ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ರಾ ಕಾವ್ಯ? – ಕಾವು ನಿರ್ಧಾರಕ್ಕೆ ರಣರಂಗವಾಯ್ತು ಬಿಗ್‌ಬಾಸ್‌ ಮನೆ!  

ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ರಾ ಕಾವ್ಯ? – ಕಾವು ನಿರ್ಧಾರಕ್ಕೆ ರಣರಂಗವಾಯ್ತು ಬಿಗ್‌ಬಾಸ್‌ ಮನೆ!  

ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್‌ ವಿಚಾರ ಬಂದ್ರೆ ಕಿತ್ತಾಟ ಫಿಕ್ಸ್‌ ಅಂತಾನೇ ಲೆಕ್ಕ. ಫ್ರೆಂಡು ಫ್ರೆಂಡು ಅಂತ ಹೇಳ್ತಾ ಜೊತೆಗಿದ್ದವರನ್ನೇ ನಾಮಿನೇಟ್ ಮಾಡುತ್ತಾರೆ. ಇದ್ರಿಂದಾಗಿ ಮನೆ ರಣರಂಗವಾಗಿ ಬಿಡುತ್ತದೆ. ಈ ವಾರ ಕೂಡ ನಾಮಿನೇಷನ್‌ ಪ್ರಕ್ರಿಯೆ ನಡೆದಿದೆ. ಕಾವ್ಯ  ಫ್ರೆಂಡು ಫ್ರೆಂಡು ಅಂತಿದ್ದ ಗಿಲ್ಲಿ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ ನಾಮಿನೇಷನ್‌ ವಿಚಾರಕ್ಕೆ ರಜತ್‌ ಹಾಗೂ ಧ್ರುವಂತ್‌ ಮಧ್ಯೆ ಮಾರಾಮಾರಿ ಆಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ – ಯತೀಂದ್ರಗೆ ಕೌಂಟರ್ ಕೊಟ್ಟ ಡಿ ಕೆ ಶಿವಕುಮಾರ್

ಬಿಗ್‌ ಬಾಸ್‌ ಮನೆಯ ಆಟ ರೋಚಕತೆಯಿಂದ ಕೂಡಿದೆ. ದೊಡ್ಮನೆಗೆ ಜಂಟಿಯಾಗಿ ಎಂಟ್ರಿಕೊಟ್ಟಿದ್ದ ಗಿಲ್ಲಿ ಕಾವ್ಯ ಜೋಡಿ ಆರಂಭದಿಂದಲೂ ಸಖತ್‌ ಹೈಲೈಟ್‌ ಆಗಿದ್ದಾರೆ. ಗಿಲ್ಲಿ- ಕಾವ್ಯ ಸ್ನೇಹ ವೀಕ್ಷಕರಿಗೂ ತುಂಬಾ ಇಷ್ಟ. ಕಾವ್ಯ ಕೂಡ ಗಿಲ್ಲಿಯನ್ನ ಯಾವತ್ತೂ ಬಿಟ್ಟುಕೊಟ್ಟಿರ್ಲಿಲ್ಲ. ಆದ್ರೆ ಇತ್ತೀಚೆಗೆ ಕಾವ್ಯ ಗಿಲ್ಲಿ ವಿರುದ್ಧ ತಿರುಗಿ ಬಿದ್ದಂತೆ ಕಾಣ್ತಿದೆ. ಗಿಲ್ಲಿ ಬಗ್ಗೆ ಹಿಂದೆಯಿಂದ ಮಾತನಾಡಿಕೊಂಡಿದ್ದು ಮಾತ್ರವಲ್ಲದೇ, ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಇಂದಿನ ಪ್ರೋಮೋದಲ್ಲಿ ಗಿಲ್ಲಿ ವಿರುದ್ಧ ಬಹುತೇಕ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ.  ಕಾವ್ಯ, ಗಿಲ್ಲಿಯನ್ನ ನಾಮಿನೇಟ್‌ ಮಾಡಿದ್ದಾರೆ. ಎಲ್ಲೋ ಒಂದೇ ಕಡೆ ಸೀಮಿತ ಆಗಿಬಿಟ್ರೇನೊ ಅನ್ನಿಸುತ್ತಿದೆ ಎಂದು ಕಾವ್ಯ ಕಾರಣ ಕೊಟ್ಟಿದ್ದಾರೆ. ಕಾವ್ಯ ಮಾತಿಗೆ ಕೋಪಗೊಂಡ ರಜತ್, ತಮಾಷೆನೇ ಮಾಡಬಾರದಾ? ಈ ಮನೆಯಲ್ಲಿ? ತಲೆ ಏನಾದರೂ ಕೆಟ್ಟು ಹೋಗಿದ್ಯಾ ಅಂತ ಕೂಗಾಡಿದ್ದಾರೆ. ಅದೇ ವೇಳೆಗೆ ಧ್ರುವಂತ್‌ ಹಾಗೂ ರಜತ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಧ್ರುವಂತ್‌ ಅವರು ರಜತ್‌ಗೆ ಇದೇನು ಲಾಸ್ಟ್‌ ಸೀಸನ್‌ ಅಂದುಕೊಂಡಿದ್ದೀಯಾ? ಗಿಲ್ಲಿ ಹತ್ರ ಇಟ್ಟುಕೋ ಎಂದಿದ್ದಾರೆ. ರಜತ್‌ಗೆ ಇದು ಕೋಪ ತರಿಸುವಂತೆ ಮಾಡಿದೆ. ಅಷ್ಟೇ ಅಲ್ಲ ಧ್ರುವಂತ್‌ ಮೇಲೆ ಹರಿಹಾಯ್ದಿದ್ದಾರೆ.

ಮತ್ತೊಂದ್ಕಡೆ ದೊಡ್ಮನೆಯಲ್ಲಿ ಗಿಲ್ಲಿಯಿಂದ ಸ್ನೇಹಿತರೆಲ್ಲರೂ ದೂರ ಆಗ್ತಿದ್ದಾರೆ. ಕಳೆದ ವಾರ ಕುಚಿಕು ಅಂತಿದ್ದ ರಘು ಹಾಗೂ ಗಿಲ್ಲಿ ಈಗ ದೂರವಾಗಿದ್ರು. ರಘುಗೆ ಗಿಲ್ಲಿಯ ಮಾತುಗಳು ಇಷ್ಟ ಆಗುತ್ತಿಲ್ಲ. ಆಗಾಗ ರಘು ಅವರು ಕಿಚನ್‌ ರೂಂಗೆ ಮಾತ್ರ ಸೀಮಿತ ಅಂತ ಗಿಲ್ಲಿ ಹೇಳುವ ಮಾತು ಅವರಿಗೆ ನೋವು ತರಿಸಿದೆ. ಈ ವೇಳೆ ಗಿಲ್ಲಿಯ ಹಿಂದೆಯೇ ಗಿಲ್ಲಿ ಬಗ್ಗೆ ಆಪ್ತ ಗೆಳೆಯರು ಮಾತನಾಡಿದ್ದಾರೆ. ಕಾವ್ಯ ಕೂಡ ಗಿಲ್ಲಿ ಬಗ್ಗೆಯೇ ಮಾತನಾಡಿದ್ದಾರೆ. ರಘು ಮೊದಲಿಗೆ ಮಾತನಾಡಿ, ನನ್ನ ಪರ್ಸನಾಲಿಟಿ ಚೇಂಜ್‌ ಮಾಡ್ತಾ ಇದ್ದಾರೆ. ಗಿಲ್ಲಿ ಕೂಡ ಬುಕ್‌ ಅನ್ನೋ ಟಾಸ್ಕ್‌ನಲ್ಲಿ ಮಾತನಾಡಿದ ರೀತಿ ತಲೆ ಕೆಟ್ಟು ಹೋಗೋ ಥರ ಮಾಡಿತು, ಡ್ರಾವ್‌ ಬ್ಯಾಕ್‌ ಆಗಿ ಬಿಡೋಣ ಅನ್ನಿಸುತ್ತೆ  ಎಂದರು. ಅದಕ್ಕೆ ಕಾವ್ಯ ಇದ್ದವರು, ನೀವು ಒಂದು ಶೋ ವಿನ್ನರ್‌.  ನಾನು ಯಾಕೆ ಕುಕ್‌ ಮಾಡಲಿ ಅಂತ ಇದ್ದಿದ್ದರೆ ಹಾಗಿದ್ರೆ ಆ ಶೋಗೆ ನೀವು ಹೋಗೋ ಹಾಗೇ ಇರಲಿಲ್ಲ. ನನ್ನ ಪರ್ಸನಾಲಿಟಿ ಅಂತ ಇದ್ದರೆ ಎಂದಿದ್ದಾರೆ ಎಂದಿದ್ದಾರೆ. ಇನ್ನು ಸೂರಜ್‌ ಕೂಡ ನೀವು ಒಂದು ಕಡೆ ಶೆಫ್‌ ಅಂತ ಪ್ರೂವ್‌ ಆದಾಗ ಯಾವತ್ತೂ ಯಾರೆ ಅಂದರೂ ತೆಲೆ ಕೆಡಿಸಿಕೊಳ್ಳಬಾರದು ಎಂದಿದ್ದಾರೆ.

ಇದೀಗ ಕಾವ್ಯ ನಡೆಗೆ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ. ಅವನು ನಿನ್ನನ್ನು ಫೈನಲ್ ಗೆ ಕರ್ಕೊಂಡು ಹೋಗ್ಬೇಕು ಅಂತ ಇದ್ದಾನೆ. ಆದರೆ ನೀನು ಅವನನ್ನು ಮನೆಗೆ ಕಳಿಸಬೇಕು ಅಂತ ಇದ್ದೀಯ . ನಾ ಕಂಡ ಕಾವ್ಯ ಪುಸ್ತಕದಲ್ಲಿ ಕಾವ್ಯಾಗಿಂತ ಗಿಲ್ಲಿನೇ ಜಾಸ್ತಿ ಇದ್ದಾನೆ. ಹೇಳಬೇಕು ಅನ್ನಿಸ್ತು ಹೇಳಿದೆ ಅಂತ ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

Shwetha M