ಕಾವ್ಯ ಮಾರನ್ V/s ಪ್ರೀತಿ ಜಿಂಟಾ.. – ಮಾಲೀಕರಲ್ಲಿ ಯಾರು ಬೆಸ್ಟ್?

ಕಾವ್ಯ ಮಾರನ್ V/s ಪ್ರೀತಿ ಜಿಂಟಾ.. – ಮಾಲೀಕರಲ್ಲಿ ಯಾರು ಬೆಸ್ಟ್?

ಐಪಿಎಲ್ ಸೀಸನ್ 18 ಅದ್ಧೂರಿಯಾಗಿ ನಡೆಯುತ್ತಿದೆ.. ಇಲ್ಲಿ ಆಟಗಾರರ ಜೊತೆಗೆ ತಂಡಗಳ ಮಾಲೀಕರ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಬಿಡ್‌ ಟೈಮ್‌ ನಲ್ಲಿ ಆಟಗಾರರಿಗೆ ದುಡ್ಡು ಸುರಿದು ಮ್ಯಾಚ್ ವೇಳೆ ಟೆನ್ಷನ್‌  ಮಾಡಿಕೊಳ್ಳೋ ಮಾಲೀಕರನ್ನು ನೋಡ್ತಿದ್ದರೆ, ಕ್ರಿಕೆಟ್‌ ಅಭಿಮಾನಿಗಳಿಗೂ ಒಂದು ಥರಾ ಮಜಾ ಕೊಡ್ತಿರುತ್ತೆ.. ಇದೆಲ್ಲಾ ಇವರಿಗೆ ಬೇಕಿತ್ತಾ ಅಂತಾ ಫ್ಯಾನ್ಸ್‌ ಮಾತನಾಡಿಕೊಳ್ತಿರ್ತಾರೆ.  SRH ಮಾಲಕಿ ಕಾವ್ಯಾ ಮಾರನ್ ಅಂತೂ ಕೊಡೋ‌ ಒಂದೊಂದು ಎಕ್ಸ್ ಪ್ರೆಷನ್  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ ಇರುತ್ತೆ.. ಆದ್ರೆ ಪ್ರೀತಿ ಝಿಂಟಾ ಹಾಗಲ್ಲ.. ಸೋತ್ರೂ ಗೆದ್ರೂ ಅವರ ಕ್ರೀಡಾ ಸ್ಪೂರ್ತಿ ಬೇರೆ ಲೆವಲ್‌ನಲ್ಲಿ ಇರುತ್ತೆ.

ಇದನ್ನೂ ಓದಿ: RR ತವರಲ್ಲಿ RCBಗಿದ್ಯಾ ಅದೃಷ್ಟ? – ರೆಡ್ ಆರ್ಮಿಗೆ ದ್ರಾವಿಡ್ ಚಾಲೆಂಜ್

ಐಪಿಎಲ್‌ ಫಿವರ್ ದಿನ ಕಳೆದಂತೆ ಜಾಸ್ತಿಯಾಗ್ತಿದೆ.. ಆರ್‌ಸಿಬಿ ಫ್ಯಾನ್ಸ್‌ಗೆ ಈಗ ಬೆಂಗಳೂರಲ್ಲಿ ಟೀಂ ಸೋಲ್ತಿದೆ ಅನ್ನೋ ತಲೆಬಿಸಿ ಬಿಟ್ರೆ, ಈ ಸಲ ಕಪ್‌ ಗೆಲ್ಲೋದು ನಾವೆ ಎಂಬ ವಿಶ್ವಾಸವನ್ನ ಉಳಿಸಿಕೊಂಡಿದ್ದಾರೆ. ಎಲ್ಲಾ ತಂಡಗಳ ಓನರ್‌ಗಳು ಟೀಂ ಜೊತೆ ಕಾಣಿಸಿಕೊಂಡರೂ ಈ ಆರ್‌ಸಿಬಿಯ ಓನರ್‌ಗಳು ಕಾಣಿಸಿಕೊಳ್ಳೋದು ತೀರಾ ಕಡಿಮೆ.. ಆದ್ರೆ ತಂಡದ ಜೊತೆಗೆ ಟೀಂ ಮಾಲೀಕರೂ ಹೆಚ್ಚು ಕಾಣಿಸಿಕೊಳ್ಳೋದ್ರಲ್ಲಿMI ತಂಡದ ಮಾಲಕಿ ನೀತಾ ಅಂಬಾನಿಯವರನ್ನು ಬಿಟ್ರೆ ನಂತರ ಸಿಗೋದು ಪ್ರೀತಿ ಝಿಂಟಾ ಹಾಗೂ ಕಾವ್ಯಾ ಮಾರನ್‌.. ಇವರಲ್ಲದೆ  ಎಲ್‌ಎಸ್‌ಜಿ ತಂಡದ ಮಾಲೀಕ ಸಂಜೀವ್‌ ಗೋಯೆಂಕಾ ಆಟಗಾರರಿಗಿಂತ ಜಾಸ್ತಿ ಟ್ರೋಲ್‌ ಆಗ್ತಿರುತ್ತಾರೆ.. ಇವರೆಲ್ಲರ ನಡುವೆ ಪ್ರೀತಿ ಜಿಂಟಾ ಹಾಗೂ ಕಾವ್ಯಾ ಮಾರನ್ ಬಗ್ಗೆ ಹೇಳಲೇಬೇಕು.. ಪ್ರೀತಿ ಝಿಂಟಾ ಮೊದಲ ಸೀಸನ್‌ನಿಂದಲೂ ಪಂಜಾಬ್‌ ತಂಡ ಮಾಲಕಿಯಾದ್ರೂ ಇದುವರೆಗೂ ಅವರ ತಂಡ ಕಪ್‌ ಗೆದ್ದಿಲ್ಲ.. ಕಾವ್ಯಾ ಮಾರನ್‌ ಎಸ್‌ಆರ್‌ಹೆಚ್‌ ತಂಡದ ಒಡೆತನ ಪಡೆದ್ಮೇಲೆ ತಂಡ ಫೈನಲ್‌ಗಳಿಗೆ ಹೋಗಿದ್ರೂ ಕಪ್‌ ಗೆಲ್ಲೋಕೆ ಆಗಿಲ್ಲ.. ಹಾಗಿದ್ದರೂ ಐಪಿಎಲ್ ಫ್ರಾಂಚೈಸಿ ಮಾಲೀಕರ ವಿಚಾರ ಬಂದಾಗ ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಝಿಂಟಾ, ಹೈದ್ರಾಬಾದ್‌ ತಂಡ ಮಾಲಕಿ ಕಾವ್ಯಾ ಮಾರನ್  ಚರ್ಚೆಯಲ್ಲಿರ್ತಾರೆ. ಇದೀಗ ಪ್ರೀತಿ ಝಿಂಟಾ ಹಾಗೆ ಕಾವ್ಯಾ ಮಾರನ್ ಇವರಿಬ್ರಲ್ಲಿ ಯಾರು ಬೆಸ್ಟ್ ಮಾಲೀಕರು ಅನ್ನೋ ಚರ್ಚೆ ಶುರುವಾಗಿದೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡ ಯಾವುದೇ ಮೈದಾನದಲ್ಲಿ ಆಡಲು ಇಳಿದ್ರೂ, ಆಟಗಾರರನ್ನು ಹುರಿದುಂಬಿಸಲು ಮಾಲೀಕಿ ಕಾವ್ಯಾ ಮಾರನ್ ಹಾಜರಿರುತ್ತಾರೆ. ಕಾವ್ಯ ಮೈದಾನದಲ್ಲಿ ಇದ್ದಾರೆ ಎಂದರೆ, ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಪೋಕಸ್ ಆಗಿರುತ್ತವೆ. ಪಂದ್ಯ ಗೆಲ್ಲುತ್ತಿದೆ, ತಂಡ ಚೆನ್ನಾಗಿ ಆಡುತ್ತಿದೆ ಎಂದಾಗ ಕಾವ್ಯಾ ಮಾರನ್ ಅವರು ಖುಷಿಯಿಂದ ಇರುತ್ತಾರೆ.. ಆದರೆ, ಸೋಲುವಾಗ ಅವರ ಎಕ್ಸ್ಪ್ರೆಷನ್ ಬೇರೆಯೇ ಆಗಿರುತ್ತದೆ. ನಿರಾಸೆ, ಸಿಟ್ಟು. ಬೇಜಾರು ಎಲ್ಲಾನೂ ಇರುತ್ತೆ.. ಇದೇ ಕಾರಣಕ್ಕೆ ಕಾವ್ಯಾ ಮಾರನ್‌ ಬೇಸರವನ್ನು ಟಿವಿಲಿ ನೋಡೋಕೆ ಆಗಲ್ಲ ಎಂದು ಸೂಪರ್‌ಸ್ಟಾರ್‌ ರಜಿನಿಕಾಂತ್‌ ಕೂಡ ಒಮ್ಮೆ ತಮಾಷೆ ಮಾಡಿದ್ದರು..  ಹೀಗಾಗಿ ಕಳೆದ ವರ್ಷ ಒಳ್ಳೇ ಟೀಂ ಕಟ್ಟಿ ಫೈನಲ್‌ವರೆಗೂ ಹೈದ್ರಾಬಾದ್‌ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದ್ರೆ ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಸಾಲು ಸಾಲು ಸೋಲುಗಳನ್ನು ಕಂಡಿದೆ. ಮೊನ್ನೆಯಷ್ಟೇ ಗುಜರಾತ್‌ ಟೈಟನ್ಸ್ ವಿರುದ್ಧದ ಪಂದ್ಯದಲ್ಲೂ ಕಾವ್ಯ ಮೈದಾನದಲ್ಲಿ ಕಾಣಿಸಿಕೊಂಡರು. ಈ ವೇಳೆ ತಮ್ಮ ತಂಡದ ಬ್ಯಾಟರ್‌ಗಳು ನೀಡುತ್ತಿದ್ದ ಪ್ರದರ್ಶನ ಕಂಡು ನಿರಾಸೆ ಗೊಂಡರು. ಪಂದ್ಯದಲ್ಲಿ ಅಭಿಷೇಕ್ ಶರ್ಮಾ ರನ್‌ ಕಲೆ ಹಾಕುವಲ್ಲಿ ಸತತವಾಗಿ ವಿಫಲರಾಗುತ್ತಿದ್ದಾರೆ. ಇವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ 16 ಎಸೆತಗಳಲ್ಲಿ 18 ರನ್‌ ಬಾರಿಸಿ ಔಟ್ ಆದರು. ಅಭಿಷೇಕ್‌ ಔಟ್ ಆಗುತ್ತಿದ್ದಂತೆ ಕಾವ್ಯ ಮಾರನ್‌ ಸಿಟ್ಟಾದರು.  ಅಭಿಷೇಕ್‌ ಬಿಗ್ ಹೊಡೆತಕ್ಕೆ ಮುಂದಾಗಿದ್ದು ಇಷ್ಟವಾಗಲಿಲ್ಲ. ಅಲ್ಲದೆ ವಿಡಿಯೋದಲ್ಲಿ ಹೀಗೆ ಮಾಡಬೇಕಿತ್ತು ಎಂದು ಸನ್ನೆ ಮಾಡಿ ತೋರಿಸಿದಂತೆ ಕಂಡು ಬಂದಿತು. ಅವರು ಕೈ ಸನ್ನೆಗಳ ಮೂಲಕವೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಎಸ್ ಆರ್ ಹೆಚ್ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದು ಟೀಮ್ ಮ್ಯಾನೇಜ್ಮೆಂಟ್‌ ಚಿಂತೆಯನ್ನು ಹೆಚ್ಚಿಸಿದೆ. ಈ ವೇಳೆ ತಂಡ ಸಹ ಎಲ್ಲಿ ಎಡವಿದೆ ಎಂಬ ಬಗ್ಗೆ ಒಮ್ಮೆ ಕುಳಿತು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯತೆ ಇದೆ.

ಇನ್ನು ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಝಿಂಟಾ ಎಲ್ಲರಂತಲ್ಲ.. ಫುಲ್ ಡಿಫ್ರೆಂಟ್.. ತಂಡ ಸೋಲಲಿ.. ಗೆಲ್ಲಲಿ.. ಅವ್ರ ಮುಖದ ಎಕ್ಸ್ ಪ್ರೆ‌‍ಷನ್ ಜಾಸ್ತಿ ಚೇಂಜ್ ಆಗಲ್ಲ.. ಮುಂಚೆಯೆಲ್ಲಾ ಪಂದ್ಯ ಗೆದ್ದಾಗ ಕುಣಿದು ಕುಪ್ಪಳಿಸುತ್ತಿದ್ದ ಪ್ರೀತಿಗೆ ಈಗೀಗ ಐಪಿಎಲ್‌ ಅನುಭವ ಜಾಸ್ತಿಯಾಗುತ್ತಿದ್ದಂತೆ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸ್ತಾರೆ. ಇದೆಕ್ಕೆ ಬೆಸ್ಟ್ ಎಕ್ಸಾಂಪಲ್ ಮೊನ್ನೆ ನಡೆದ ಪಂಜಾಬ್ ಮತ್ತು ಅರ್ ಆರ್ ನಡುವೆ ನಡೆದ ಮ್ಯಾಚ್.. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ 50 ರನ್ಗಳಿಂದ ಪರಾಭವಗೊಂಡಿತು. ಪಂದ್ಯ ಮುಗಿದ ಮೇಲೆ ಮೈದಾನಕ್ಕೆ ಆಗಮಿಸಿದ ಬಾಲಿವುಡ್ ಬ್ಯೂಟಿ, ಪಂಜಾಬ್ ಕಿಂಗ್ಸ್ ಓನರ್ ಪ್ರೀತಿ ಝಿಂಟಾ, ಶ್ರೇಯಸ್ ಅಯ್ಯರ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಪಂದ್ಯ ಸೋತಿತು ಅಂತಾ ಯಾವುದೇ ಕಾರಣಕ್ಕೂ ಕೋಪ, ಬೇಜಾರು ಮಾಡ್ಕೊಂಡಿಲ್ಲ.. ಗೆದ್ದ  ಪಂದ್ಯದ ವೇಳೆ ಹೇಗೆ ಲವಲವಿಕೆಯಿಂದ ಇದ್ದರೋ ಅದೇ ತರ ಸೋತ ಪಂದ್ಯದ ವೇಳೆಯು ಇದ್ದರು.  ಎಲ್ಲರನ್ನೂ ಸ್ನೇಹದಿಂದಲೇ ಕಂಡರು. ಇದು ಪ್ರೀತಿ ಝಿಂಟಾ ಕ್ರಿಕೆಟ್‌ ಜೊತೆಗೆ ಮಾಗಿರುವುದನ್ನು ತೋರಿಸುತ್ತಿದೆ.. ಇದೇ ಕಾರಣಕ್ಕೆ ಪ್ರೀತಿ ಝಿಂಟಾ ಒಡೆತನದ ಪಂಜಾಬ್‌ ಕಿಂಗ್ಸ್‌, ಯಾವತ್ತೂ ಐಪಿಎಲ್‌ನಲ್ಲಿ ಕಪ್‌ ಗೆಲ್ಲದಿದ್ದರೂ ಅಭಿಮಾನಿಗಳ ಪಡೆಯನ್ನು ಉಳಿಸಿಕೊಳ್ಳೋದ್ರಲ್ಲಿ ಯಶಸ್ವಿಯಾಗಿದೆ. ಈ ಬಾರಿ ಶ್ರೇಯಸ್‌ ಅಯ್ಯರ್‌ ನೇತೃತ್ವದಲ್ಲಿ ಟೀಂ ಒಳ್ಳೆಯ ಪ್ರದರ್ಶನ ನೀಡಲು ಶುರು ಮಾಡಿದ್ದು, ಮುಂದೆಯೂ ಅದನ್ನು ಉಳಿಸಿಕೊಳ್ಳುತ್ತಾ ಎಂದು ನೋಡಬೇಕಿದೆ..

Shwetha M

Leave a Reply

Your email address will not be published. Required fields are marked *