ತಲಾ ಮೆಚ್ಚಿದ ವಿಘ್ನೇಶ್ CSK ಕಾಡಿದ ಪುತ್ತೂರ್ ಯಾರು?
ಆಟೋ ಡ್ರೈವರ್ ಮಗನ ಆಟಕ್ಕೆ ಸಲಾಂ

ತಲಾ ಮೆಚ್ಚಿದ ವಿಘ್ನೇಶ್ CSK ಕಾಡಿದ ಪುತ್ತೂರ್ ಯಾರು?ಆಟೋ ಡ್ರೈವರ್ ಮಗನ ಆಟಕ್ಕೆ ಸಲಾಂ

ಮುಂಬೈ ತಂಡದಲ್ಲಿರೋ ಯುವ ಆಟಗಾರ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಹೆಸರು ವಿಘ್ನೇಶ್ ಪುತ್ತೂ‌ರ್ ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಲ್ಲ. ಈತ ಕೇರಳದ ಹುಡುಗ. ಸಿಎಸ್‌ಕೆ ತಂಡದ ಚೇಸಿಂಗ್ ವೇಳೆ ಮುಂಬೈ ತಂಡಕ್ಕೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಬೌಲರ್, ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಸುದ್ದಿಯಲ್ಲಿದ್ದಾನೆ. 24 ವರ್ಷದ ಯುವಕ, ಐಪಿಎಲ್ ಪದಾರ್ಪಣೆ ಪಂದ್ಯದಲ್ಲೇ ಮಿಂಚು ಹರಿಸಿದ್ದಾನೆ. ಆಡಿದ ಮೊದಲ ಪಂದ್ಯದಲ್ಲಿ ಘಟಾನುಘಟಿ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡಿ ಮೇಲಿಂದ ಮೇಲೆ ವಿಕೆಟ್ ಪಡೆದಿದ್ದಾನೆ. ಮೊದಲ ಪಂದ್ಯದಲ್ಲಿ ಮುಂಬೈ ತಂಡದ ಇಂಪ್ಯಾಕ್ಟ್ ಆಟಗಾರನಾಗಿ ಬಂದ ಕೇರಳದ ಮೂಲದ ವಿಘ್ನೇಶ್ ಪುತ್ತೂರ್, ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾನೆ

ಅರ್ಧಶತಕ ಸಿಡಿಸಿ ಕ್ರೀಸ್‌ಕಚ್ಚಿ ಆಡುತ್ತಿದ್ದ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್, ಈತನ ಸ್ಪಿನ್ ತಂತ್ರ ಮಾಡಿಕೊಳ್ಳಲಾಗದೆ ಕ್ಯಾಚ್ ಕೊಟ್ಟು ಔಟಾಗ್ತಾರೆ. ಇವರ ಬೆನ್ನಲ್ಲೇ, ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಶಿವಂ ದುಬೆ ಕೂಡಾ ಕ್ಯಾಚ್ ನೀಡಿ ವಿಕೆಟ್ ಚೆಲ್ಲುತ್ತಾರೆ. ಕೆಲವೇ ನಿಮಿಷಗಳಲ್ಲಿ ದೀಪಕ್ ಹೂಡಾ ಕೂಡಾ ಇದೇ ಮಾದರಿಯಲ್ಲಿ ಔಟಾಗ್ತಾರೆ. ಸತತ ಮೂರು ಪ್ರಮುಖ ಬ್ಯಾಟರ್‌ಗಳ ವಿಕೆಟ್ ಪಡೆದು ತಂಡದ ಹಿರಿಯ ಆಟಗಾರರೊಂದಿಗೆ ವಿಘ್ನೇಶ್ ಸಂಭ್ರಮಿಸಿದ್ದಾರೆ.

ಸೀನಿಯ‌ರ್ ತಂಡದ ಪರ ಆಡಿಲ್ಲ

ಕೇರಳದ ಮಲಪ್ಪುರಂನ ಹುಡುಗನಿಗೆ ಈಗ 24 ವರ್ಷ ವಯಸ್ಸು. ಈತನನ್ನು ಮುಂಬೈ ಇಂಡಿಯನ್ಸ್ ತಂಡವು ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಗೆ ಬಿಡ್ ಮಾಡಿತ್ತು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಟ್ರಯಲ್ಸ್‌ನಲ್ಲಿ ಅವರ ಬೌಲಿಂಗ್ ಅನ್ನು ತುಂಬಾ ಇಷ್ಟಪಟ್ಟಿದ್ರು. ನಂತ್ರ ತಂಡದಲ್ಲಿ ಆಡೋ ಚಾನ್ಸ್ ಪಡೆದಿದ್ದಾರೆ. ಅಚ್ಚರಿ ಎಂದರೆ ಈತ ಇನ್ನೂ ಸೀನಿಯರ್ ಮಟ್ಟದಲ್ಲಿ ತಮ್ಮ ರಾಜ್ಯ ತಂಡವಾದ ಕೇರಳ ಪರ ಆಡಿಲ್ಲ. ಯಾವುದೇ ದೇಶೀಯ ಕ್ರಿಕೆಟ್‌ನಲ್ಲೂ ಪ್ರತಿನಿಧಿಸಿಲ್ಲ. 11 ವರ್ಷ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಶುರುಮಾಡಿದಾತ ಇದೀಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ. ರಾಜ್ಯ ತಂಡದಲ್ಲಿ ಆಡದ ಒಬ್ಬ ಪ್ರತಿಭೆ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆಯುವುದೇ ಅಪರೂಪ. ಆ ಅವಕಾಶ ಪಡೆದು,  ಪ್ರಬಲ ಬ್ಯಾಟರ್‌ಗಳ ವಿಕೆಟ್ ಪಡೆದಿದ್ದಾನೆ .

ವಿಘ್ನೇಶ್ ಬೆನ್ನು ತಟ್ಟಿದ ಧೋನಿ

ಇನ್ನು ಈ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ವಿಶ್ಲೇಶ್ ಅವರ ಬಳಿ ಸ್ವತಃ ಧೋನಿಯೇ ಹೋದರು. ಬಳಿಕ ವಿಶ್ಲೇಶ್ ಅವರ ಭುಜವನ್ನು ತಟ್ಟಿ ಅಭಿನಂದಿಸಿದರು. ಧೋನಿಯಿಂದ ಮೆಚ್ಚುಗೆ ಪಡೆದ 24 ವರ್ಷದ ವಿಘ್ನೇಶ್ ಮುಖದಲ್ಲಿ ಸಂತೋಷ ಕಾಣಿಸುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಬೇಗನೆ ವೈರಲ್ ಆಗಿದ್ದು, ಈ ಸಂದರ್ಭದಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಮಾಜಿ ಭಾರತೀಯ ಆಟಗಾರ ಮತ್ತು ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಆ ಕ್ಷಣವನ್ನು ಹೊಗಳಿದರು.

 ವಿಘ್ನೇಶ್ ಅಪ್ಪ ಆಟೋ ಡ್ರೈವರ್

ಅಂದಹಾಗೆ ವಿಘ್ನೇಶ್ ಪುತ್ತೂರು ಎಡಗೈ ಮಣಿಕಟ್ಟಿನ ಸ್ಪಿನ್ನರ್. ಇವರ ಅಪ್ಪ ಸುನೀಲ್ ಕುಮಾ‌ರ್ ಆಟೋ ಚಾಲಕ ಮತ್ತು ಕೆ.ಪಿ. ಬಿಂದು ಗೃಹಿಣಿ.. ಕುಟುಂಬದಲ್ಲಿ ಯಾರಿಗೂ ಕ್ರಿಕೆಟ್‌ನೊಂದಿಗೆ ಉತ್ತಮ ಸಂಪರ್ಕವಿಲ್ಲ. ಸ್ಥಳೀಯ ಕ್ರಿಕೆಟ್ ತರಬೇತುದಾರ ವಿಜಯನ್, ವಿಘ್ನೇಶ್ ಅವರಿಗೆ ತರಬೇತಿ ನೀಡಿದರು. ವಿಘ್ನೇಶ್ ಅವರು 14, 19 ಮತ್ತು 23 ವರ್ಷದೊಳಗಿನವರ ವಿಭಾಗಗಳಲ್ಲಿ ಕೇರಳ ಪರ ಆಡಿದ್ದರು. ಆದರೆ, ಹಿರಿಯ ತಂಡಕ್ಕೆ ಕರೆಸಿಕೊಳ್ಳಲಿಲ್ಲ. ಆದ್ರೆ ಐಪಿಎಲ್‌ನಲ್ಲಿ ಮುಂಬೈ ಪರ ಆಡಿದ ಮೊದಲ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚು ಹರಿಸಿದ್ದಾರೆ. ಕ್ರಿಕೆಟ್‌ ಅಂಗಳದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದೆ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದು ಮಿಂಚು ಹರಿಸೋದು ಪಕ್ಕಾ..

 

Kishor KV

Leave a Reply

Your email address will not be published. Required fields are marked *