ಡಿವೋರ್ಸ್ ಪಾರ್ಟಿ ಆಯ್ತು.. ಈಗ ಡಿವೋರ್ಸ್ ಕ್ಯಾಂಪ್ – ವಿಚ್ಛೇದನ ಪಡೆಯೋದೇ ಟ್ರೆಂಡ್ ಆಯ್ತಾ?

ಈಗಿನ ಕಾಲದ ದಂಪತಿಗಳ ನಡುವೆ ಹೊಂದಾಣಿಕೆ ಅನ್ನೋದೇ ಇಲ್ಲ. ಸಣ್ಣ ಪುಟ್ಟ ವಿಷ್ಯಕ್ಕೂ ಜಗಳ, ಮನಸ್ತಾಪ ಮಾಡಿಕೊಳ್ತಾರೆ. ಹೀಗಾಗಿಯೇ ಇತ್ತೀಚೆಗಿನ ದಿನಗಳಲ್ಲಿ ದಂಪತಿಗಳು ಡಿವೋರ್ಸ್ ಪಡೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಡಿವೋರ್ಸ್ ಪಡೆದವರು ಡಿವೋರ್ಸ್ ಪಾರ್ಟಿ ಆಯೋಜನೆ ಮಾಡಿದ್ದೂ ಸುದ್ದಿಯಾಗಿತ್ತು. ಆದ್ರೀಗ ಕೇರಳದಲ್ಲಿ ಡಿವೋರ್ಸ್ ಕ್ಯಾಂಪ್ ಭಾರಿ ಸದ್ದು ಮಾಡ್ತಿದೆ. ಇದೀಗ ಡಿವೋರ್ಸ್ ಕ್ಯಾಂಪ್ ಆಯೋಜನೆ ಮಾಡಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ.
ಇದನ್ನೂ ಓದಿ: ಊದಿದ ಮುಖ.. ಉರ್ಫಿಗೆ ಏನಾಯ್ತು? – ಲಿಪ್ ಸರ್ಜರಿ.. ಬ್ಯೂಟಿ ಕಳ್ಕೊಂಡ್ರಾ?
ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್ ಪಡೆದು, ತನಗೆ ಸ್ವಾತಂತ್ರ್ಯ ಸಿಕ್ಕಿತು ಅಂತ ಸಂಭ್ರಮಿಸೋರೇ ಹೆಚ್ಚು. ಡಿವೋರ್ಸ್ ಸಿಗ್ತಿದ್ದಂತೆ ಪಾರ್ಟಿ ಮಾಡಿದ್ದು ಸುದ್ದಿಯಾಗಿತ್ತು. ಆದರೆ, ಇತ್ತೀಚೆಗಷ್ಟೇ ಕೇರಳದಲ್ಲಿ ಮೊದಲ ಬಾರಿ ಆಯೋಜಿಸಲಾಗಿದ್ದ ಮಹಿಳೆಯರ ಡಿವೋರ್ಸ್ ಕ್ಯಾಂಪ್ ಸಖತ್ ಸುದ್ದಿಯಾಗುತ್ತಿದೆ. ಈ ಕ್ಯಾಂಪ್ ಆಯೋಜನೆ ಮಾಡಿದ್ದು ಕ್ಯಾಲಿಕಟ್ನ ಕಂಟೆಂಟ್ ಕ್ರಿಯೇಟರ್ ರಫಿಯಾ ಅಫಿ ಆಗಿದ್ದು, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. cookeatburn and breakfree stories ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ನಾವು ಮಕ್ಕಳಂತೆ ನಕ್ಕಿದ್ದೇವೆ. ನಾವು ಯೋಧರಂತೆ ಅತ್ತಿದ್ದೇವೆ. ನಾವು ಪರ್ವತಗಳಲ್ಲಿ ಕಿರುಚಿದ್ದೇವೆ. ನಕ್ಷತ್ರಗಳ ಕೆಳಗೆ ನಾವೆಲ್ಲರೂ ಡಾನ್ಸ್ ಮಾಡಿದ್ದೇವೆ. ಬೇರೆ ಯಾರಿಗೂ ಅರ್ಥವಾಗದ ನಮ್ಮೊಳಗಿನ ಕಥೆಗಳನ್ನು ಹಂಚಿಕೊಂಡಿದ್ದೇವೆ. ಅಪರಿಚಿತರು ಸಹೋದರಿಯರಾಗಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಅಂದ್ಹಾಗೆ ಡಿವೋರ್ಸ್ ಕ್ಯಾಂಪ್ ಹೆಸರೇ ಹೇಳುವಂತೆ ವಿಚ್ಛೇದಿತ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಕ್ಯಾಂಪ್. ವಿಚ್ಛೇದಿತ ಹಾಗೂ ವಿಧವೆ ಮಹಿಳೆಯರ ನೋವನ್ನು ಮರೆಸಲು ಸಣ್ಣ ಪ್ರವಾಸ ಕೈಗೊಳ್ಳಲಾಗುತ್ತೆ. ಹೊಸ ಮುಖಗಳ ಭೇಟಿ, ಸ್ನೇಹ, ಮಾತುಕತೆ, ತಮ್ಮ ನೋವನ್ನು ಹಂಚಿಕೊಂಡು ಬದುಕು ಕಟ್ಟಿಕೊಳ್ಳುವ ಹೊಸ ಪ್ರಯತ್ನ ಇದಾಗಿದೆ. ಈ ಕ್ಯಾಂಪ್ನಿಂದ ಮಹಿಳೆಯರಿಗೆ ರಿಲ್ಯಾಕ್ಸ್ ಸಿಗುತ್ತದೆ ಎಂದು ಆಯೋಜನೆ ಮಾಡಲಾಗಿದೆ. ಇದೀಗ ಈ ವಿಡಿಯೋ ನೋಡಿದವರು ಇತ್ತೀಚೆಗೆ ಡಿವೋರ್ಸ್ ಪಡೆಯೋದೇ ಟ್ರೆಂಡ್ ಆಗ್ತಿದೆ.. ದಂಪತಿಗಳ ಮಧ್ಯೆ ಹೊಂದಿಕೆ ಇಲ್ಲ ಅಂತಾ ಕಾಮೆಂಟ್ ಮಾಡ್ತಿದ್ದಾರೆ.

ನೋಡಿರಿ

