ಕಾವ್ಯ ಮಾರನ್ ಕಾಸ್ಟ್ಲಿ ಮದುವೆ.. 1 ಊಟಕ್ಕೆ ₹35000.. ಹಾಲ್ ಬಿಲ್ ₹45 ಲಕ್ಷ? | ಅನಿರುದ್ಧ್ – ಕಾವ್ಯ ವೆಡ್ಡಿಂಗ್ ಖರ್ಚು ಇಷ್ಟೊಂದಾ?

SRH ಒಡತಿ ಕಾವ್ಯ ಮಾರನ್ ಹಾಗೂ ದಕ್ಷಿಣ ಭಾರತದ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ನವೆಂಬರ್ 10 ಮತ್ತು 11 ರಂದು ಗ್ರೀಸ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಅದಾದ ನಂತರ, ನವೆಂಬರ್ 21 ರಂದು ಚೆನ್ನೈನ ಐಟಿಸಿ ಗ್ರ್ಯಾಂಡ್ ಚೋಳ ಹೋಟೆಲ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಕೂಡ ನಡೆಯಲಿದೆ. ಈ ಬೆನ್ನಲ್ಲೇ ಕಾವ್ಯ, ಅನಿರುದ್ಧ್ ಮದುವೆ ಖರ್ಚಿನ ಬಗ್ಗೆ ಸಾಕಷ್ಟು ಚರ್ಚೆ ನಡಿತಾ ಇದೆ. ಕಾವ್ಯ ಮಾರನ್ ಮದುವೆ ಊಟ, ಹಾಲ್ ಬಿಲ್, ಟೋಟಲ್ ಬಜೆಟ್ ಎಷ್ಟು ಅಂತ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.
ಇದನ್ನೂ ಓದಿ: RCB Vs MI ಫಸ್ಟ್ ಫೈಟ್ – ಬೆಂಗಳೂರಿಗೆ ಹೇಗಿದೆ ಶೆಡ್ಯೂಲ್?
SRH ಒಡತಿ ಕಾವ್ಯ ಮಾರನ್ ಹಾಗೂ ಅನಿರುದ್ಧ್ ಅವರ ಅದ್ದೂರಿ ಮದುವೆಯ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಮದುವೆ ಇನ್ವಿಟೇಷನ್ ಕಾರ್ಡ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈಗಾಗಲೇ ಮದುವೆಗೆ ಹಾಗೂ ರಿಸೆಪ್ಷನ್‌ಗೆ ದೇಶದ ಗಣ್ಯಾತಿಗಣ್ಯ ರಾಜಕಾರಣಿಗಳು ಹಾಗೂ ಸಿನಿರಂಗದ ಅಗ್ರಗಣ್ಯ ತಾರೆಯರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸೇರಿದಂತೆ ಸಿನಿಮಾ ಸ್ಟಾರ್ಸ್, ಕ್ರಿಕೆಟರ್ಸ್‌ಗೆ ಮದುವೆಗೆ ಇನ್ವೈಟ್ ಮಾಡಲಾಗಿದೆ. ಇದೀಗ ಕಾವ್ಯ ಮದುವೆಯ ಖರ್ಚು ವೆಚ್ಚಗಳ ಬಗ್ಗೆ ಫ್ರಾನ್ಸ್ ಚರ್ಚೆ ನಡೆಸ್ತಾ ಇದ್ದಾರೆ.
ಅಂದ್ಹಾಗೆ ಕಾವ್ಯ ಮಾರನ್ ಅವರದ್ದು ಡೆಸ್ಟಿನೇಷನ್ ವೆಡ್ಡಿಂಗ್. ಗ್ರೀಸ್‌ನ ಸ್ಯಾಂಟೊರಿನಿ ಮತ್ತು ಮೈಕೊನೊಸ್‌ನಂತಹ ಸುಂದರ ಸ್ಥಳಗಳು ಅಲ್ಟ್ರಾ-ಐಷಾರಾಮಿ ಡೆಸ್ಟಿನೇಶನ್ ಮದುವೆಗಳಿಗೆ ಫೇಮಸ್ ಆಗಿದೆ. ಇಲ್ಲಿನ ರೆಸಾರ್ಟ್ಗಳಲ್ಲಿ ಒಂದು ದಿನದ ಬಾಡಿಗೆ ಸುಮಾರು 15 ಲಕ್ಷ ರೂ.ಗಳಿಂದ 45 ಲಕ್ಷ ರೂ.ಗಳವರೆಗೆ ಇದೆ. ಇಲ್ಲಿ ಮದುವೆ ಡೆಕೊರೇಷನ್, ಊಟದ ವ್ಯವಸ್ಥೆಗಳು ತುಂಬಾ ವಿಶೇಷವಾಗಿರುತ್ತವೆ. ಜಸ್ಟ್ 1 ಪ್ಲೇಟ್ ಊಟದ ಬೆಲೆ 15,000 ರಿಂದ 35,000 ರೂಪಾಯಿವರೆಗೆ ಇದೆ ಎನ್ನಲಾಗ್ತಿದೆ. ಇನ್ನು ರಿಸೆಪ್ಟನ್ ದಿನ ಮೂರು ಕಡೆಗಳಲ್ಲಿ ಊಟದ ವ್ಯವಸ್ಥೆ ಇರಲಿದೆ. ಇದರಲ್ಲಿ ಸನ್ ನೆಟ್‌ವರ್ಕ್, ಸನ್ ಗ್ರೂಪ್ ನೌಕರರಿಗಾಗಿ ಒಂದು ರಿಸೆಪ್ಷನ್ ಇರಲಿದೆ. ಸಿನಿಮಾ, ರಾಜಕೀಯ, ಕ್ರೀಡಾ, ವ್ಯಾಪಾರ ಕ್ಷೇತ್ರದ ಗಣ್ಯರಿಗೂ ಒಂದೇ ಸ್ಥಳದಲ್ಲಿ ಅಲ್ಲದೆ, ಬೇರೆ ಬೇರೆ ಕಡೆಗಳಲ್ಲಿ ರಿಸೆಪ್ಷನ್‌ಗಳು ಇರಲಿವೆ ಎನ್ನಲಾಗ್ತಿದೆ.
ಇನ್ನು ಕಾವ್ಯ ಮಾರನ್ ಮದುವೆಯ ಇನ್ವಿಟೇಷನ್ ಕಾರ್ಡ್ ಕೂಡ ಫುಲ್ ರಿಚ್ ಆಗಿ ಡಿಸೈನ್ ಮಾಡಲಾಗಿದೆ. 1 ಇನ್ವಿಟೇಷನ್ ಕಾರ್ಡ್ ಬೆಲೆ 15,000 ರಿಂದ 20,000 ರೂಪಾಯಿವರೆಗೆ ಇದೆ. ಈ ಇನ್ವಿಟೇಷನ್ ಕಾರ್ಡ್‌ನಲ್ಲಿ ಬಂಗಾರದ ಲೇಪನ, ಕಾಸ್ಟಿ ಚಾಕೊಲೇಟ್‌ಗಳು, ಡ್ರೈ ಫ್ರೂಟ್ಸ್ ಮತ್ತು ಚಿನ್ನದ ಗಣೇಶನ ಮೂರ್ತಿಯನ್ನು ಕೂಡ ಇದೆ ಎನ್ನಲಾಗ್ತಿದೆ.
ಇನ್ನು ಕಾವ್ಯ ಮಾರನ್ ಮದುವೆ ಒಟ್ಟು ಖರ್ಷು ಎಷ್ಟು ಎಂಬ ಕುತೂಹಲ ಅನೇಕರಲ್ಲಿದೆ. ಇದೀಗ ಇದ್ರ ಬಗ್ಗೆ ಕೂಡ ಅಪ್‌ಡೇಟ್ ಸಿಕ್ಕಿದೆ. ಈ ಸ್ಟಾರ್ ಜೋಡಿ ಮದುವೆಯ ಒಟ್ಟು ಖರ್ಚು ಸುಮಾರು ₹150 ಕೋಟಿಯಿಂದ ₹200 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಕಾವ್ಯ ಮಾರನ್ ಹಾಗೂ ಅನಿರುದ್ಧ್ ಮದುವೆಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಈ ಸ್ಟಾರ್ ಜೋಡಿ ಜೀವನ ಪೂರ್ತಿ ಖುಷಿಯಾಗಿ ಬಾಳಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ
