LDF 10 ವರ್ಷಗಳ ಅಧಿಕಾರ ಅಂತ್ಯ! – ಕೇರಳದಲ್ಲಿ ಭರ್ಜರಿ ಗೆಲುವು ಸಾಧಿಸಿದ UDF!

LDF 10 ವರ್ಷಗಳ ಅಧಿಕಾರ ಅಂತ್ಯ! – ಕೇರಳದಲ್ಲಿ ಭರ್ಜರಿ ಗೆಲುವು ಸಾಧಿಸಿದ UDF!

ಇಡೀ ದೇಶದ ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭೆಯ 140 ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಆಡಳಿತಾರೂಢ ಎಲ್‌ಡಿಎಫ್ ಕನಸು ಭಗ್ನಗೊಂಡಿದೆ. ಎಲ್‌ಡಿಎಫ್ 10 ವರ್ಷಗಳ ಅಧಿಕಾರಕ್ಕೆ ಕೊನೆ ಹಾಡಿರುವ ಯುಡಿಎಫ್ ಮತ್ತೆ ಅಧಿಕಾರಕ್ಕೇರಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ ಪರ್ವ – ಕಾಲಿವುಡ್ ನಟರಿಂದ ವಿಜಯ್ ದಳಪತಿಗೆ ಶುಭಾಶಯ

ಕೇರಳದಲ್ಲಿ ಒಟ್ಟು 140 ವಿಧಾನಸಭಾ ಕ್ಷೇತ್ರಗಳ ಪೈಕಿ ಯುಡಿಎಫ್‌ ಸುಮಾರು 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತ ಪಡೆದಿದೆ. ಈ ಮೂಲಕ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್‌ ಆಡಳಿತಕ್ಕೆ ಅಂತ್ಯ ಹಾಡಿರುವ ಯುಡಿಎಫ್‌ 10 ವರ್ಷದ ಬಳಿಕ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಅವರು ಪುತುಪಳ್ಳಿಯಲ್ಲಿ ಸುಮಾರು 52,907 ಮತಗಳ ಬೃಹತ್ ಅಂತರದಿಂದ ಜಯಗಳಿಸಿದ್ದಾರೆ. ಹರಿಪಾಡ್ ಕ್ಷೇತ್ರದಲ್ಲಿ ರಮೇಶ್ ಚೆನ್ನಿತ್ತಲ 23,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಸ್ಲಿಂ ಲೀಗ್ ತಾನು ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ 23ರಲ್ಲಿ ಮುನ್ನಡೆ ಸಾಧಿಸಿ ಯುಡಿಫ್‌ ಗೆಲುವಿಗೆ ಬಲ ತುಂಬಿದೆ.

LDF 10 ವರ್ಷಗಳ ಅಧಿಕಾರ ಅಂತ್ಯ!

ದಶಕಗಳ ಕಾಲ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಿದ್ದ ಕೇರಳದ ಮತದಾರರು, ಕಳೆದ 2021ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗಕ್ಕೆ ಸತತ ಎರಡನೇ ಬಾರಿಗೆ ಅಧಿಕಾರ ನೀಡುವ ಮೂಲಕ ಇತಿಹಾಸ ಬರೆದಿದ್ದರು. ಈ ಬಾರಿ ಪಿಣರಾಯಿ ‘ಹ್ಯಾಟ್ರಿಕ್’ ಸಾಧನೆಯ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಾಲಿಗೆ ಇದು ಅಸ್ತಿತ್ವದ ಪ್ರಶ್ನೆಯಾಗಿದೆ.

ಎಡರಂಗದ ‘ನವಕೇರಳಂ’ ಅಭಿವೃದ್ಧಿ ಮಾದರಿ ಮತ್ತು ವಿವಿಧ ಕಲ್ಯಾಣ ಯೋಜನೆಗಳು ಸರ್ಕಾರದ ಬಲವಾದ ಅಸ್ತ್ರಗಳಾಗಿವೆ. ಆದರೆ, ನಿರುದ್ಯೋಗ, ದರ ಏರಿಕೆ, ಕೃಷಿ ಕ್ಷೇತ್ರದಲ್ಲಿ ಬಿಕ್ಕಟ್ಟು ಮತ್ತು ರಾಜ್ಯದ ಸಾಲದ ಹೊರೆಯ ಬಗ್ಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ.

ಕಾಂಗ್ರೆಸ್ ಈ ಬಾರಿ ‘ಇಂದಿರಾ ಗ್ಯಾರಂಟಿ’ ಯೋಜನೆಗಳ ಮೂಲಕ ಮಹಿಳೆಯರು ಮತ್ತು ಯುವಕರನ್ನು ಸೆಳೆಯಲು ಮುಂದಾಗಿದೆ.ಇನ್ನೊಂದೆಡೆ, ಬಿಜೆಪಿಯ ಎನ್‌ಡಿಎ ಕೂಟ ಕಳೆದ ಬಾರಿ ಕಳೆದುಕೊಂಡಿದ್ದ ಸ್ಥಾನಗಳನ್ನು ಮರಳಿ ಪಡೆಯಲು ಮತ್ತು ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಳ್ಳಲು ಭಾರಿ ಕಸರತ್ತು ನಡೆಸುತ್ತಿದೆ.

2021 ಫಲಿತಾಂಶ ಹೇಗಿತ್ತು? (ಒಟ್ಟು 140, ಮ್ಯಾಜಿಕ್ ಸಂಖ್ಯೆ: 71)

ಎಲ್‌ಡಿಎಫ್ – 99

ಯುಡಿಎಫ್ – 41

ಎನ್‌ಡಿಎ – 0

Shwetha M