಿಲ್ಲ ಅಂತಾ ಕೆಲವರು ಕಾಮೆಂಟ್‌ ಮಾಡ್ತಿದ್ದಾರೆ. ಭಾರತೀಯ ಕಿರುತೆರೆ ಕಂಡ ಬೆಸ್ಟ್ ಹೋಸ್ಟ್ ನೀವು.. ನಿಮಗೆ ಸರಿಸಾಟಿ ಯಾರೂ ಇಲ್ಲ..  ಬಿಗ್ ಬಾಸ್‌ ನ ನಾವು ನೋಡ್ತಾ ಇದ್ದಿದ್ದಕ್ಕೆ ಕಾರಣವೇ ನೀವು. ನೀವಿಲ್ಲದೆ ಬಿಗ್ ಬಾಸ್‌ನ ನಾವು ಕಲ್ಪನೆ ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮಿಸ್ ಯೂ   ಬಾಸ್.. ನಿಮ್ಮ ತಾಯಿಯ ಅಚ್ಚುಮೆಚ್ಚಿನ ಶೋನ ನೀವು ಅಷ್ಟು ಸುಲಭವಾಗಿ ಬಿಡೋದಿಲ್ಲ ಅಂತ ನಮಗೂ ಗೊತ್ತು.. ಅಂತ ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

ಇನ್ನು ಸುದೀಪ್‌   ಮ್ಯಾಕ್ಸ್‌ ಸಿನಿಮಾದ ಸಂದರ್ಶನದಲ್ಲಿ ಬಿಗ್‌ ಬಾಸ್‌ ಬಗ್ಗೆ ಮಾತನಾಡಿದ್ರು..  ಎಷ್ಟು ಮಾಡುವುದು? ಎಲ್ಲರನ್ನೂ ರಿಪೇರಿ ಮಾಡುತ್ತಾ ಕುಳಿತುಕೊಳ್ಳಲು ನಾನು ಬಂದಿದ್ದೀನಾ? ಬೇರೆ ಕೆಲಸಗಳು ಇರುತ್ತವೆ. ತುಂಬ ಶ್ರಮ ಬೇಕು. ಅದು ಯಾರಿಗೂ ಅರ್ಥ ಆಗುತ್ತಿಲ್ಲ.. ಬಿಗ್ ಬಾಸ್ ಜವಾಬ್ದಾರಿ ನನ್ನ ಮೇಲೆ ಬಂದಾಗ ನೀಟ್‌ ಆಗಿ ತಗೊಂಡು ಇಲ್ಲಿಯವರೆಗೆ ಬಂದಿದ್ದೇನೆ. ಎಲ್ಲೂ ಬೀಳದ ಹಾಗೆ ನೋಡಿಕೊಂಡಿದ್ದೇನೆ. ಹಾಗಂದ ಮಾತ್ರಕ್ಕೆ ಪ್ರತಿ ಸೀಸನ್‌ಗೂ ನಾನೇ ಜವಾಬ್ದಾರಿ ಅಲ್ಲ.  ಬಿಗ್ ಬಾಸ್ ಚೆನ್ನಾಗಿ ಆಗಲಿ. ಬಟ್‌.. ಕನ್ನಡ ಇನ್ನೊಂಚೂರು ಇಂಪ್ರೂವ್ ಆಗಬೇಕಿದೆ. ಬೇರೆ ಭಾಷೆಯ ಬಿಗ್ ಬಾಸ್‌  ಕಾರ್ಯಕ್ರಮಗಳನ್ನ ಅಕ್ಕ-ಪಕ್ಕ ಇಟ್ಟಾಗ ಕನ್ನಡ ಬಿಗ್ ಬಾಸ್‌ನಲ್ಲಿ ಸ್ವಲ್ಪ ಕೊರತೆ ಇದೆ ಅಂತ ಅನಿಸ್ತಾ ಇದೆ. ಇನ್ನೂ ಚೆನ್ನಾಗಿ ಆಗಬೇಕು.   ಇನ್ನೊಂಚೂರು ಕಾನ್ಸನ್‌ಟ್ರೇಟ್ ಮಾಡಬೇಕು ಅಂತಾ ಹೇಳಿದ್ರು..

ಟೈಟ್ ಶೆಡ್ಯೂಲ್‌ನಿಂದಾಗಿಯೂ ಬಿಗ್ ಬಾಸ್  ತೊರೆಯಲು ಕಿಚ್ಚ ಸುದೀಪ್ ನಿರ್ಧರಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಮುಂದಿನ ಸೀಸನ್‌ ಗಳಲ್ಲಿ ಸುದೀಪ್‌ ಬದಲು ಬೇರೆ ಯಾರು ಹೋಸ್ಟ್‌ ಆಗಿ ಬರ್ತಾರೆ.. ಇನ್ನು ಮುಂದೆ ಶೋ ಹೇಗಿರಲಿದೆ ಅನ್ನೋದೇ ವೀಕ್ಷಕರ ಮುಂದಿರುವ ಪ್ರಶ್ನೆ.

Shwetha M

Leave a Reply

Your email address will not be published. Required fields are marked *