3ನೇ ಟೆಸ್ಟ್ ಆಡೋದಿಲ್ವಾ ಜಸ್ಪ್ರಿತ್ ಬುಮ್ರಾ? – ಕೊಹ್ಲಿನೂ ಆಡಲ್ವಾ?

ಈ ಟೆಸ್ಟ್ ಸೀರಿಸ್ನಲ್ಲಿ ಇಂಗ್ಲೆಂಡ್ ಪಾಲಿಗೆ ಅತೀ ದೊಡ್ಡ ಸವಾಲಾಗಿರೋದು ಅಂದ್ರೆ ಅದು ಜಸ್ಪ್ರಿತ್ ಬುಮ್ರಾ. ಭಾರತದ ಗೆಲುವಿಗೆ ಮೇನ್ ರೀಸನ್ ಆಗಿದ್ದ ಜಸ್ಪ್ರಿತ್ ಬುಮ್ರಾಗೆ ಸೆಕೆಂಡ್ ಮ್ಯಾಚ್ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಕೂಡ ಸಿಕ್ಕಿತ್ತು. ಬುಮ್ರಾ ಬೌಲಿಂಗ್ನ್ನ ಫೇಸ್ ಮಾಡೋಕೆ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಒದ್ದಾಡ್ತಾ ಇದ್ದಾರೆ. ಆದ್ರೆ 3ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಒಂದಷ್ಟು ರಿಲೀಫ್ ಸಿಗೋ ಸಾಧ್ಯತೆ ಕೂಡ ಇದೆ. ಯಾಕಂದ್ರೆ ರಾಜ್ಕೋಟ್ ಟೆಸ್ಟ್ನಲ್ಲಿ ಜಸ್ಪ್ರಿತ್ ಬುಮ್ರಾಗೆ ರೆಸ್ಟ್ ನೀಡೋ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಚಿಂತನೆ ನಡೆಸ್ತಾ ಇದೆ. ಸೆಕೆಂಡ್ ಟೆಸ್ಟ್ನಲ್ಲಿ ಬುಮ್ರಾ ಒಟ್ಟು 32 ಓವರ್ ಬೌಲಿಂಗ್ ಮಾಡಿದ್ರು. ಬುಮ್ರಾ ಬೌಲಿಂಗ್ ಶೈಲಿಯೂ ಕಂಪ್ಲೀಟ್ಲಿ ಡಿಫರೆಂಟ್. ಈ ರೀತಿ ಬೌಲಿಂಗ್ ಮಾಡೋವಾಗ ಎಕ್ಸ್ಟ್ರಾ ಎನರ್ಜಿ ಬೇಕಾಗುತ್ತೆ. 32 ಓವರ್ ಬೌಲಿಂಗ್ ಮಾಡಿದ್ದಾರೆ ಅಂದ್ರೆ ಅದು ಫಾಸ್ಟ್ ಬೌಲರ್, ಎಸ್ಪೆಷಲಿ ಬುಮ್ರಾಗೆ ಹೆವೀನೆ. ನಿಮಗೆ ಗೊತ್ತಿರೋ ಹಾಗೆ, ಈ ಹಿಂದೆ ಹಲವು ಬಾರಿ ಬುಮ್ರಾ ಇಂಜ್ಯೂರಿಗೆ ಒಳಗಾಗಿದ್ರು. ಅದಕ್ಕೆ ಒಂದು ಮೇನ್ ರೀಸನ್ ಅವರ ಬೌಲಿಂಗ್ ಶೈಲಿಯೇ. ಹೀಗಾಗಿ ಕೇವಲ ಮ್ಯಾಚ್ಗಳನ್ನ ಆಡೋದಷ್ಟೇ ಅಲ್ಲ, ಅದೇ ಪ್ರಮಾಣದಲ್ಲಿ ಬುಮ್ರಾಗೆ ರೆಸ್ಟ್ ಕೂಡ ಅನಿವಾರ್ಯ. NEXT ಐಪಿಎಲ್ ಇದೆ. ನಂತರ ಟಿ20 ವರ್ಲ್ಡ್ಕಪ್ ಬರುತ್ತೆ. ಹೀಗಾಗಿ ಟೀಂ ಇಂಡಿಯಾದ ಕೀ ಬೌಲರ್ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳುವಂತೆಯೇ ಇಲ್ಲ. ನಮ್ಮ ಬೌಲಿಂಗ್ ಡಿಪಾರ್ಟ್ಮೆಂಟ್ನ ದೊಡ್ಡ ಅಸೆಟ್ ಅಂದ್ರೆ ಅದು ಬುಮ್ರಾ. ಸೋ ಈಗ ಮೂರನೇ ಟೆಸ್ಟ್ನಲ್ಲಿ ಜಸ್ಪ್ರಿತ್ ಬುಮ್ರಾಗೆ ರೆಸ್ಟ್ ನೀಡಿದ್ರೂ ಆಶ್ಚರ್ಯ ಇಲ್ಲ. ಈಗ ಸೆಕೆಂಡ್ ಮ್ಯಾಚ್ನಲ್ಲಿ ಮೊಹಮ್ಮದ್ ಸಿರಾಜ್ಗೆ ರೆಸ್ಟ್ ನೀಡಲಾಗಿತ್ತು. ಹೀಗಾಗಿ ಮೂರನೇ ಮ್ಯಾಚ್ಗೆ ಬುಮ್ರಾಗೆ ರೆಸ್ಟ್ ನೀಡಿ, ಸಿರಾಜ್ರನ್ನ ಮತ್ತೆ ಪಿಕ್ ಮಾಡುವ ಚಾನ್ಸ್ ಇದೆ. ಇಲ್ಲಿ ಟೀಂ ಇಂಡಿಯಾ ಮಿಸ್ ಮಾಡಿಕೊಳ್ತಾ ಇರೋದು ಮೊಹಮ್ಮದ್ ಶಮಿಯನ್ನ. ಆ್ಯಂಕಲ್ ಇಂಜ್ಯೂರಿಗೆಗೊಳಗಾಗಿರೋ ಶಮಿಯನ್ನ ಬಿಸಿಸಿಐ ಲಂಡನ್ಗೆ ಕಳುಹಿಸಿತ್ತು. ಅಲ್ಲಿ ಶಮಿಗೆ ಟ್ರೀಟ್ಮೆಂಟ್ ನೀಡಲಾಗಿದೆ. ಆದ್ರೆ ಶಮಿ ಕಂಪ್ಲೀಟ್ ರಿಕವರಿ ಆಗೋಕೆ ತುಂಬಾ ಟೈಮ್ ತಗೊಳ್ಬಹುದಂತೆ. ಹೀಗಾಗಿ ಐಪಿಎಲ್ ವೇಳೆಗೆ ಕಮ್ಬ್ಯಾಕ್ ಮಾಡ್ತಾರೆ ಅನ್ನೋದು ಕೂಡ ಕನ್ಫರ್ಮ್ ಇಲ್ಲ. ಇದೇ ಕಾರಣಕ್ಕೆ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ರನ್ನ ತುಂಬಾ ಕೇರ್ಫುಲ್ ಆಡಿಸ್ತಾ ಇದ್ದಾರೆ. ಮಿಡ್ಲ್ಲ್ಲಿ ರೆಸ್ಟ್ ಕೊಟ್ಟು, ಇಂಜ್ಯೂರಿಗೊಳಗಾಗದಂತೆ ಎಚ್ಚರಿಕೆ ವಹಿಸಲಾಗ್ತಾ ಇದೆ.
ಇದನ್ನೂ ಓದಿ: ಮದುವೆಯಾದ ಮೂರೇ ದಿನಕ್ಕೆ ತವರು ಸೇರಿದ ಪತ್ನಿ – ಮನನೊಂದು ಆತ್ಮಹತ್ಯೆಗೆ ಶರಣಾದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ
ಇನ್ನು ವಿರಾಟ್ ಕೊಹ್ಲಿ ಬಗ್ಗೆ ಹೇಳೋದಾದ್ರೆ, ಇಂಗ್ಲೆಂಡ್ ವಿರುದ್ಧ ಇನ್ನೂ ಮೂರು ಟೆಸ್ಟ್ ಮ್ಯಾಚ್ಗಳಲ್ಲಿ ಕೊಹ್ಲಿ ಅವೈಲೇಬಲ್ ಇದ್ದಾರಾ ಅನ್ನೋದು ಇನ್ನೂ ಕೂಡ ಗ್ಯಾರಂಟಿ. ಈ ಬಗ್ಗೆ ರಾಹುಲ್ ದ್ರಾವಿಡ್ರನ್ನ ಕೂಡ ಕ್ವಶ್ಚನ್ ಮಾಡಲಾಗಿತ್ತು. ಆದ್ರೆ ದ್ರಾವಿಡ್ ಇದಕ್ಕೆ ಸೆಲೆಕ್ಟರ್ಸ್ಗಳೇ ಆನ್ಸರ್ ಮಾಡಬೇಕಿದೆ ಎಂದಿದ್ದಾರೆ. ಬಟ್ ಈ ವಿಚಾರದಲ್ಲಿ ವಿರಾಟ್ ಕೊಹ್ಲಿಯನ್ನ ಕಾಂಟ್ಯಾಕ್ಟ್ ಮಾಡಿ ಚರ್ಚಿಸೋದಾಗಿಯೂ ದ್ರಾವಿಡ್ ಹೇಳಿದ್ದಾರೆ. ಕೆಲ ಸೋರ್ಸ್ಗಳ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ಭಾರತದಲ್ಲೇ ಇಲ್ಲ. ಇನ್ನುಳಿದ ಮೂರೂ ಟೆಸ್ಟ್ ಮ್ಯಾಚ್ಗಳಲ್ಲು ಕೊಹ್ಲಿ ಆಡೋದಿಲ್ಲ ಅಂತಾನೂ ಸಾಕಷ್ಟು ಸುದ್ದಿಗಳು ಸ್ಪ್ರೆಡ್ ಆಗ್ತಿದೆ. ಬಟ್ ಈ ಬಗ್ಗೆ ಯಾವುದೇ ಕ್ಲ್ಯಾರಿಟಿ ಸಿಕ್ಕಿಲ್ಲ.
ಇನ್ನು ಇಂಗ್ಲೆಂಡ್ ವಿರುದ್ಧ ಸೆಕೆಂಡ್ ಟೆಸ್ಟ್ ಮ್ಯಾಚ್ನಲ್ಲಿ ರವೀಂದ್ರ ಜಡೇಜ ಮತ್ತು ಕೆಎಲ್ ರಾಹುಲ್ ಆಡಿರಲಿಲ್ಲ. ಈ ಪೈಕಿ ರವೀಂದ್ರ ಜಡೇಜ ಮೂರನೇ ಟೆಸ್ಟ್ಗೆ ಅವೈಲೇಬಲ್ ಆಗೋದು ಡೌಟ್. ಇನ್ನೂ ಕೂಡ ಕಂಪ್ಲೀಟ್ ಫಿಟ್ ಆಗಿಲ್ವಂತೆ. ಮತ್ತೊಂದೆಡೆ ರಾಹುಲ್ ಮೂರನೇ ಟೆಸ್ಟ್ಗೆ ಕಮ್ಬ್ಯಾಕ್ ಮಾಡೋ ಸಾಧ್ಯತೆ ಇದೆ. ಆದ್ರೆ ಇನ್ನುಳಿದ ಮೂರು ಟೆಸ್ಟ್ಗಳಿಗೂ ಟೀಂ ಅನೌನ್ಸ್ ಆಗ್ಬೇಕಿದೆ. ಸೆಕೆಂಡ್ ಟೆಸ್ಟ್ ಗೆದ್ದ ಬಳಿಕ ರೋಹಿತ್ ಶರ್ಮಾ ಮತ್ತು ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ಗ್ರೌಂಡ್ನಲ್ಲೇ ಡೀಪ್ ಡಿಸ್ಕಷನ್ ಮಾಡ್ತಾ ಇದ್ರು. ಫೆಬ್ರವರಿ 15ರಿಂದ ರಾಜ್ಕೋಟ್ನಲ್ಲಿ ಮೂರನೇ ಟೆಸ್ಟ್ ಶುರುವಾಗುತ್ತೆ. ಹೀಗಾಗಿ ಯಾವ ಬೇಕಿದ್ರೂ ಟೀಂ ಅನೌನ್ಸ್ ಆಗಬಹುದು.