ಹೊರಗೆ ಹೋಗ್ತಿದ್ದಂತೆ ಬ್ಲಾಕ್ ಮಾಡ್ತೀನಿ – ಕೊನೇ ಹಂತದಲ್ಲಿ ಗಿಲ್ಲಿಗೆ ಕೈ ಕೊಟ್ಟ ಕಾವ್ಯ

ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಕೌಂಟ್ಡೌನ್ ಶುರುವಾಗಿದೆ. ದೊಡ್ಮನೆಯಲ್ಲಿ ಗಿಲ್ಲಿ ಮತ್ತು ಕಾವು ಕಾಂಬಿನೇಷನ್ ವೀಕ್ಷಕರಿಗೂ ಇಷ್ಟವಾಗಿದೆ. ಇದೀಗ ಕಾವ್ಯ ಇಷ್ಟು ದಿನ ಜೊತೆಯಲ್ಲಿದ್ದ ಗೆಳೆಯನಿಗೆ ಸವಾಲ್ ಹಾಕಿದ್ದಾನೆ.
ಇದನ್ನೂ ಓದಿ:ಹೋಗೇ, ಬಾರೇ ಅನ್ನಬಾರದಿತ್ತು.. ತುಂಬಾ ನೋವು ಮಾಡಿದ್ದೀನಿ! – ಅಶ್ವಿನಿ ಗೌಡ ಬಳಿ ಕ್ಷಮೆ ಕೇಳಿದ ಗಿಲ್ಲಿ!
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ-ಕಾವ್ಯಾ ಜೋಡಿ ಅನೇಕರಿಗೆ ಇಷ್ಟವಾಗಿದೆ. ಕಾವು ಕಾವು ಎಂದು ಗಿಲ್ಲಿ ಹಿಂದೆ ಹಿಂದೆ ಹೋಗುವುದು, ಹೋಗೋ ಗಿಲ್ಲಿ ಅಂತಾ ಕಾವ್ಯ ರೇಗುವುದು. ಇವರ ಈ ಗೆಳೆತನ ವೀಕ್ಷಕರಿಗೆ ಇಷ್ಟವಾಗಿದೆ. ಆದರೆ, ಗುರುವಾರದ ಎಪಿಸೋಡ್ನಲ್ಲಿ ಕಾವ್ಯ ಹೇಳಿರುವ ಒಂದು ಮಾತು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಗ್ ಬಾಸ್ ನೀಡಿದ ಚಟುವಟಿಕೆಯಲ್ಲಿ ಕಾವ್ಯಾ, ಗಿಲ್ಲಿಗೆ ತಾವು ಮಾಡಿರುವ ತಪ್ಪುಗಳ ಬಗ್ಗೆ ಮಾತನಾಡಿ, ಕ್ಷಮೆ ಯಾಚಿಸಿದರು. ಈ ವೇಳೆ, ಹೊರಗೆ ಹೋಗ್ತಿದ್ದಂತೆ ನಿನ್ನನ್ನು ಬ್ಲಾಕ್ ಮಾಡ್ತೀನಿ ಎಂದು ಕಾವ್ಯಾ ಹೇಳಿದರು. ಈ ಮಾತು ಗಿಲ್ಲಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ ವಾರ ಇದು. ಎಲ್ಲಾ ಹಂತದಲ್ಲೂ ಕಾವ್ಯ ಜೊತೆ ನಿಂತವರು ಗಿಲ್ಲಿ. ಕಾವ್ಯ ಬೇರೆಯವರ ಜೊತೆ ಜಗಳವಾಡಿದಾಗ, ಕಾವ್ಯ ಕಣ್ಣೀರು ಹಾಕಿದಾಗ ಜೊತೆಗಿದ್ದವರು ಗಿಲ್ಲಿ. ಕಾವು ಅಂತಾ ಗಿಲ್ಲಿ ಕರೆದ ಮೇಲೆಯೇ ಕಾವ್ಯ ವೀಕ್ಷಕರಿಗೂ ಇಷ್ಟವಾಗುತ್ತಾ ಹೋಗಿದ್ದರು. ಇದೀಗ ಇಷ್ಟುದಿನದವರೆಗೆ ಗಿಲ್ಲಿ ಜೊತೆಗಿದ್ದ ಕಾವ್ಯ, ಹೊರಗೆ ಹೋಗುತ್ತಿದ್ದಂತೆ ನಿನ್ನನ್ನು ಬ್ಲಾಕ್ ಮಾಡ್ತೀನಿ ಅಂತಾ ಹೇಳಿದ್ದಾರೆ. ಇದಕ್ಕೆ ಗಿಲ್ಲಿ ಕೂಡಾ ತಿರುಗೇಟು ನೀಡಿದ್ದಾರೆ. ‘ನಾನು ಕಾಯ್ತಾ ಇದೀನಿ. ಧೈರ್ಯ ಇದ್ರೆ ಮಾಡು’ ಎಂದು ಸವಾಲು ಹಾಕಿದರು. ಗಿಲ್ಲಿಗೆ ಹೊರಗಡೆ ಹೇಗೆ ಫ್ಯಾನ್ಸ್ ಕ್ರೇಜ್ ಇದ್ದಾರೆ ಅಂತಾ ನೋಡಿದ ಮೇಲೆ ಕಾವ್ಯ ಯಾವ ತೀರ್ಮಾನ ತಗೊಳ್ತಾರೋ ಕಾದು ನೋಡಬೇಕಿದೆ.

ನೋಡಿರಿ

