ಕಿಚ್ಚ ಸುದೀಪ್ ಮುಂದೆ ಗಿಲ್ಲಿ ಹವಾ – ಕುಣಿಗಲ್ ಉತ್ಸವದಲ್ಲಿ ಗಿಲ್ಲಿ ನಟನಿಗೆ ಜೈಕಾರ

ಕಿಚ್ಚ ಸುದೀಪ್ ಮುಂದೆ ಗಿಲ್ಲಿ ಹವಾ – ಕುಣಿಗಲ್ ಉತ್ಸವದಲ್ಲಿ ಗಿಲ್ಲಿ ನಟನಿಗೆ ಜೈಕಾರ

ಬಿಗ್‌ಬಾಸ್ ರಿಯಾಲಿಟಿ ಶೋ ಈಗ ಅಂತಿಮ ಹಂತಕ್ಕೆ ಬಂದಿದೆ. ಯಾರಿಗೆ ಗೆಲುವು ಸಿಗಲಿದೆ ಎಂಬ ಬಗ್ಗೆ ಚರ್ಚೆಯೂ ಜೋರಾಗಿಯೇ ಸಾಗುತ್ತಿದೆ. ಇದರ ಮಧ್ಯೆ ಕಿಚ್ಚ ಸುದೀಪ್ ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಿರುವ ವಿಚಾರಕ್ಕೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಮಧ್ಯೆಯೇ ಕಿಚ್ಚ ಸುದೀಪ್ ಎದುರೇ ಅಭಿಮಾನಿಗಳು ಗಿಲ್ಲಿನಟನಿಗೆ ಜೈಕಾರ ಹಾಕಿದ್ದಾರೆ.

ಇದನ್ನೂ ಓದಿ:ಸೋಲಬಹುದು.. ಸತ್ತಿಲ್ಲ – ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಬೇಜಾರಾಗಿದ್ದು ಯಾಕೆ?

ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕುಣಿಗಲ್ ಉತ್ಸವಕ್ಕೆ ತೆರಳಿದ್ದರು. ವೇದಿಕೆ ಮೇಲೆ ಮಾತನಾಡುವಾಗ ಅವರು ಬಿಗ್ ಬಾಸ್ ವಿಷಯವನ್ನು ಪ್ರಸ್ತಾಪ ಮಾಡಿದರು. ಈ ವಾರ ಫಿನಾಲೆ ನೋಡ್ತಾ ಇದೀರಾ ಎಂದು ಕಿಚ್ಚ ಸುದೀಪ್ ಕೇಳಿದರು. ಆಗ ಸೇರಿದ್ದ ಅನೇಕರು ಗಿಲ್ಲಿ ಗಿಲ್ಲಿ ಎಂದು ಘೋಷಣೆ ಕೂಗಿದರು. ಆಗ ಸುದೀಪ್ ಅವರು  ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ ಎಂದು ಹೇಳಿದರು. ಜೊತೆಗೆ ಕಿಚ್ಚ ಸುದೀಪ್, ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧಿಗಳ ಅಭಿಮಾನಿಗಳ ನಡುವಿನ ಕಿತ್ತಾಟದ ಬಗ್ಗೆ ಪ್ರಸ್ತಾಪಿಸಿದರು.

ಗಿಲ್ಲಿ ನಟನ ಬಿಗ್‌ಬಾಸ್ ಮನೆಯೊಳಗಿನ ಆಟವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಗಿಲ್ಲಿಗಾಗಿ ಸೋಶಿಯಲ್ ಮೀಡಿಯಾದಲ್ಲೂ ಅಬ್ಬರದ ಪ್ರಚಾರ ನಡೆಯುತ್ತಿದೆ. ಇದೀಗ ಕಿಚ್ಚ ಸುದೀಪ್ ಕೂಡಾ ಗಿಲ್ಲಿ ಹವಾ ಹೇಗಿದೆ ಅನ್ನೋದನ್ನ ಕಣ್ಣಾರೆ ಕಂಡಿದ್ದಾರೆ.

ಶನಿವಾರ ಹಾಗೂ ಭಾನುವಾರ ಬಿಗ್‌ಬಾಸ್ ಫಿನಾಲೆ ಎಪಿಸೋಡ್ ಪ್ರಸಾರ ಕಾಣಲಿದೆ. ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿದೆ.

Sulekha