ಬೇಸಿಗೆಯಲ್ಲಿ ಮೊಬೈಲ್‌ ಬಿಸಿಯಾಗ್ತಿದೆಯೇ? – ಫೋನ್‌ ಕೂಲಾಗಿಡೋ ಸಿಂಪಲ್‌ ಟಿಪ್ಸ್‌!

ಬೇಸಿಗೆಯಲ್ಲಿ ಮೊಬೈಲ್‌ ಬಿಸಿಯಾಗ್ತಿದೆಯೇ? – ಫೋನ್‌ ಕೂಲಾಗಿಡೋ ಸಿಂಪಲ್‌ ಟಿಪ್ಸ್‌!

ಈಗಿನ ಮೊಬೈಲ್‌ ದುನಿಯಾದಲ್ಲಿ ಹಿಡಿದಿದ್ದಕ್ಕೆ ಮುಟ್ಟಿದ್ದಕ್ಕೆಲ್ಲಾ ಮೊಬೈಲ್‌ ಬೇಕೇ ಬೇಕು.. ಆದ್ರೀಗ ಬೇಸಿಗೆ ಬಂದು ಬಿಟ್ಟಿದೆ.. ಈ ಬೇಸಿಗೆಯಲ್ಲಿ ಸ್ವಲ್ಪ ಹೊರಗೆ ಓಡಾಡಿದ್ರೆ ಸಾಕು, ಕೇವಲ ನೆತ್ತಿ ಮೇಲಿನ ಸೂರ್ಯ ಮಾತ್ರ ಸುಡೋದಲ್ಲ..  ಕೈಯಲ್ಲಿರುವ ಮೊಬೈಲ್‌ ಕೂಡ ಸುಡೋದಿಕ್ಕೆ ಶುರುವಾಗುತ್ತದೆ.. ಇದಕ್ಕೆ ಕಾರಣ ನಿಮ್ಮ ಸ್ಮಾರ್ಟ್‌ ಫೋನ್‌.

ಬಿರುಬಿಸಿನಲ್ಲಿ ಮೊಬೈಲ್‌ನಲ್ಲಿ ಮಾತಾಡುತ್ತಾ ನಡೆಯುತ್ತಿರುವಾಗ ಫೋನ್‌ ಸಿಕ್ಕಾಪಟ್ಟೆ ಬಿಸಿಯಾಗುತ್ತಿರುವ ಅನುಭವ ಆಗುತ್ತದೆ. ನೇರವಾಗಿ ಸೂರ್ಯನ ಬಿಸಿಲು ಮೊಬೈಲ್‌ ಮೇಲೆ ಬಿದ್ದಾಗ ಅದು ಸಿಕ್ಕಾಪಟ್ಟೆ ಹೀಟ್‌ ಆಗೋದಿಕ್ಕೆ ಶುರುವಾಗುತ್ತದೆ. ಯಾಕಂದ್ರೆ ನಿಮ್ಮ ಮೊಬೈಲ್‌ ಸೂರ್ಯನ ಶಾಖವನ್ನು ಹೀರಿಕೊಳ್ಳಲು ಶುರು ಮಾಡುತ್ತದೆ.. ಇದಕ್ಕಾಗಿಯೇ ಸೂರ್ಯನ ಶಾಖ ನೇರವಾಗಿ ಮೊಬೈಲ್‌ ಮೇಲೆ ಬೀಳುವುದರಿಂದ ತಪ್ಪಿಸಿ. ಜೊತೆಗೆ ಒಮ್ಮೆ ನಿಮ್ಮ ಮೊಬೈಲ್‌ ಹೀಟ್‌ ಆಗೋದಿಕ್ಕೆ ಶುರುವಾಗಿದೆ ಅಂತ ಗೊತ್ತಾದಕ್ಷಣ ಅದರ ಬಳಕೆ ನಿಲ್ಲಿಸಿ.

ಇದನ್ನೂ ಓದಿ: ಶ್ವಾನ ಪ್ರಿಯರೇ ಹುಷಾರ್‌.. – ಇನ್ಮುಂದೆ ಪಿಟ್​ಬುಲ್​, ಬುಲ್​ ಡಾಗ್​ ಸೇರಿ 23 ತಳಿಗಳನ್ನು ಸಾಕಂಗಿಲ್ಲ!

ಫೋನ್‌ನಲ್ಲಿ ಮಾತಾಡುತ್ತಿರುವಾಗಲೇ ಬಿಸಿಯಾಗಿದೆ ಅಂತಾದ್ರೆ ಕಾಲ್‌ ಕಟ್‌ ಮಾಡಿ.. ಫ್ಯಾನ್ ಅಥವಾ ಎಸಿ ಇದ್ದಲ್ಲಿ ಸ್ವಲ್ಪ ಹೊತ್ತು ಫೋನ್‌ಗೆ ಗಾಳಿ ತಾಗುವಂತೆ ಇಡಿ.. ಇದರಿಂದ ಬೇಗನೆ ನಿಮ್ಮ ಮೊಬೈಲ್‌ ಕೂಲ್‌ ಆಗುತ್ತದೆ.. ಆದ್ರೆ ಹೀಟ್‌ ಆಗ್ತಿದ್ದರೂ ತಲೆಕೆಡಿಸಿಕೊಳ್ಳದೆ ಅದನ್ನೇನಾದ್ರೂ ಚಾರ್ಜ್‌ಗೆ ಇಟ್ಟು ಮಾತು ಮುಂದುವರೆಸಿದ್ರೆ ನಿಮ್ಮ ಮೊಬೈಲ್‌ ಬ್ಲಾಸ್ಟ್‌ ಆಗಬಹುದು.. ಇದನ್ನು ತಪ್ಪಿಸಬೇಕು ಅಂದ್ರೆ ನಿಮ್ಮ ಮೊಬೈಲ್‌ ಬ್ಯಾಟರಿ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.. ಸಾಮಾನ್ಯವಾಗಿ ಮೊಬೈಲ್‌ ಹೀಟ್‌ ಆಗೋದು ಚಾರ್ಜಿಂಗ್‌ನಲ್ಲಿ ಇರುವಾಗಲೇ ಫೋನ್‌ನಲ್ಲಿ ಮಾತಾಡ್ತಾ ಕುಳಿತಾಗ.. ಅದರಲ್ಲೂ ಬೇರೆ ಕಂಪನಿಗಳ ಮೊಬೈಲ್‌ ಚಾರ್ಜರ್‌ ಬಳಸಿದ್ರೆ ಅಪಾಯ ಮತ್ತಷ್ಟು ಜಾಸ್ತಿ.. ಅದಕ್ಕಾಗಿ ಯಾವ ಕಂಪನಿಯ ಮೊಬೈಲ್‌ ಇದೆಯೋ.. ಅದೇ ಕಂಪನಿಯ ಚಾರ್ಜರ್‌ ಬಳಸುವುದು ಅತ್ಯುತ್ತಮ..

ಇನ್ನು ಮೊಬೈಲ್‌ ಚಾರ್ಜಿಂಗ್‌ನಲ್ಲಿ ಇರುವಾಗ ಯಾವುದೇ ಕಾರಣಕ್ಕೂ ಅದನ್ನು ಬಳಸಬಾರದು. ಇದರ ಜೊತೆಗೆ ಮೊಬೈಲ್‌ ಬಳಸುತ್ತಿರುವಾಗ ಸಿಕ್ಕಾಪಟ್ಟೆ ಬಿಸಿಯಾಗ್ತಿದೆ ಅಂತಾದ್ರೆ ಜಿಪಿಎಸ್‌ ಲೊಕೇಷನ್‌ ಮತ್ತು ಬ್ಲೂಟೂತ್‌ಗಳನ್ನು ಆಫ್‌ ಮಾಡಿ.. ಇದ್ರಿಂದಾಗಿ ಮೊಬೈಲ್‌ ಬ್ಯಾಟರಿ ಹಾಗೂ ಪ್ರಾಸೆಸರ್‌ ಮೇಲಿನ ಒತ್ತಡ ಕಡಿಮೆಯಾಗಿ ಮೊಬೈಲ್‌ ಸ್ವಲ್ಪ ಕೂಲ್‌ ಆಗುತ್ತದೆ.. ಇದೇ ವೇಳೆ ಮೊಬೈಲ್‌ ಸ್ಕ್ರೀನ್‌ನ ಬ್ರೈಟ್‌ನೆಸ್‌ ಕಡಿಮೆ ಮಾಡುವುದು ಕೂಡ ಒಳ್ಳೆಯದು. ಇದು ಕೂಡ ಮೊಬೈಲ್‌ನ ಸ್ಕ್ರೀನ್‌ ಸಿಕ್ಕಾಪಟ್ಟೆ ಹೀಟ್‌ ಆಗೋದನ್ನು ತಪ್ಪಿಸುತ್ತದೆ.. ಇದರ ಜೊತೆಗೆ ನೀವು ಬಳಸದೆ ಇರುವ ಆ್ಯಪ್‌ಗಳಿದ್ದರೆ, ಅವುಗಳನ್ನು ಡಿಲೀಟ್‌ ಮಾಡುವುದು ಕೂಡ ಒಳ್ಳೆಯದು. ಯಾಕಂದ್ರೆ ಇಂತಹ ಆ್ಯಪ್‌ಗಳು ನಿಮಗೆ ಗೊತ್ತಿಲ್ಲದಂತೆ ಕಾರ್ಯನಿರ್ವಹಿಸುತ್ತಾ ಬ್ಯಾಟರಿಯನ್ನು ಬಳಸಿಕೊಳ್ಳುತ್ತಿರುತ್ತವೆ. ಇಂತಹ ಸಿಂಪಲ್‌ ಕ್ರಮಗಳಿಂದ ಮೊಬೈಲ್‌ ಕೂಲ್‌ ಆಗಿರುವಂತೆ ನೋಡಿಕೊಳ್ಳಬಹುದು.. ನಿಮ್ಮ ಮೊಬೈಲ್‌ ಬಗ್ಗೆ ನೀವು ಮೊದಲು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ.. ಇಲ್ಲದೇ ಹೋದ್ರೆ ಮೊಬೈಲ್‌ ಬ್ಲಾಸ್ಟ್‌ ಆದಾಗ ಅದರ ನೇರ ಪರಿಣಾಮ ಎದುರಿಸುವ ಮೊದಲ ವ್ಯಕ್ತಿ ನೀವೇ ಆಗಿರುವ ಸಾಧ್ಯತೆಗಳು ಹೆಚ್ಚು.

Shwetha M