ಫುಟ್ಬಾಲ್ ಫೈನಲ್ ನಂದೇ ಮದುವೆ – ಮೆಸ್ಸಿ ಜರ್ಸಿ ತೊಟ್ಟ ವರ, ಎಂಬಪ್ಪೆ ಜರ್ಸಿ ತೊಟ್ಟ ವಧು

ಫುಟ್ಬಾಲ್ ಫೈನಲ್ ನಂದೇ ಮದುವೆ – ಮೆಸ್ಸಿ ಜರ್ಸಿ ತೊಟ್ಟ ವರ, ಎಂಬಪ್ಪೆ ಜರ್ಸಿ ತೊಟ್ಟ ವಧು

ಕೇರಳ: ಇತ್ತೀಚಿನ ದಿನಗಳಲ್ಲಿ ಮದುವೆಯ ಸಾಕಷ್ಟು ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವೊಂದು ವಿಡಿಯೋಗಳು ನಮಗೆ ನಗು ತರಿಸಿದರೆ, ಇನ್ನೂ ಕೆಲವು ಭಾವನಾತ್ಮಕವಾಗಿರುತ್ತದೆ. ಇದೀಗ ಕೇರಳದ ನವ ಜೋಡಿಯ ಫುಟ್ಬಾಲ್ ಪ್ರೇಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೇರಳದ ಸಚಿನ್ ಆರ್ ಮತ್ತು ಆರ್ ಅಥಿರಾ ಅವರ ಮದುವೆ ದಿನದಂದು ಫುಟ್ಬಾಲ್ ಫೈನಲ್ ಪಂದ್ಯ ನಡೆಯುತ್ತಿತ್ತು. ಅದಕ್ಕಾಗಿ ಈ ಜೋಡಿ ಮದುವೆ ಮಂಟಪದಲ್ಲಿ ಫ್ರಾನ್ಸ್ ಹಾಗೂ ಆರ್ಜೆಂಟೀನಾದ ನೆಚ್ಚಿನ ಆಟಗಾರರ ಜೆರ್ಸಿ ಧರಿಸಿ ಸಪ್ತಪದಿ ತುಳಿದಿದ್ದಾರೆ.

ಇದನ್ನೂ ಓದಿ:ಅಮೆಜಾನ್ ನಲ್ಲಿ ಬುಕ್ ಮಾಡಿದ್ದು ಮ್ಯಾಕ್​ಬುಕ್ ಪ್ರೊ – ಗ್ರಾಹಕನ ಕೈ ಸೇರಿದ್ದು ಪೆಡಿಗ್ರಿ!

ವರ ಸಚಿನ್, ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ ಅಭಿಮಾನಿಯಾಗಿದ್ದರೆ, ವಧು ಅಥಿರಾ ಎಂಬಪ್ಪೆ ಒಳಗೊಂಡ ಫ್ರಾನ್ಸ್ ಫುಟ್ಬಾಲ್ ತಂಡದ ಬೆಂಬಲಿಗರಾಗಿದ್ದಾರೆ. ಆದರೆ ಇವರ ಮದುವೆ ದಿನವೇ ಫುಟ್ಬಾಲ್ ಫೈನಲ್ ಪಂದ್ಯಾಟವಿದ್ದ ಕಾರಣ ಫುಟ್ಬಾಲ್ ನ ಕಟ್ಟಾ ಅಭಿಮಾನಿಗಳಾದ ಜೋಡಿ ಆಟಗಾರರ ಜೆರ್ಸಿ ಧರಿಸುವ ಮೂಲಕ ತಮ್ಮ ಅಭಿಮಾನವನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಜೋಡಿಗಳು ಜರ್ಸಿ ತೊಟ್ಟ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ ಇವರ ಅಭಿಮಾನಕ್ಕೆ ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

suddiyaana