30ನೇ ವರ್ಷದ ಬರ್ತ್‌ಡೇ ಖುಷಿಗೆ ಬೆತ್ತಲಾಗಿ ಫೋಟೋಗೆ ಪೋಸ್ ಕೊಟ್ಟ ಖ್ಯಾತ ಮಾಡೆಲ್!

ಕಾಲ ಬದಲಾಗ್ತಿದ್ದಂತೆ ಜನರ ಆಚರಣೆಗಳು ಕೂಡ ಬದಲಾಗುತ್ತಿದೆ. ಹಿಂದೆಲ್ಲಾ ಹುಟ್ಟುಹಬ್ಬ ಅಂದ್ರೆ ಅದನ್ನ ಸರಳವಾಗಿ ಆಚರಿಸಲಾಗ್ತಿತ್ತು. ದೇವಸ್ಥಾನಕ್ಕೆ ಹೋಗುತ್ತಿದ್ರು. ಬಳಿಕ ಕೇಕ್ ಕಟ್ ಮಾಡಲು ಶುರುಮಾಡಿದ್ರು. ಆದ್ರೆ ಸೋಶಿಯಲ್ ಮೀಡಿಯಾ ಬಂದ್ಮೇಲೆ ಜನರ ಆಚರಣೆಗಳು ಕೂಡ ಬದಲಾಗ್ತಿದೆ. ಇದೀಗ ಇಲ್ಲೊಬ್ಬರು ಖ್ಯಾತ ಮಾಡೆಲ್ ಬೆತ್ತಲೆಯಾಗಿ ಫೋಟೋಗೆ ಪೋಸ್ ಕೊಟ್ಟು ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇದ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಿ ಭಕ್ತರೇ ಸೈಬರ್ ಕಳ್ಳರ ಟಾರ್ಗೆಟ್! – ದೇಗುಲದ ಹೆಸರಲ್ಲಿ ಮಹಾ ವಂಚನೆ!
ಖ್ಯಾತ ಮಾಡೆಲ್ ಕೆಂಡಾಲ್ ಜೆನ್ನರ್ ನವೆಂಬರ್ 5 ರಂದು 30 ನೇ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಕುಟುಂಬ ಮತ್ತು ಆಪ್ತ ಸ್ನೇಹಿತರೊಂದಿಗೆ 30ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ ಎರಡು ದಿನದ ಬಳಿಕ ಹಾಟ್ ಹಾಟ್ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.
ಕೆಂಡಾಲ್ ಬೀಚ್‌ನಲ್ಲಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಮೊದಲ ಚಿತ್ರದಲ್ಲಿ, ಅವರು ಕ್ಲಾಸಿಕ್ ಕಪ್ಪು ದಾರದ ಬಿಕಿನಿಯನ್ನು ಧರಿಸಿ ಬೀಚ್ ಮುಂದೆ ನಿಂತಿದ್ದಾರೆ. ಮತ್ತೊಂದು ಫೋಟೋ ಅವರು ಹ್ಯಾಮಕ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ತೋರಿಸುತ್ತದೆ. ಆದ್ರೆ ಮತ್ತೊಂದು ಫೋಟೋದಲ್ಲಿ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಬೋಲ್ಡ್ ಫೋಟೋಗಳೊಂದಿಗೆ ಕೆಂಡಾಲ್ ಬೀಚ್‌ನಲ್ಲಿ ನಗ್ನವಾಗಿ ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗ್ತಿದ್ದಂತೆ ಆಕೆಯ ಫ್ಯಾನ್ಸ್ ತರ ತರದ ಕಮೆಂಟ್ಸ್ ಹಾಕುತ್ತಿದ್ದಾರೆ.
View this post on Instagram

ನೋಡಿರಿ

