ಕಿಯಾರಾಗೆ ₹2 ಕೋಟಿ ಮೌಲ್ಯದ ಮಾಂಗಲ್ಯ ಕಟ್ಟಿದ ಸಿದ್ಧಾರ್ಥ್ – ಅಬ್ಬಬ್ಬಾ ಏನಿದರ ಸ್ಪೆಷಾಲಿಟಿ..!?

ಕಿಯಾರಾಗೆ ₹2 ಕೋಟಿ ಮೌಲ್ಯದ ಮಾಂಗಲ್ಯ ಕಟ್ಟಿದ ಸಿದ್ಧಾರ್ಥ್ – ಅಬ್ಬಬ್ಬಾ ಏನಿದರ ಸ್ಪೆಷಾಲಿಟಿ..!?

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್​ನಲ್ಲಿದೆ. ಈ ನಡುವೆ ಮತ್ತೊಂದು ವಿಚಾರ ಭಾರೀ ಸದ್ದು ಮಾಡ್ತಿದೆ.

ಇದನ್ನೂ ಓದಿ :‘ಶಾಕುಂತಲಂ’ ಚಿತ್ರದ ರಿಲೀಸ್ ಡೇಟ್ 3ನೇ ಸಲ ಘೋಷಣೆ – ಸಮಂತಾ ಚಿತ್ರ ಯಾವಾಗ ಬಿಡುಗಡೆ..!?

ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಕಪಲ್ ಅಂತಾನೇ ಸುದ್ದಿಯಾಗ್ತಿರೋ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಅದ್ರಲ್ಲೂ ಬಾಲಿವುಡ್ ಕ್ಯೂಟ್ ನಟಿ ಕಿಯಾರಾ ಧರಿಸಿರುವ ಮಾಂಗಲ್ಯದ ಬೆಲೆ ಬಗ್ಗೆಯೇ ಎಲ್ರೂ ಮಾತಾಡಿಕೊಳ್ತಿದ್ದಾರೆ.

ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಬಾಲಿವುಡ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿದ್ಧಾರ್ಥ್ ಹಾಗೂ ಕಿಯಾರಾ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಫೋಟೋಗಳಾಗಿವೆ. ಈ ಮೂಲಕ ಜೋಡಿ ಆಲಿಯಾ-ರಣಬೀರ್ ರೆಕಾರ್ಡ್ ಮುರಿದಿದ್ದಾರೆ.

ಇದೀಗ ನಟಿ ಕಿಯಾರಾ ಅಡ್ವಾಣಿ ಅವರ ಮಾಂಗಲ್ಯದ ಬಗ್ಗೆ ಚರ್ಚೆ ಮಾಡ್ತಿದ್ದಾರೆ ಜನ. ನೆಟ್ಟಿಗರು ಕಿಯಾರಾ ಧರಿಸಿದ ಮಾಂಗಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ.

ಚಿನ್ನದ ಸರದಲ್ಲಿ ಕಪ್ಪು ಮಣಿಗಳನ್ನು ಹೊಂದಿರುವ ಕಿಯಾರಾ ಅವರ ಮಾಂಗಲ್ಯ ಮತ್ತು ಮಧ್ಯದಲ್ಲಿ ಡಿಸೈನರ್ ಶೈಲಿಯಲ್ಲಿ ಪೋಣಿಸಿದ ವಜ್ರವು ಬಹಳ ಜನಪ್ರಿಯವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಕಿಯಾರಾ ಅಡ್ವಾಣಿ ಅವರ ಮಂಗಳಸೂತ್ರವನ್ನು ಪ್ರಸಿದ್ಧ ಡಿಸೈನರ್ ಸಬ್ಯಸಾಚಿ ವಿನ್ಯಾಸಗೊಳಿಸಿದ್ದಾರೆ.

ಕಿಯಾರಾ ಅವರ ಈ ಮಂಗಳಸೂತ್ರದ ಬೆಲೆ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಸಿದ್ಧಾರ್ಥ್ ತಮ್ಮ ಪತ್ನಿಯ ಮಂಗಳಸೂತ್ರಕ್ಕಾಗಿ 2 ಕೋಟಿ ರೂ. ವ್ಯಯಿಸಿದ್ದಾರೆ. ಈ ಜೋಡಿ ಸದ್ಯ ಮುಂಬೈನಲ್ಲಿದ್ದಾರೆ. ಇಬ್ಬರೂ ಸಾಲು ಸಾಲು ಪ್ರಾಜೆಕ್ಟ್​ಗಳನ್ನು ಹೊಂದಿದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ.

suddiyaana