ನಂದಗೋಕುಲದಿಂದ ಹೊರಬಂದ ಕೇಶವ – ಯಶವಂತ್ ಬದಲು ವಿಜಯ್‌ರಾಜ್ ಎಂಟ್ರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ನಂದಗೋಕುಲ ವೀಕ್ಷಕರ ಮನಗೆದ್ದಿದೆ. ಇದೀಗ ಧಾರಾವಾಹಿ ತಂಡದಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ. ಧಾರಾವಾಹಿಯಲ್ಲಿ ಕೇಶವ ಪಾತ್ರ ಮಾಡುತ್ತಿದ್ದ ನಟ ಸೀರಿಯಲ್‌ನಿಂದ ಹೊರ ನಡೆದಿದ್ದಾರೆ.
ಇದನ್ನೂ ಓದಿ:ಶ್ರೀ ಕೃಷ್ಣದೇವರಾಯನಾಗಿ ಸುದೀಪ್ – ಬರ್ತ್‌ಡೇಗೆ ಫ್ಯಾನ್ಸ್‌ಗೆ ಕಿಚ್ಚನ ಡಬಲ್ ಸರ್ಪೈಸ್
ನಂದಗೋಕುಲ ಧಾರಾವಾಹಿಯಿಂದ ಕೇಶವ ಪಾತ್ರಧಾರಿ ಹೊರಬಂದಿದ್ದಾರೆ. ಇಲ್ಲಿವರೆಗೆ ಕೇಶವ ಪಾತ್ರದಲ್ಲಿ ನಟ ಯಶ್ವಂತ್ ನಟಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಕೇಶವ ರೋಲ್ ಮಾಡುತ್ತಿದ್ದ ಯಶ್ವಂತ್ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಇದೀಗ ಕೇಶವ ಪಾತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ. ಇನ್ನು ಮುಂದೆ ಕೇಶವ ಪಾತ್ರದಲ್ಲಿ ನಟ ವಿಜಯ್ ರಾಜ್ ಕಾಣಿಸಿಕೊಳ್ಳಲಿದ್ದಾರೆ. ನಟ ವಿಜಯ್ ರಾಜ್ ಅವರು ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ಸಹ ನಟನಾಗಿ ಗುರುತಿಸಿಕೊಂಡಿದ್ದರು. ಮುಖ್ಯವಾಗಿ, ಕನ್ನಡತಿ, ವಧು, ನೀನಾದೆನಾ ಧಾರಾವಾಹಿಯಲ್ಲಿ ನಟಿಸಿದ್ದರು.
ಇತ್ತೀಚೆಗೆ ಕೇಶವ ಪಾತ್ರಧಾರಿ ಯಶ್ವಂತ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಆತ್ಮೀಯ ನಂದಗೋಕುಲ ಕುಟುಂಬ, ಇಂದು ನಾನು ನನ್ನ ಪ್ರಯಾಣದ ಒಂದು ವಿಶೇಷ ಅಧ್ಯಾಯವನ್ನು ಮುಗಿಸುತ್ತಿದ್ದೇನೆ. ನನ್ನ ಹೃದಯಕ್ಕೆ ಯಾವಾಗಲೂ ಹತ್ತಿರವಾಗಿ ಉಳಿಯುವ ಪಾತ್ರ ‘ಕೇಶವ’ನಿಗೆ ನಾನು ವಿದಾಯ ಹೇಳುತ್ತಿದ್ದೇನೆ, ಅದರೊಂದಿಗೆ ನಂದಗೋಕುಲದೊಂದಿಗಿನ ನನ್ನ ಪಯಣ ಕೊನೆಗೊಂಡಿದೆ ಎಂದು ಹೇಳಿದ್ದರು.
ನಂದಗೋಕುಲ ಧಾರಾವಾಹಿಯಲ್ಲಿ ನಂದನ ಎರಡನೆ ಮಗ ಕೇಶವ. ಮೀನಾಳ ಮುದ್ದಿನ ಗಂಡ. ಮೊದಲಿಗೆ ಅಪ್ಪನ ಮಾತಿನ ವಿರುದ್ಧ ಪ್ರೀತಿಸಿ ಮದುವೆಯಾಗಿದ್ದ ಕೇಶವ ಇದೀಗ ಅಪ್ಪನ ಪ್ರೀತಿ ಮತ್ತು ನಂಬಿಕೆಯನ್ನು ಗಳಿಸಿಕೊಂಡಿದ್ದಾನೆ. ಇನ್ನು ಈ ಪಾತ್ರದಲ್ಲಿ ವಿಜಯ್ ರಾಜ್ ಕಾಣಿಸಿಕೊಳ್ಳಲಿದ್ದಾರೆ.

ನೋಡಿರಿ

