15 ಎಕರೆ ಜಾಗ, 150 ಚಿನ್ನದ ನಾಣ್ಯಗಳು, ಬಿಎಂಡಬ್ಲ್ಯೂ ಕಾರು ಬೇಕೇ ಬೇಕು –ವರದಕ್ಷಿಣೆಗೆ ಕಿರುಕುಳಕ್ಕೆ ಕೇರಳದ ವೈದ್ಯೆ ಬಲಿ

15 ಎಕರೆ ಜಾಗ, 150 ಚಿನ್ನದ ನಾಣ್ಯಗಳು, ಬಿಎಂಡಬ್ಲ್ಯೂ ಕಾರು ಬೇಕೇ ಬೇಕು –ವರದಕ್ಷಿಣೆಗೆ ಕಿರುಕುಳಕ್ಕೆ ಕೇರಳದ ವೈದ್ಯೆ ಬಲಿ

ವಿದ್ಯಾವಂತೆ, ಪ್ರತಿಭಾವಂತೆ, ವೈದ್ಯೆ. ಹೆತ್ತವರಿಗೆ ಇದಕ್ಕಿಂತ ಇನ್ನೇನು ಸಂಭ್ರಮ ಬೇಕು ಹೇಳಿ. ಮಗಳು ಹೆತ್ತವರು ಆಸೆ ಪಟ್ಟಂತೆ ವೈದ್ಯೆಯಾಗಿದ್ದಳು. ಎರಡು ವರ್ಷದ ಹಿಂದಷ್ಟೆ ತಂದೆ ಸಾವನ್ನಪ್ಪಿದ್ದರು. ತಾಯಿ ಜೊತೆ ಮಗಳು ವಾಸವಾಗಿದ್ದಳು. ಅಮ್ಮ ಮಗಳ ನೆಮ್ಮದಿಯ ಜೀವನದಲ್ಲಿ ಬಂದಿದ್ದ ಒಬ್ಬ ಸ್ನೇಹಿತ. ನಂತರ ಪ್ರೀತಿಗೆ ತಿರುಗಿ ಮದುವೆವರೆಗೂ ಹೋಗಿ ನಂತರ ಆಗಿದ್ದೇ ದುರಂತ. ಕೇರಳದಲ್ಲಿ ನಡೆದ ವೈದ್ಯೆಯ ಆತ್ಮಹತ್ಯೆ ಪ್ರಕರಣವೀಗ ದೇಶಾದ್ಯಂತ ಭಾರೀ ಸುದ್ದಿಯಾಗಿದೆ. ವೈದ್ಯಾಧಿಕಾರಿಗಳನ್ನು ಬದುಕಲು ಬಿಡುವುದಿಲ್ಲ ವರದಕ್ಷಿಣೆ ಎಂಬ ಪಿಡುಗು ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಜೊತೆಗೆ ತನಿಖೆಗೆ ಸ್ವತಃ ಕೇರಳ ಸರ್ಕಾರವೇ ಆದೇಶ ನೀಡಿದೆ.

ಇದನ್ನೂ ಓದಿ: ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಎಎಸಿ ಸಿಮೆಂಟ್​ ಕಾರ್ಖಾನೆ ಡೆಪ್ಯುಟಿ ಮ್ಯಾನೇಜರ್​ ಆತ್ಮಹತ್ಯೆ

ಡಾ. ಶಹನಾ ತನ್ನ ತಾಯಿಯೊಂದಿಗೆ ತಿರುವನಂತಪುರಂನಲ್ಲಿ ನೆಲೆಸಿದ್ದರು. ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಡಾ.ಶಹನಾ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಪಿಜಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪರಿಚಯವಾದವರೇ ಡಾ. ರುವೈಸ್. ಪರಿಚಯ ಸ್ನೇಹವಾಗಿ ನಂತರ ಪ್ರೀತಿಗೆ ತಿರುಗಿತ್ತು. ಇಬ್ಬರು ಮದುವೆಯಾಗಲು ಕೂಡಾ ತೀರ್ಮಾನಿಸಿದ್ದರು. ಆದರೆ, ಡಾ. ರುವೈಸ್ ಮನೆಯವರು ದುಡ್ಡಿನ ದಾಹ ಹೊಂದಿದ್ದರು. ಶಹನಾಳನ್ನು ನಮ್ಮ ಮಗ ಮದುವೆಯಾಗಬೇಕು ಎಂದರೆ 150 ಚಿನ್ನದ ನಾಣ್ಯಗಳು, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರು ನೀಡಲೇ ಬೇಕು ಎಂದು  ಬೇಡಿಕೆ ಇಟ್ಟಿದ್ದರು ಎಂದು ಡಾ. ಶಹನಾ ಕುಟುಂಬ ಆರೋಪಿಸಿದೆ. ಅಷ್ಟು ಕೊಡಲು ಸಾಧ್ಯವಿಲ್ಲ. ಜಾಗ ಮತ್ತು ಕಾರು ನೀಡಲು ಪ್ರಯತ್ನ ಮಾಡುತ್ತೇವೆ ಎಂದು ಶಹನಾ ತಾಯಿ ತಿಳಿಸಿದ್ದರು. ಆದರೆ, ಕೇಳಿದಷ್ಟು ವರದಕ್ಷಿಣೆ ಕೊಟ್ಟಿಲ್ಲ ಎಂದು ಗೆಳೆಯ ಡಾ. ರುವೈಸ್ ಮದುವೆ ರದ್ದು ಮಾಡಿಕೊಂಡಿದ್ದಾನೆ. ಇದರಿಂದ ಡಾ.ಶಹನಾ ಖಿನ್ನತೆಗೆ ಒಳಗಾಗಿ ಮಂಗಳವಾರ ಬೆಳಗ್ಗೆ ಸಂಸ್ಥೆಯ ಬಳಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗೆ ಕೇರಳ ಬೆಚ್ಚಿಬಿದ್ದಿದೆ. ವೈದಾಧಿಕಾರಿಗಳನ್ನು ಕೂಡಾ ವರದಕ್ಷಿಣೆ ಎಂಬ ಪಿಡುಗು ಈ ಮಟ್ಟಿಗೆ ಕಾಡುತ್ತದೆ ಎಂದು ಭಾರೀ ಸುದ್ದಿಯಾಗಿದೆ. ಜೊತೆಗೆ ಕೇರಳ ಸರ್ಕಾರ ಕೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಶಹನಾ ತಾಯಿ ವರದಕ್ಷಣಿ ಕಿರುಕುಳದ ಕೇಸ್ ದಾಖಲಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆ ಕಾಯ್ದೆಯಡಿ ವರದಕ್ಷಿಣೆ ಬೇಡಿಕೆ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಪ್ರಕರಣ ದಾಖಲಿಸಲಾಗಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಂತ್ರಸ್ತೆಯ ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಘಟನೆ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ. ಡಿಸೆಂಬರ್ 14ರೊಳಗೆ ಸಂಪೂರ್ಣ ವರದಿಯೊಂದಿಗೆ ಆಯೋಗದ ಮುಂದೆ ಹಾಜರಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ವೀಣಾ ಚಾರ್ಜ್ ಹೇಳಿದ್ದಾರೆ. ಜೊತೆಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.

Sulekha