RCBಗೆ ಗೋಲ್ಡನ್ ಬಾಯ್ ಪಡಿಕ್ಕಲ್ – ನಂ.3ನಲ್ಲಿ ಪವರ್ ಹಿಟ್ಟರ್ ಆಗಿದ್ದೇಗೆ?
GT, RR, SRHನಲ್ಲೂ ಕನ್ನಡಿಗರ ಹವಾ!

RCBಗೆ ಗೋಲ್ಡನ್ ಬಾಯ್ ಪಡಿಕ್ಕಲ್ – ನಂ.3ನಲ್ಲಿ ಪವರ್ ಹಿಟ್ಟರ್ ಆಗಿದ್ದೇಗೆ?GT, RR, SRHನಲ್ಲೂ ಕನ್ನಡಿಗರ ಹವಾ!

ನಾಕೌಟ್ ಸುತ್ತಿನ ಫೈಟ್​ನಲ್ಲಿರೋ ನಾಲ್ಕೂ ತಂಡಗಳ ಟಾರ್ಗೆಟ್ ಒಂದೇ. ಮೇ 31ಕ್ಕೆ 19ನೇ ಸೀಸನ್ ಐಪಿಎಲ್​ನ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋದು. ತಂಡದ ಪರ ಪ್ರತಿಯೊಬ್ಬ ಪ್ಲೇಯರ್ ಕೂಡ ದಿ ಬೆಸ್ಟ್ ಅನ್ನೋ ಥರ ಪರ್ಫಾಮೆನ್ಸ್ ಕೊಡ್ಬೇಕು ಅಂತಾನೇ ನೋಡ್ತಾರೆ. ಸದ್ಯ ಪ್ಲೇ ಆಫ್ಸ್ ರೌಂಡ್​​ನಲ್ಲಿ ಅಖಾಡಕ್ಕೆ ಇಳಿದಿರೋ ನಾಲ್ಕೂ ತಂಡಗಳಲ್ಲೂ ಕನ್ನಡಿಗರು ಇದ್ದಾರೆ. 2026ರ ಐಪಿಎಲ್ ಸೀಸನ್ ನಲ್ಲಿ ಬ್ಯಾಟರ್​ಗಳ ಆರ್ಭಟ.. ಯಂಗ್​ಸ್ಟರ್​​ಗಳ ಸುನಾಮಿ, ದಾಖಲೆಗಳ ಸರಮಾಲೆ ಹೀಗೆ ಹತ್ತಾರು ವಿಶೇಷತೆಗಳಿವೆ. ಹಾಗೇ ಕೆಲ ಸ್ಟಾರ್​ ಪ್ಲೇಯರ್​ಗಳೇ ಮುಗ್ಗರಿಸಿದ್ರೆ ಇನ್ನೂ ಕೆಲವ್ರು ಡೆಬ್ಯೂ ಸೀಸನ್​ನಲ್ಲೇ ಸದ್ದು ಮಾಡಿದ್ದಾರೆ. ಌಂಡ್ ಬೇರೆ ಬೇರೆ ತಂಡಗಳಲ್ಲಿ ಕನ್ನಡಿಗರು ಕೂಡ ಸದ್ದು ಮಾಡಿದ್ದಾರೆ.

ಬೆಂಗಳೂರು ಪಾಲಿಗೆ ಗೋಲ್ಡನ್ ಬಾಯ್ ಆದ ದೇವದತ್ ಪಡಿಕ್ಕಲ್!

ಇನ್ನು ಈ ಸೀಸನ್​ನಲ್ಲಿ ಕನ್ನಡಿಗರ ಪೈಕಿ ಶೈನ್ ಆಗ್ತಿರೋ ಒನ್ ಆಫ್ ದಿ ಟಾಪ್ ಪರ್ಫಾಮರ್ ದೇವದತ್ ಪಡಿಕ್ಕಲ್. ಬೆಂಗಳೂರು ತಂಡದಲ್ಲೇ ಆಡ್ತಿರೋ ದೇವದತ್ ಪಡಿಕ್ಕಲ್​ಗೂ ಈ ಸೀಸನ್ ತುಂಬಾನೇ ಸ್ಪೆಷಲ್. ಆರ್​ಸಿಬಿ ಜೊತೆಗೇ ಐಪಿಎಲ್ ಜರ್ನಿ ಸ್ಟಾರ್ಟ್ ಮಾಡಿ ಈಗ ಆರ್​ಸಿಬಿಯಲ್ಲೇ ಪವರ್ ಹಿಟ್ಟರ್ ಬ್ಯಾಟರ್ ಆಗಿದ್ದಾರೆ. ದೇವದತ್ ಪಡಿಕ್ಕಲ್ 2020 ರಲ್ಲಿ ಆರ್‌ಸಿಬಿ ತಂಡದ ಮೂಲಕವೇ ತಮ್ಮ ಐಪಿಎಲ್ ವೃತ್ತಿಜೀವನವನ್ನು ಆರಂಭಿಸಿದರು. ಆ ಸೀಸನ್‌ನಲ್ಲಿ 15 ಪಂದ್ಯಗಳಿಂದ 473 ರನ್ ಗಳಿಸಿ ಎಮರ್ಜಿಂಗ್ ಪ್ಲೇಯರ್ ಅಂದ್ರೆ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ರು. 2021 ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಜೇಯ 101* ರನ್ ಗಳಿಸುವ ಮೂಲಕ ಐಪಿಎಲ್‌ನಲ್ಲಿ ತಮ್ಮ ಮೊದಲ ಶತಕ ದಾಖಲಿಸಿದರು. ನಂತ್ರ ಆರ್‌ಸಿಬಿ ತಂಡದಿಂದ ಬಿಡುಗಡೆಯಾದ ಪಡಿಕ್ಕಲ್ 2022 ಮತ್ತು 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಹಾಗೂ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರು. ಆದ್ರೆ 2025ರ ಐಪಿಎಲ್​ಗೂ ಮುನ್ನ  ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಅವರನ್ನು ₹2 ಕೋಟಿ ಮೂಲ ಬೆಲೆಗೆ ಮರಳಿ ಖರೀದಿಸಿತು. ಪ್ರಸ್ತುತ ಸೀಸನ್​ನಲ್ಲೂ ಉಳಿಸಿಕೊಂಡಿದ್ರಿಂದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 14 ಪಂದ್ಯಗಳ 13 ಇನ್ನಿಂಗ್ಸ್​ಗಳಲ್ಲಿ  433 ರನ್ಸ್ ಕಲೆ ಹಾಕಿದ್ದಾರೆ. ಸ್ಟ್ರೈಕ್​ರೇಟ್ 171.83 ಇದ್ದು ಅವರ ಐಪಿಎಲ್ ವೃತ್ತಿಜೀವನದಲ್ಲೇ ಅತ್ಯುತ್ತಮವಾಗಿದೆ. 44 ಫೋರ್ ಹಾಗೂ 24 ಸಿಕ್ಸ್ ಸಿಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಬಳಿಕ ಬೆಂಗಳೂರು ಪರ ಅತೀ ಹೆಚ್ಚು ರನ್ಸ್ ಕಲೆ ಹಾಕಿದ ಎರಡನೇ ಆಟಗಾರನಾಗಿದ್ದಾರೆ.

ಗುಜರಾತ್ ಪರ ಪ್ರಸಿದ್ಧ್ ಕೃಷ್ಣಗೆ ಪ್ಲೇಯಿಂಗ್ 11ನಲ್ಲಿ ಕಣ್ಣಾಮುಚ್ಚಾಲೆ!

ಇನ್ನು 2025ರ ಐಪಿಎಲ್​ನಲ್ಲಿ 25 ವಿಕೆಟ್ಸ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಬಾರಿಯೂ ಆರಂಭದಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ರು. ಕೇವಲ 4 ಪಂದ್ಯಗಳಿಂದ 10 ವಿಕೆಟ್ ಕಲೆಹಾಕಿ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ರು. ಲಕ್ನೋ ವಿರುದ್ಧದ ಮ್ಯಾಚಲ್ಲಿ 28 ರನ್ ನೀಡಿ 4 ಪ್ರಮುಖ ವಿಕೆಟ್ಸ್ ಪಡೆದಿದ್ರು. ಆದ್ರೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸ್ವಲ್ಪ ದುಬಾರಿಯಾದ ಕಾರಣ ಅಂದ್ರೆ 2 ಓವರ್‌ಗಳಲ್ಲಿ 31 ರನ್ಸ್ ಕೊಟ್ಟಿದ್ರು. ಇದೇ ಟೈಮಲ್ಲಿ ಜೇಸನ್ ಹೋಲ್ಡರ್ ಕೂಡ ಟೀಂ ಸೇರಿಕೊಂಡಿದ್ದು ಇದಾದ್ಮೇಲೆ ಪ್ರಸಿದ್ಧ್ ಕೃಷ್ಣಗೆ ಪ್ಲೇಯಿಂಗ್ 11ನಲ್ಲಿ ಕೆಲವೊಮ್ಮೆ ಚಾನ್ಸ್ ಸಿಕ್ಕಿಲ್ಲ. ಒಟ್ಟಾರೆ 8 ಪಂದ್ಯಗಳಲ್ಲಿ ಬೌಲಿಂಗ್ ಮಾಡಿ 14 ವಿಕೆಟ್ಸ್ ತಗೊಂಡಿದ್ದಾರೆ. ಹಾಗೇ 8 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಮಿನಿಮನ್ ಒಂದು ವಿಕೆಟ್ ಆದ್ರೂ ತಗೊಂಡಿದ್ದಾರೆ.

ಹೈದ್ರಾಬಾದ್ ನಲ್ಲಿ ಶೈನ್ ಆಗ್ತಾರಾ ಸ್ಮರಣ್ ರವಿಚಂದ್ರನ್?

ಇನ್ನು ಸನ್ ರೈಸರ್ಸ್ ಹೈದ್ರಾಬಾದ್ ಪರ ಕನ್ನಡಿಗ ಸ್ಮರಣ್ ರವಿಚಂದ್ರನ್ ಆಡ್ತಿದ್ದಾರೆ. ಮೇ 3 ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೂಲಕ ತಮ್ಮ ಚೊಚ್ಚಲ ಐಪಿಎಲ್ ಪದಾರ್ಪಣೆ ಮಾಡಿದರು. ಈ ಸೀಸನ್​ನಲ್ಲಿ ಒಟ್ಟು 5 ಪಂದ್ಯಗಳಲ್ಲಿ ಅವಕಾಶ ಸಿಕ್ಕಿದ್ದು 3 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಆದ್ರೆ 18 ರನ್ಸ್ ಅಷ್ಟೇ ಕಲೆ ಹಾಕೋಕೆ ಸಾಧ್ಯವಾಗಿರೋದು. ಮೇ 22 ರಂದು ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ತಂಡದಲ್ಲಿದ್ದರೂ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.  ದೇಶಿ ಕ್ರಿಕೆಟ್ ಮತ್ತು ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ರನ್ ಹೊಳೆ ಹರಿಸಿದ್ದ ಸ್ಮರಣ್ ಅವರಿಗೆ, ಐಪಿಎಲ್​ನಲ್ಲಿ ಅಷ್ಟೇನು ಚೆನ್ನಾಗಿದೆ ಆಗಿಲ್ಲ.

ಮೊದಲ ಆವೃತ್ತಿಯಲ್ಲೇ ರಾಜಸ್ಥಾನ ಪರ ಮಿಂಚಿನ ಪುಂಜಾ!

ಇನ್ನು ಕರ್ನಾಟಕ ಮೂಲದ ಯಶ್ ರಾಜ್ ಪುಂಜಾ ರಾಜಸ್ಥಾನ ರಾಯಲ್ಸ್ ಪರ ಈ ಸೀಸನ್​ನಲ್ಲಿ ಆಡ್ತಿದ್ದಾರೆ. 6 ಅಡಿ 5 ಇಂಚು ಎತ್ತರವಿರುವ ಈ ಯುವ ‘ಮಿಸ್ಟರಿ’ ಸ್ಪಿನ್ನರ್, ತಮ್ಮ ಗೂಗ್ಲಿ ಮತ್ತು ಎಕ್ಸ್‌ಟ್ರಾ ಬೌನ್ಸ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಶೇಕ್ ಮಾಡಿದ್ದಾರೆ. ಸೆಕೆಂಡ್ ಆಫ್​ನಲ್ಲಿ ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆದ ಪುಂಜಾ 6 ಪಂದ್ಯಗಳಿಂದ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುಂಬೈ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 2 ವಿಕೆಟ್ ಕಿತ್ತು ರಾಜಸ್ಥಾನ್ ತಂಡ ಪ್ಲೇ-ಆಫ್ಸ್ ತಲುಪಲು ನೆರವಾದರು. ಯುಎಇ ಮತ್ತು ಕರ್ನಾಟಕದ ಪರ ದೇಶಿ ಕ್ರಿಕೆಟ್‌ನಲ್ಲಿ ಆಡಿದ್ದ 19 ವರ್ಷದ ಯಶ್ ರಾಜ್ ಪುಂಜಾ, ನೆಟ್ ಬೌಲರ್ ಆಗಿ ಆರಂಭಿಸಿ ಈಗ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿ ಹೊರಹೊಮ್ಮಿದ್ದಾರೆ. ಒಟ್ನಲ್ಲಿ ಟೈಟಲ್ ವಿನ್ನಿಂಗ್ ರೇಸ್​ನಲ್ಲಿರೋ ನಾಲ್ಕೂ ತಂಡಗಳಲೂ ಕನ್ನಡಿಗರಿದ್ದಾರೆ.

Shantha Kumari

Leave a Reply

Your email address will not be published. Required fields are marked *