ಕೆಡಿ ಸಿನಿಮಾ ಹಾಡಿನ ವಿವಾದ – ಗಾಯಕಿ ಐಶ್ವರ್ಯಾ ರಂಗರಾಜನ್ ಇನ್ಸ್ಟಾಗ್ರಾಂ ಅಕೌಂಟ್‌ ಮಾಯ!

ಕೆಡಿ ಸಿನಿಮಾ ಹಾಡಿನ ವಿವಾದ – ಗಾಯಕಿ ಐಶ್ವರ್ಯಾ ರಂಗರಾಜನ್ ಇನ್ಸ್ಟಾಗ್ರಾಂ ಅಕೌಂಟ್‌ ಮಾಯ!

ಕೆಡಿ ಸಿನಿಮಾದ ಹಾಡು ವಿವಾದಕ್ಕೆ ಗುರಿಯಾಗಿದೆ. ಸರ್ಸೆ ಸೆರಗ ಸರ್ಸೆ ಹಾಡಿನಲ್ಲಿನ ಅಶ್ಲೀಲ ಸಾಹಿತ್ಯಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಇದೀಗ ಚಿತ್ರ ತಂಡ ಕಾನೂನು ಸಂಕಷ್ಟ ಎದುರಿಸುತ್ತಿದೆ. ಮತ್ತೊಂದ್ಕಡೆ ಹಿಂದಿ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಇದೀಗ ಈ ಹಾಡಿನ ಗಾಯಕಿ ಐಶ್ವರ್ಯಾ ರಂಗರಾಜನ್‌ ಅವರ ಸೋಶಿಯಲ್‌ ಮೀಡಿಯಾ ಖಾತೆ ಏಕಾಏಕಿ ನಾಪತ್ತೆಯಾಗಿದೆ.

ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆ! – ಎಲ್ಲೆಲ್ಲಿ ಆರೆಂಜ್ ಅಲರ್ಟ್?

ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರದ ಸರ್ಸೆ ಸೆರಗ ಸರ್ಸೆ  ಹಾಡು ಮಾರ್ಚ್ 14ರಂದು ಬಿಡುಗಡೆ ಆಗಿತ್ತು. ಹಾಡಿನ ಸಾಹಿತ್ಯಕ್ಕೆ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಹಿಂದಿ ವರ್ಷನ್‌ ಸಾಂಗ್‌ನ ಯೂಟ್ಯೂಬ್‌ನಿಂದ ಡಿಲೀಟ್‌ ಮಾಡಲಾಗಿದೆ. ಆದ್ರೀಗ ಗಾಯಕಿ ಐಶ್ವರ್ಯಾ ರಂಗರಾಜನ್‌ ಅವರ ಇಸ್ಟಾಗ್ರಾಂ ಖಾತೆ ನಾಪತ್ತೆಯಾಗಿದೆ. ಐಶ್ವರ್ಯ ಅವರ ಖ್ಯಾತೆಯನ್ನ ರಿಪೋರ್ಟ್‌ ಮಾಡಲಾಗಿದ್ಯಾ ಅಥವಾ ಅವರೇ ಸೋಶಿಯಲ್‌ ಮೀಡಿಯಾದಿಂದ ಹಿಂದೆ ಸರಿದ್ರಾ ಅನ್ನೋದು ಇನ್ನೂ ರಿವೀಲ್‌ ಆಗಿಲ್ಲ. ಖಾತೆಯನ್ನು ಡಿ ಆ್ಯಕ್ಟಿವೇಟ್ ಮಾಡಲು ಕಾರಣ ಏನು ಎಂಬ ವಿಚಾರ ಗೊತ್ತಾಗಿಲ್ಲ. ಈಗ ಹಾಡಿನ ವಿವಾದ ಸಂದರ್ಭದಲ್ಲೇ ಅವರು ಡಿ ಆ್ಯಕ್ಟಿವೇಟ್ ಮಾಡಿರುವುದರಿಂದ ಸಾಕಷ್ಟು ಚರ್ಚೆ ಆಗಿದೆ.

ಇನ್ನು ಸರ್ಸೆ ನಿನ್ನ ಸೆರಗ ಸರ್ಸೆ ಸಾಂಗ್​​​ನ ಲಿರಿಕ್ಸ್​​ನ ಸಂಪೂರ್ಣವಾಗಿ ಬದಲಿಸಿ ಹೊಸ ಹಾಡಿನ ಮೂಲಕ ಬರೋದಾಗಿ ಜೋಗಿ ಪ್ರೇಮ್ ಹೇಳಿದ್ದಾರೆ. ಮತ್ತೊಂದ್ಕಡೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಚಿತ್ರತಂಡಕ್ಕೆ ನೋಟಿಸ್‌ ನೀಡಿದೆ. ನಿರ್ದೇಶಕ ಪ್ರೇಮ್‌ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ಮಟ್ಟಕ್ಕೆ ತಲುಪಲಿದೆ ಅನ್ನೋದನ್ನ ಕಾದು ನೋಡ್ಬೇಕು.

Shwetha M