ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಕೆಡಿ ಪೋಸ್ಟರ್ ರಿಲೀಸ್ – ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಆ್ಯಕ್ಷನ್ ಪ್ರಿನ್ಸ್

ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಕೆಡಿ ಪೋಸ್ಟರ್ ರಿಲೀಸ್ – ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಆ್ಯಕ್ಷನ್ ಪ್ರಿನ್ಸ್

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿ ಕೆಡಿ ಸಿನಿಮಾ ತಂಡ ಧ್ರುವ ಸರ್ಜಾ ಅವರಿಗೆ ಭರ್ಜರಿ ಗಿಫ್ಟ್ ನೀಡಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಧ್ರುವ ಸರ್ಜಾ ಜನ್ಮ ದಿನಕ್ಕೆ ಉಡುಗೊರೆಯಾಗಿ ಹೊರ ಬಂದ ಈ ಪೋಸ್ಟರ್ ಅಲ್ಲಿ ಧ್ರುವ ಲುಕ್ ನೋಡಲು ಭಯಂಕರವಾಗಿದೆ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ RRR ಶಕ್ತಿ – ಶೆಟ್ರು ಟೀಂಗೆ ಬೆಂಕಿ ಹಚ್ಚುತ್ತಿದ್ದಾರಾ?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಅಕ್ಟೋಬರ್ 6ರಂದು ಜನ್ಮದಿನದ ಸಂಭ್ರಮ. ಧ್ರುವ ಸರ್ಜಾ (Dhruva Sarja) 37ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಕೆಡಿ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಧ್ರುವ ಲುಕ್ ನೋಡಿ ಅಭಿಮಾನಿಗಳು ಸರ್‌ಪ್ರೈಸ್ ಆಗಿದ್ದಾರೆ. ಶಾರ್ಟ್ ಹೇರ್ ಸ್ಟೈಲ್ ಇದೆ. ರಕ್ಷಸಿಕ್ತ ಮಚ್ಚು ಇದೆ. ಹೆಗಲ ಮೇಲೆ ಚಳಿಗೆ ಬಳಕೆ ಮಾಡೋ ಮಫ್ಲರ್ ಇದೆ. ಕಾಗದದಲ್ಲಿರೋದನ್ನ ಚಪ್ಪರಿಸಿ ತಿನ್ನುತ್ತಿದ್ದಾರೆ. ಧ್ರುವ ಸರ್ಜಾ ಹಿಂದೆ ಒಂದಷ್ಟು ಜನ ಇದ್ದಾರೆ. ಎಲ್ಲರ ಕೈಯಲ್ಲೂ ಕಂದೀಲು ಇದೆ. ಧ್ರುವ ಸರ್ಜಾ ಪಕ್ಕದಲೂ ಒಂದು ಲಾಟೀನು ಇದೆ.

ಧ್ರುವ ಸರ್ಜಾ ಕೆಡಿ ಪೋಸ್ಟರ್ ಭಯಂಕರವಾಗಿಯೇ ಇದೆ. ಧ್ರುವ ಇಲ್ಲಿ ರಾತ್ರಿ ಗಸ್ತು ಹೊಡೆಯೋಕೆ ಹೊರಟವರ ರೀತಿನೇ ಕಾಣಿಸುತ್ತಿದ್ದಾರೆ. ಊಟ ಮಾಡಿಯೇ ಹೋಗ್ತಿದ್ದಾರೆ ಅನಿಸುತ್ತದೆ. ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿವರೆಗೂ ಬಿಟ್ಟಿರೋ ಪೋಸ್ಟರ್‌ಗಳಲ್ಲಿ ಲಾಂಗ್ ಹೇರ್‌ ಸ್ಟೈಲ್ ಇದೆ. ಇದು ಅಷ್ಟೆ ಗಮನ ಕೂಡ ಸೆಳೆದಿದೆ. ಆದರೆ, ಇದೀಗ ಬಿಟ್ಟಿರೋ ಲುಕ್ ಬೇರೆ ಇದೆ. ಇದಕ್ಕಾಗಿಯೇ ಧ್ರುವ ಸರ್ಜಾ ಶಾರ್ಟ್ ಹೇರ್ ಲುಕ್ ಮೆಂಟೇನ್ ಮಾಡಿದ್ದಾರೆ. ಜೈಲಿನಿಂದ ತಪ್ಪಿಸಿಕೊಂಡು ಬಂದ ರೀತಿನೇ ಕಾಣಿಸುತ್ತಿದ್ದಾರೆ. ಕೆಡಿ ಸಿನಿಮಾದ ಡೈರೆಕ್ಟರ್ ಜೋಗಿ ಪ್ರೇಮ್. ಇವರು ಈ ಚಿತ್ರದಲ್ಲಿ ನಾಯಕನಿಗೆ ರಗಡ್ ಲುಕ್ ನೀಡಿದ್ದಾರೆ

Sulekha