5ಜಿ ಮೊಬೈಲ್ ಖರೀದಿಸುವ ಮೊದಲು ಈ ಅಂಶಗಳನ್ನು ನೆನಪಲ್ಲಿಟ್ಟುಕೊಳ್ಳಿ……
ಭಾರತದಲ್ಲಿ 5ಜಿ ತಂತ್ರಜ್ಞಾನ ಭಾರಿ ಸುದ್ದಿಯಲ್ಲಿದೆ. ಈ ಕಾರಣದಿಂದ ಹಲವಾರು ಮೊಬೈಲ್ ಕಂಪನಿಗಳು 4ಜಿ ಮೊಬೈಲ್ ಬದಲಾಗಿ 5ಜಿ ಮೊಬೈಲ್ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಈಗಾಗಲೇ ಗೂಗಲ್ ಪಿಕ್ಸೆಲ್, ಸ್ಯಾಮ್ಸಂಗ್, ಒಪ್ಪೋ, ರಿಯಲ್ ಮಿ, ವಿವೊ, ಪೋಕೊ ಮೊಬೈಲ್ ತಯಾರಿಕಾ ಕಂಪನಿಗಳು 5 ಜಿ ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.
ಇದನ್ನೂ ಓದಿ: 5ಜಿ ಯುಗ – ಇನ್ನು ಮುಂದೆ ಬಟ್ಟೆಯಲ್ಲೇ ಮೊಬೈಲ್ ಚಾರ್ಜ್ ಮಾಡಬಹುದು!
5ಜಿ ಸೆಟ್ ಇದೆಯೆಂದು ನಿಮಗೆ 5 ಜಿ ನೆಟ್ವರ್ಕ್ ಸಿಗುವುದಿಲ್ಲ. ನಾವಿರುವ ಪ್ರದೇಶದಲ್ಲಿ 5ಜಿ ಬರಬೇಕೆಂದರೆ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳಲೇಬೇಕು. ಮೊದಲನೆಯದ್ದು ನಿಮಗೆ 5ಜಿ ನೆಟ್ವರ್ಕ್ ಹೊಂದಾಣಿಕೆಯಾಗಲು 5ಜಿ ಮೊಬೈಲ್ ಬೇಕಾಗುತ್ತದೆ. ಅಷ್ಟೇ ಇದ್ದರೆ ಸಾಕಾಗುವುದಿಲ್ಲ.
ಬೆಂಬಲಿತ ಚಿಪ್ಸೆಟ್ ಗಾಗಿ ಪರಿಶೀಲನೆ ಅಗತ್ಯ!5ಜಿ ಫೋನ್ 5ಜಿ ಬೆಂಬಲಿತ ಅಗತ್ಯ ಚಿಪ್ಸೆಟ್ (Chipset) ಅನ್ನು ಹೊಂದಿರುವುದು ಅಗತ್ಯ. Qualcomm ಮತ್ತು MediaTek ನಂತಹ ಕಂಪನಿಗಳು 5ಜಿ ಫೋನ್ ಗಳಲ್ಲಿ ತಮ್ಮ ಚಿಪ್ಸೆಟ್ ಗಳನ್ನು ನೀಡುತ್ತವೆ. ಆದ್ದರಿಂದ ನೀವು ಖರೀದಿಸಲು ಬಯಸುವ ಫೋನ್ ನ ಹಾರ್ಡ್ವೇರ್ ಅನ್ನು ಪರೀಕ್ಷಿಸಲು ಮರೆಯದಿರಿ. ಉದಾಹರಣೆಗೆ : ಸ್ನಾಪ್ಡ್ರಾಗನ್ (Snapdragon) 480, 5ಜಿ ಚಿಪ್ಸೆಟ್ ಆಗಿದ್ದು, ಸ್ನಾಪ್ಡ್ರಾಗನ್ 680 4ಜಿ ಬೆಂಬಲಿತವಾಗಿದೆ. ಹಾಗೆಯೇ, MediaTek ಅದಕ್ಕಿಂತ ಹೆಚ್ಚಿನ ಡೈಮೆನ್ಸಿಟಿ ಇರುವ ಚಿಪ್ಸೆಟ್ ಅನ್ನು ಹೊಂದಿದ್ದು ಅದು 5ಜಿಯನ್ನು ಬೆಂಬಲಿಸುತ್ತದೆ.
ನಿಮ್ಮ ಫೋನ್ ಅಪ್ಡೇಟ್ ಪಡೆಯುವಂತಿರಲಿ
ಫೋನ್ ಖರೀದಿಸುವಾಗ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಕೆಲವು ಫೋನ್ ಗಳು 5ಜಿ ಅನ್ನು ಹೊಂದಿಕೊಳ್ಳುತ್ತವೆ. ಆದರೆ ಭಾರತದಲ್ಲಿ ನೆಟ್ವರ್ಕ್ ಅನ್ನು ಸಕ್ರಿಯಗೊಳಿಸಲು ಅವರಿಗೆ 5ಜಿ ಅಪ್ಡೇಟ್ ಅಗತ್ಯವಿದೆ. ಕೆಲವು ನಿರ್ದಿಷ್ಟ ಕಂಪನಿಗಳ ಫೋನ್ ಗಳು ಇನ್ನೂ 5ಜಿಗೆ ಅಪ್ಡೇಟ್ ಕೊಡುತ್ತಿಲ್ಲ. ಹೀಗಾಗಿ ಯಾವ ಕಂಪನಿಯ ಮೊಬೈಲ್ ನಲ್ಲಿ ಅಪ್ಡೇಟ್ ಸಿಗುತ್ತದೆ ಎನ್ನುವುದನ್ನು ಮೊದಲು ದೃಢಪಡಿಸಿಕೊಳ್ಳಿ. ನಿಮ್ಮ ಬಜೆಟ್ ಗೆ ಅನುಗುಣವಾಗಿ, 5ಜಿ ನೆಟ್ ವರ್ಕ್ ಗೆ ಬೇಕಾದ ಅಪ್ಡೇಟ್ ಇರುವ ಮೊಬೈಲ್ ಕಂಪನಿಯ ವೆಬ್ ಸೈಟ್ ಗಳನ್ನು ಪರಿಶೀಲಿಸಿಕೊಂಡರೆ ಕಿರಿಕಿರಿ ದೂರ ಮಾಡಿಕೊಳ್ಳಬಹುದು.
ಉತ್ತಮ ಬ್ಯಾಟರಿ ಬ್ಯಾಕ್ಅಪ್
5ಜಿ ನೆಟ್ವರ್ಕ್ ಬಳಕೆ ವೇಳೆ ನಿಮ್ಮ ಡೇಟಾ ಬ್ಯಾಂಡ್ವಿಡ್ತ್ ಮತ್ತು ನಿಮ್ಮ ಫೋನ್ ನ ಬ್ಯಾಟರಿಯನ್ನು ಬೇಗ ಖಾಲಿ ಮಾಡುತ್ತದೆ. ಆದ್ದರಿಂದ ನೀವು ಕನಿಷ್ಟ 5000 mAh ಬ್ಯಾಟರಿ ಸಾಮರ್ಥ್ಯದ ಫೋನ್ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ. ವೇಗದ ಚಾರ್ಜಿಂಗ್ ಗೆ ಹೊಂದಿಕೊಳ್ಳುವ ಫೋನ್ ಖರೀದಿಸುವುದೂ ಉತ್ತಮ ಮಾರ್ಗ.