ಪುಟಿನ್‌ಗೆ ಮೋದಿ ಸರ್ಕಾರ ಎಚ್ಚರಿಕೆ – ಯುದ್ಧ ಭೂಮಿಗೆ ನೂಕಿದ ಬ್ರೋಕರ್‌ಗಳು
ಸೈನ್ಯಕ್ಕೆ ಕೂಲಿ ಆಳುಗಳು ಸತ್ತವರೆಷ್ಟು?
ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಯುದ್ಧದ ಭೀಕರತೆ ಪಡೆಯುತ್ತಿದ್ದು, ಎರಡು ಕಡೆಯ ಸೈನಿಕರು ಮೃತಪಡುತ್ತಿದ್ದಾರೆ. ಕೇವಲ ಸೈನಿಕರು ಮಾತ್ರವಲ್ಲ ಬೇರೆ ಬೇರೆ ದೇಶದ ಅಮಾಯಕ ಜನ ಜೀವ ಬೀಡುತ್ತಿದ್ದಾರೆ. ಅದರಲ್ಲೂ ರಷ್ಯಾಕ್ಕೆ ಹೋಗಿದ್ದ ಭಾರತದ 10 ಯುವಕರು ಸಾವನ್ನಪ್ಪಿದ್ದಾರೆ. ಇಲ್ಲಿ ಕೇವಲ ಭಾರತೀಯರು ಮಾತ್ರವಲ್ಲ ಬೇರೆ ಬೇರೆ ದೇಶಗಳಿಂದ ಹೋಗಿದ್ದ ಸಾಕಷ್ಟು ಅಮಾಯಕ ಜನ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. ಅಂದಹಾಗೇ ಹೀಗೆ ಸತ್ತವರು ಬೇರೆ ಬೇರೆ ಕೆಲಸಕ್ಕೆ ಅಂತ ಹೊದವರು. ಆದ್ರೆ ಇವರನ್ನ ಬಲವಂತವಾಗಿ ಸೇನೆಗೆ ಸೇರಿಸಿಕೊಂಡಿದ್ರು. ಕೂಲಿ ಆಳುಗಳಂತೆ ಸೇನೆಯಲ್ಲಿ ಸೇರಿಸಿಕೊಂಡು ಇವರ ಪ್ರಾಣವನ್ನ ರಷ್ಯಾ ತೆಗೆದಿದೆ.. ನಮ್ಮ ದೇಶಕ್ಕಾಗಿ ಹೋರಾಡಿ ಮೃತಪಟ್ಟರೇ ಅದು ವೀರ ಮರಣವಾಗುತ್ತೆ. ಸರ್ಕಾರ ಸೌಲಭ್ಯಗಳು ಸಿಗುತ್ತೆ. ಆದ್ರೆ ಇಷ್ಟ ಇಲ್ಲ ಅಂದ್ರೂ ರಷ್ಯಾ ಸೇನೆ ತನ್ನ ದೇಶದ ವಿರುದ್ಧ ಹೋರಾಡೋಕೆ ಬೇರೆ ದೇಶದಿಂದ ಬಂದವರನ್ನ ನೇಮಕ ಮಾಡಿಕೊಂಡಿದೆ. . ಇವರೇ ಸೈನಿಕರಿಗೆ ಕೊಟ್ಟಂತೆ ಗನ್‌ಗಳನ್ನ ನೀಡಿದೆ. ಆದ್ರೆ ಯುದ್ದ ಸತ್ತರೇ ಯಾವುದೇ ಸೌಲಭ್ಯಗಳು ಸಿಗಲ್ಲ. ಯಾಕಂದ್ರೆ ಇವರು ಅಧಿಕೃತವಾಗಿ ಸೇನೆಗೆ ಸೇರಿರಲ್ಲ, ದಿನಕೂಲಿ ಆಳುಗಳಂತೆ ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ಉಕ್ರೇನ್ ದಾಳಿಯಿಂದ ಈ ಅಮಾಯಕ ಜನ ಪ್ರಾಣ ಬಿಡುತ್ತಿದ್ದಾರೆ.
ರಷ್ಯಾಕ್ಕೆ ಹೋಗಿದ್ದ ಕೇರಳದ ಯುವಕ ಸಾವು
ರಷ್ಯಾ ಸೇನೆಗೆ ಬಲವಂತವಾಗಿ ಸೇರಿದ್ದ ಕೇರಳದ 32 ವರ್ಷದ ಬಿನಿಲ್ ಬಾಬು ಮೃತಪಟ್ಟಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ಕುಟ್ಟನೆಲ್ಲೂರು ಮೂಲದವರಾಗಿದ್ದು, ಭಾರತೀಯ ರಾಯಭಾರ ಕಚೇರಿ ಇವರ ಸಾವಿನ ಬಗ್ಗೆ ಕುಟುಂಬಕ್ಕೆ ಅಧಿಕೃತವಾಗಿ ಮಾಹಿತಿ ನೀಡಿದೆ. ಇದ್ರ ಜೊತೆ ತ್ರಿಶೂರ್ ನಿವಾಸಿಯೂ ಆಗಿರುವ ಮತ್ತೊಬ್ಬ ಮಲಯಾಳಿ ಉಕ್ರೇನ್‌ನಲ್ಲಿ ಶೆಲ್ ದಾಳಿಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವಾಟ್ಸಾಪ್ ಕರೆಯ ಮೂಲಕ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ರಷ್ಯಾದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಒಂಬತ್ತು ಭಾರತೀಯರು ಸಾವನ್ನಪ್ಪಿದ್ದು, ಬಿನಿಲ್ ಸಾವಿನೊಂದಿಗೆ ಈ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕೇವಲ ಭಾರತೀಯರು ಮಾತ್ರವಲ್ಲ ಇಲ್ಲಿ ಕೆಲಸ ಅರಿಸಿ ಬಂದ ಶ್ರೀಲಂಕಾ, ಪಾಕಿಸ್ತಾನ ಸೇರಿದಂತೆ ಸಾಕಷ್ಟು ದೇಶದ ಜನ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.
ರಷ್ಯಾ ಜೊತೆ ಭಾರತ ಮಾತುಕತೆ
ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯರಿಬ್ಬರು ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ನೆರವು ನೀಡಲಾಗುತ್ತಿದೆ. ಮೃತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರಷ್ಯಾದ ಆಡಳಿತದೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಾಗಿ MEA ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ಗಾಯಾಳುವನ್ನು ಬೇಗನೆ ಡಿಸ್ಟಾರ್ಜ್ ಮಾಡಿ, ಭಾರತಕ್ಕೆ ಕಳುಹಿಸುವಂತೆ ಕೇಳುತ್ತಿದ್ದೇವೆ. ಈ ವಿಚಾರವನ್ನು ಮಾಸ್ಕೋದಲ್ಲಿರುವ ರಷ್ಯಾ ಆಡಳಿತ ಹಾಗೂ ನವದೆಹಲಿಯಲ್ಲಿರುವ ರಷ್ಯಾ ರಾಯಭಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ರಷ್ಯಾ ಮಿಲಿಟರಿಯಲ್ಲಿರುವ ಉಳಿದ ಭಾರತೀಯ ಪ್ರಜೆಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಭಾರತ ಎಚ್ಚರಿಸಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಯುದ್ಧ ಭೂಮಿಗೆ ನೂಕಿದ ಬ್ರೋಕರ್‌ಗಳು
ಇನ್ನೂ ಭಾರತದಲ್ಲಿ ಸಾಕಷ್ಟು ಕೆಲಸವಿದ್ರೂ, ಒಂದಷ್ಟು ಜನಕ್ಕೆ ವಿದೇಶಕ್ಕೆ ಹೋಗುವ ಆಸೆ. ಅಲ್ಲಿ ಒಂದಿಷ್ಟು ಹಣ ಸಂಪಾದನೆ ಮಾಡಬೇಕು ಅನ್ನೋ ತುಡಿತ. ಹಾಗೇ ಈ ಕೇರಳದ ಯುವಕರು ಚಲಕುಡಿಯಲ್ಲಿರುವ ಏಜೆಂಟ್ ಮೂಲಕ ರಷ್ಯಾಕ್ಕೆ ತೆರಳಿದ್ದರು. ಕ್ಯಾಂಟೀನ್‌ನಲ್ಲಿ ಕೆಲಸ ಮಾಡಲು ರಷ್ಯಾಕ್ಕೆ ಹೋಗಿದ್ದ ಈ ಯುವಕರು ಯುದ್ಧ ವಲಯದಲ್ಲಿ ಸಿಕ್ಕಿಬಿದ್ದು ರಷ್ಯಾ ಪರವಾಗಿ ಬಲವಂತವಾಗಿ ಹೋರಾಡುತ್ತಿದ್ದಾರೆ. ಅವರು ಮನೆಗೆ ಮರಳಲು ಆಗದೇ ಅಲ್ಲಿ ಇರಲು ಆಗದೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಅಮಾಯಕರ ಪ್ರಾಣ ಹೋಗುತಿದ್ದು, ಪುಟಿನ್ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ