3ನೇ ಟೆಸ್ಟ್ ಆಡೋದಿಲ್ವಾ ಜಸ್ಪ್ರಿತ್ ಬುಮ್ರಾ? – ಕೊಹ್ಲಿನೂ ಆಡಲ್ವಾ?

3ನೇ ಟೆಸ್ಟ್ ಆಡೋದಿಲ್ವಾ ಜಸ್ಪ್ರಿತ್ ಬುಮ್ರಾ? – ಕೊಹ್ಲಿನೂ ಆಡಲ್ವಾ?

ಈ ಟೆಸ್ಟ್​ ಸೀರಿಸ್​​ನಲ್ಲಿ ಇಂಗ್ಲೆಂಡ್ ಪಾಲಿಗೆ ಅತೀ ದೊಡ್ಡ ಸವಾಲಾಗಿರೋದು ಅಂದ್ರೆ ಅದು ಜಸ್ಪ್ರಿತ್ ಬುಮ್ರಾ. ಭಾರತದ ಗೆಲುವಿಗೆ ಮೇನ್ ರೀಸನ್ ಆಗಿದ್ದ ಜಸ್ಪ್ರಿತ್ ಬುಮ್ರಾಗೆ ಸೆಕೆಂಡ್ ಮ್ಯಾಚ್​​ನಲ್ಲಿ ಮ್ಯಾನ್​​ ಆಫ್ ದಿ ಮ್ಯಾಚ್ ಕೂಡ ಸಿಕ್ಕಿತ್ತು. ಬುಮ್ರಾ ಬೌಲಿಂಗ್​​ನ್ನ ಫೇಸ್​ ಮಾಡೋಕೆ ಇಂಗ್ಲೆಂಡ್ ಬ್ಯಾಟ್ಸ್​​ಮನ್​ಗಳು ಒದ್ದಾಡ್ತಾ ಇದ್ದಾರೆ. ಆದ್ರೆ 3ನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್​ ಬ್ಯಾಟ್ಸ್​​ಮನ್​ಗಳಿಗೆ ಒಂದಷ್ಟು ರಿಲೀಫ್ ಸಿಗೋ ಸಾಧ್ಯತೆ ಕೂಡ ಇದೆ. ಯಾಕಂದ್ರೆ ರಾಜ್​ಕೋಟ್​ ಟೆಸ್ಟ್​​ನಲ್ಲಿ ಜಸ್ಪ್ರಿತ್ ಬುಮ್ರಾಗೆ ರೆಸ್ಟ್ ನೀಡೋ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಚಿಂತನೆ ನಡೆಸ್ತಾ ಇದೆ. ಸೆಕೆಂಡ್ ಟೆಸ್ಟ್​ನಲ್ಲಿ ಬುಮ್ರಾ ಒಟ್ಟು 32 ಓವರ್​ ಬೌಲಿಂಗ್ ಮಾಡಿದ್ರು. ಬುಮ್ರಾ ಬೌಲಿಂಗ್​ ಶೈಲಿಯೂ ಕಂಪ್ಲೀಟ್ಲಿ ಡಿಫರೆಂಟ್. ಈ ರೀತಿ ಬೌಲಿಂಗ್​ ಮಾಡೋವಾಗ ಎಕ್ಸ್​​ಟ್ರಾ ಎನರ್ಜಿ ಬೇಕಾಗುತ್ತೆ. 32 ಓವರ್ ಬೌಲಿಂಗ್ ಮಾಡಿದ್ದಾರೆ ಅಂದ್ರೆ ಅದು ಫಾಸ್ಟ್​ ಬೌಲರ್​​, ಎಸ್ಪೆಷಲಿ ಬುಮ್ರಾಗೆ ಹೆವೀನೆ. ನಿಮಗೆ ಗೊತ್ತಿರೋ ಹಾಗೆ, ಈ ಹಿಂದೆ ಹಲವು ಬಾರಿ ಬುಮ್ರಾ ಇಂಜ್ಯೂರಿಗೆ ಒಳಗಾಗಿದ್ರು. ಅದಕ್ಕೆ ಒಂದು ಮೇನ್​ ರೀಸನ್​ ಅವರ ಬೌಲಿಂಗ್ ಶೈಲಿಯೇ. ಹೀಗಾಗಿ ಕೇವಲ ಮ್ಯಾಚ್​​ಗಳನ್ನ ಆಡೋದಷ್ಟೇ ಅಲ್ಲ, ಅದೇ ಪ್ರಮಾಣದಲ್ಲಿ ಬುಮ್ರಾಗೆ ರೆಸ್ಟ್​ ಕೂಡ ಅನಿವಾರ್ಯ. NEXT ಐಪಿಎಲ್​​ ಇದೆ. ನಂತರ ಟಿ20 ವರ್ಲ್ಡ್​​ಕಪ್ ಬರುತ್ತೆ. ಹೀಗಾಗಿ ಟೀಂ ಇಂಡಿಯಾದ ಕೀ ಬೌಲರ್​ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುವಂತೆಯೇ ಇಲ್ಲ. ನಮ್ಮ ಬೌಲಿಂಗ್​ ಡಿಪಾರ್ಟ್​​​ಮೆಂಟ್​ನ ದೊಡ್ಡ ಅಸೆಟ್ ಅಂದ್ರೆ ಅದು ಬುಮ್ರಾ. ಸೋ ಈಗ ಮೂರನೇ ಟೆಸ್ಟ್​​ನಲ್ಲಿ ಜಸ್ಪ್ರಿತ್​​ ಬುಮ್ರಾ​ಗೆ ರೆಸ್ಟ್​ ನೀಡಿದ್ರೂ ಆಶ್ಚರ್ಯ ಇಲ್ಲ. ಈಗ ಸೆಕೆಂಡ್​ ಮ್ಯಾಚ್​​ನಲ್ಲಿ ಮೊಹಮ್ಮದ್ ಸಿರಾಜ್​ಗೆ ರೆಸ್ಟ್​ ನೀಡಲಾಗಿತ್ತು. ಹೀಗಾಗಿ ಮೂರನೇ ಮ್ಯಾಚ್​ಗೆ ಬುಮ್ರಾಗೆ ರೆಸ್ಟ್​ ನೀಡಿ, ಸಿರಾಜ್​​​ರನ್ನ ಮತ್ತೆ ಪಿಕ್ ಮಾಡುವ ಚಾನ್ಸ್ ಇದೆ. ಇಲ್ಲಿ ಟೀಂ ಇಂಡಿಯಾ ಮಿಸ್ ಮಾಡಿಕೊಳ್ತಾ ಇರೋದು ಮೊಹಮ್ಮದ್ ಶಮಿಯನ್ನ. ಆ್ಯಂಕಲ್ ಇಂಜ್ಯೂರಿಗೆಗೊಳಗಾಗಿರೋ ಶಮಿಯನ್ನ ಬಿಸಿಸಿಐ ಲಂಡನ್​​ಗೆ ಕಳುಹಿಸಿತ್ತು. ಅಲ್ಲಿ ಶಮಿಗೆ ಟ್ರೀಟ್​ಮೆಂಟ್ ನೀಡಲಾಗಿದೆ. ಆದ್ರೆ ಶಮಿ ಕಂಪ್ಲೀಟ್ ರಿಕವರಿ ಆಗೋಕೆ ತುಂಬಾ ಟೈಮ್​ ತಗೊಳ್ಬಹುದಂತೆ. ಹೀಗಾಗಿ ಐಪಿಎಲ್​​ ವೇಳೆಗೆ ಕಮ್​ಬ್ಯಾಕ್​ ಮಾಡ್ತಾರೆ ಅನ್ನೋದು ಕೂಡ ಕನ್ಫರ್ಮ್​ ಇಲ್ಲ. ಇದೇ ಕಾರಣಕ್ಕೆ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್​​ರನ್ನ ತುಂಬಾ ಕೇರ್​ಫುಲ್ ಆಡಿಸ್ತಾ ಇದ್ದಾರೆ. ಮಿಡ್ಲ್​​ಲ್ಲಿ ರೆಸ್ಟ್​ ಕೊಟ್ಟು, ಇಂಜ್ಯೂರಿಗೊಳಗಾಗದಂತೆ ಎಚ್ಚರಿಕೆ ವಹಿಸಲಾಗ್ತಾ ಇದೆ.

ಇದನ್ನೂ ಓದಿ: ಮದುವೆಯಾದ ಮೂರೇ ದಿನಕ್ಕೆ ತವರು ಸೇರಿದ ಪತ್ನಿ – ಮನನೊಂದು ಆತ್ಮಹತ್ಯೆಗೆ ಶರಣಾದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ

ಇನ್ನು ​ವಿರಾಟ್ ಕೊಹ್ಲಿ ಬಗ್ಗೆ ಹೇಳೋದಾದ್ರೆ, ಇಂಗ್ಲೆಂಡ್​ ವಿರುದ್ಧ ಇನ್ನೂ ಮೂರು ಟೆಸ್ಟ್​ ಮ್ಯಾಚ್​ಗಳಲ್ಲಿ ಕೊಹ್ಲಿ ಅವೈಲೇಬಲ್​ ಇದ್ದಾರಾ ಅನ್ನೋದು ಇನ್ನೂ ಕೂಡ ಗ್ಯಾರಂಟಿ. ಈ ಬಗ್ಗೆ ರಾಹುಲ್​​ ದ್ರಾವಿಡ್​​ರನ್ನ ಕೂಡ ಕ್ವಶ್ಚನ್ ಮಾಡಲಾಗಿತ್ತು. ಆದ್ರೆ ದ್ರಾವಿಡ್ ಇದಕ್ಕೆ ಸೆಲೆಕ್ಟರ್ಸ್​ಗಳೇ ಆನ್ಸರ್​ ಮಾಡಬೇಕಿದೆ ಎಂದಿದ್ದಾರೆ. ಬಟ್ ಈ ವಿಚಾರದಲ್ಲಿ ವಿರಾಟ್​​ ಕೊಹ್ಲಿಯನ್ನ ಕಾಂಟ್ಯಾಕ್ಟ್ ಮಾಡಿ ಚರ್ಚಿಸೋದಾಗಿಯೂ ದ್ರಾವಿಡ್ ಹೇಳಿದ್ದಾರೆ. ಕೆಲ ಸೋರ್ಸ್​​ಗಳ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ಭಾರತದಲ್ಲೇ ಇಲ್ಲ. ಇನ್ನುಳಿದ ಮೂರೂ ಟೆಸ್ಟ್​​ ಮ್ಯಾಚ್​ಗಳಲ್ಲು ಕೊಹ್ಲಿ ಆಡೋದಿಲ್ಲ ಅಂತಾನೂ ಸಾಕಷ್ಟು ಸುದ್ದಿಗಳು ಸ್ಪ್ರೆಡ್ ಆಗ್ತಿದೆ. ಬಟ್ ಈ ಬಗ್ಗೆ ಯಾವುದೇ ಕ್ಲ್ಯಾರಿಟಿ ಸಿಕ್ಕಿಲ್ಲ.

ಇನ್ನು ಇಂಗ್ಲೆಂಡ್ ವಿರುದ್ಧ ಸೆಕೆಂಡ್​ ಟೆಸ್ಟ್​ ಮ್ಯಾಚ್​​ನಲ್ಲಿ ರವೀಂದ್ರ ಜಡೇಜ ಮತ್ತು ಕೆಎಲ್ ರಾಹುಲ್ ಆಡಿರಲಿಲ್ಲ. ಈ ಪೈಕಿ ರವೀಂದ್ರ ಜಡೇಜ ಮೂರನೇ ಟೆಸ್ಟ್​ಗೆ​ ಅವೈಲೇಬಲ್ ಆಗೋದು ಡೌಟ್. ಇನ್ನೂ ಕೂಡ ಕಂಪ್ಲೀಟ್ ಫಿಟ್ ಆಗಿಲ್ವಂತೆ. ಮತ್ತೊಂದೆಡೆ ರಾಹುಲ್​​ ಮೂರನೇ ಟೆಸ್ಟ್​ಗೆ ಕಮ್​​ಬ್ಯಾಕ್ ಮಾಡೋ ಸಾಧ್ಯತೆ ಇದೆ. ಆದ್ರೆ ಇನ್ನುಳಿದ ಮೂರು ಟೆಸ್ಟ್​ಗಳಿಗೂ ಟೀಂ ಅನೌನ್ಸ್ ಆಗ್ಬೇಕಿದೆ. ಸೆಕೆಂಡ್ ಟೆಸ್ಟ್ ಗೆದ್ದ ಬಳಿಕ ರೋಹಿತ್ ಶರ್ಮಾ ಮತ್ತು ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್​ಕರ್​​​ ಗ್ರೌಂಡ್​​ನಲ್ಲೇ ಡೀಪ್​ ಡಿಸ್ಕಷನ್ ಮಾಡ್ತಾ ಇದ್ರು. ಫೆಬ್ರವರಿ 15ರಿಂದ ರಾಜ್​​ಕೋಟ್​ನಲ್ಲಿ ಮೂರನೇ ಟೆಸ್ಟ್ ಶುರುವಾಗುತ್ತೆ. ಹೀಗಾಗಿ ಯಾವ ಬೇಕಿದ್ರೂ ಟೀಂ ಅನೌನ್ಸ್ ಆಗಬಹುದು.

Shwetha M