ಆಡಿ ಕಾರಿನಲ್ಲಿ ಬಂದು ಸೊಪ್ಪು ಮಾರುವ ರೈತ – ಅನ್ನ ಕೊಡುವ ದಾತನ ಬದುಕಿನ ಶೈಲಿಗೆ ಜನ ಫಿದಾ

ಆಡಿ ಕಾರಿನಲ್ಲಿ ಬಂದು ಸೊಪ್ಪು ಮಾರುವ ರೈತ – ಅನ್ನ ಕೊಡುವ ದಾತನ ಬದುಕಿನ ಶೈಲಿಗೆ ಜನ ಫಿದಾ

ರೈತರು ನಮ್ಮ ಸಮಾಜದ ಬೆನ್ನೆಲುಬು. ನಾವು ತಿನ್ನುವ ಎಲ್ಲಾ ಆಹಾರವನ್ನು ನಮಗೆ ಒದಗಿಸುವವರು ಅವರೇ. ದೇಶದ ಇಡೀ ಜನಸಂಖ್ಯೆಯು ರೈತರ ಮೇಲೆ ಅವಲಂಬಿತವಾಗಿದೆ. ಅದು ಚಿಕ್ಕದಾಗಿರಲಿ ಅಥವಾ ದೊಡ್ಡ ದೇಶವೇ ಆಗಿರಲಿ. ರೈತರು ವಿಶ್ವದ ಪ್ರಮುಖ ವ್ಯಕ್ತಿಗಳು. ರೈತರಿಗೆ ಇಷ್ಟೊಂದು ಮಹತ್ವವಿದ್ದರೂ ಅವರಿಗೆ ಸರಿಯಾದ ಜೀವನವಿಲ್ಲ. ಎಷ್ಟೋ ಬಾರಿ ತಾವು ಬೆಳೆ ಬೆಳೆದರೂ ಚೆನ್ನಾಗಿರುವುದನ್ನ ಮಾರಿ ಅಳಿದುಳಿದುದನ್ನ ತಾವು ಬಳಸಿಕೊಳ್ಳುತ್ತಾರೆ. ಆದರೆ ಈ ರೈತನ ಬದುಕಿನ ಶೈಲಿ ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್‌ ತೀರ್ಪು ಬೆನ್ನಲ್ಲೇ ಹೆಚ್ಚಾದ ರೈತರ ಹೋರಾಟ- ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂ‌ನು ಕ್ರಮ ಎಂದ ಗೃಹಸಚಿವ

ರೈತರು ಅಂದರೆ ನಮ್ಮಲ್ಲಿ ಅವರನ್ನ ನೋಡುವ ದೃಷ್ಟಿಕೋನವೇ ಬೇರೆ. ಅವರು ಕೊಳೆಯಾದ ಬಟ್ಟೆ ಹಾಕುತ್ತಾರೆ. ನಡೆದುಕೊಂಡು ಓಡಾಡುತ್ತಾರೆ. ಮೈಯೆಲ್ಲಾ ಸೊರಗಿರುತ್ತದೆ ಎಂದು. ಆದರೆ ದೇಶಕ್ಕೇ ಅನ್ನ ಕೊಡುವ ರೈತರು ಐಷಾರಾಮಿಯಾಗಿಯೂ ಜೀವನ ನಡೆಸಬಹುದು. ರೈತರು ಮಾರುಕಟ್ಟೆಗೆ ತರಕಾರಿ ಸೊಪ್ಪು ಮಾರಲು ಬಸ್ಸಿನಲ್ಲಿ, ಸೈಕಲ್ಲಿನಲ್ಲಿ, ದ್ವಿಚಕ್ರವಾಹನದಲ್ಲಿ, ರೈಲಿನಲ್ಲಿ, ಟೆಂಪೋದಲ್ಲಿ ಬರುವುದನ್ನು ನೋಡಿದ್ದೀರಿ. ಆದರೆ ಕಾರಿನಲ್ಲಿ? ಅದೂ ಆಡಿ ಎ4 ( Audi A4 Luxury Sedan) ನಲ್ಲಿ ಬಂದಿದ್ದನ್ನು ನೋಡಿದ್ದೀರಾ? ಕೇರಳದ ರೈತನೊಬ್ಬ ತನ್ನ ಆಡಿ ಕಾರಿನಲ್ಲಿ ಮಾರುಕಟ್ಟೆಗೆ ಬರುತ್ತಾನೆ. ಇನ್ನೊಂದು ಟೆಂಪೋದಲ್ಲಿ ಅವನು ಬೆಳೆದ ಸೊಪ್ಪು ಬರುತ್ತದೆ. ಚಪ್ಪಲಿ ಕಳಚಿ ಉಟ್ಟ ಪಂಚೆಯನ್ನು ಬಿಚ್ಚಿ ಕಾರಿನಲ್ಲಿಟ್ಟು ಬರ್ಮುಡಾ ಮೇಲೆ ಸೊಪ್ಪು ಮಾರಲು ರಸ್ತೆ ಬದಿ ನಿಲ್ಲುತ್ತಾನೆ. ರೈತನ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯೇ ಅವನ ಯಶಸ್ಸಿಗೇ ಕಾರಣ ಎಂದು ನೆಟ್ಟಿಗರು ಮನದುಂಬಿ ಇವನನ್ನು ಶ್ಲಾಘಿಸುತ್ತಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿ ಮಾಡಲು ಆಧುನಿಕ ತಂತ್ರಜ್ಞಾನವನ್ನು ಸಹ ಬಳಸುತ್ತಾರೆ. ಇದು ಅವರಿಗೆ ಉತ್ತಮ ಫಲಿತಾಂಶ ಮತ್ತು ಹೆಚ್ಚಿನ ಲಾಭ ತರುತ್ತಿದೆ. ಇದರಲ್ಲಿ ಹಲವರು ನಿಜವಾಗಿಯೂ ಉತ್ತಮ ಜೀವನಶೈಲಿಯನ್ನು ನಿಭಾಯಿಸುತ್ತಿದ್ದಾರೆ. ರಸ್ತೆಬದಿಯಲ್ಲಿ ತರಕಾರಿ ಮಾರಲು ಐಷಾರಾಮಿ ಆಡಿ ಎ4 (Audi a4) ಆಗಮಿಸಿದ ಯುವ ರೈತನ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋವನ್ನು  ರೈತರೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ರೈತರೊಬ್ಬರು ತಮ್ಮ ಜಮೀನಿನಲ್ಲಿ ಎಲೆ ತರಕಾರಿಗಳನ್ನು ಬೆಳೆಯುತ್ತಿರುವುದನ್ನು ನೋಡುತ್ತೇವೆ. ವೀಡಿಯೊದಲ್ಲಿನ ಮುಂದಿನ ಕ್ಲಿಪ್ ಆಡಿ A4 ಐಷಾರಾಮಿ ಸೆಡಾನ್ ಅನ್ನು ತೋರಿಸುತ್ತದೆ. ಕಾರು ಅಂಗಡಿಯೊಂದರ ಮುಂದೆ ಬಂದು ನಿಲ್ಲುತ್ತದೆ. ಇದು ಸಾಮಾನ್ಯವಾಗಿ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರುಕಟ್ಟೆ ಪ್ರದೇಶದಂತೆ ಕಾಣುತ್ತದೆ. ಸೆಡಾನ್‌ನಿಂದ ಹೊರಬರುವ ವ್ಯಕ್ತಿ ಸ್ವತಃ ರೈತ. ಅವನು ಕಾರಿನಿಂದ ಇಳಿದು ತನ್ನ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ಬಳಸುವ ಆಟೋ ರಿಕ್ಷಾಕ್ಕೆ ಹೋಗುತ್ತಾರೆ. ರಸ್ತೆಬದಿಯಲ್ಲಿ ಪ್ಲಾಸ್ಟಿಕ್ ಹಾಳೆಯ ಮೇಲೆ ಸೊಪ್ಪುಗಳನ್ನ ಹಾಕುತ್ತಾರೆ. ಜನರು ಖರೀದಿಸಲು ಪ್ರಾರಂಭಿಸುತ್ತಾರೆ.

ಮಾರಾಟ ಮುಗಿಸಿದ ನಂತರ, ತಮ್ಮ ಐಷಾರಾಮಿ ಕಾರಿನೊಳಗೆ ಹೋಗಿ ತನ್ನ ಶಾರ್ಟ್ಸ್‌ಗೆ ಲುಂಗಿಯನ್ನು ಸುತ್ತಿಕೊಂಡು ನಂತರ ಅವರು ಕಾರಿನೊಳಗೆ ಕುಳಿತುಕೊಂಡು ಹೋಗುತ್ತಾರೆ. ಅಷ್ಟಕ್ಕೂ ಈ ರೈತನ ಹೆಸರು  ಸುಜಿತ್. ಕೇರಳದ ಯುವ ರೈತ 10 ವರ್ಷಗಳಿಂದ ಕೃಷಿ ಮಾಡುತ್ತಿದ್ದು, ರಾಜ್ಯ ಸರಕಾರದಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Shantha Kumari