ಗ್ರೀಸ್‌ನಲ್ಲಿ ಕಾವ್ಯ ಮಾರನ್ ಅನಿರುದ್ಧ್ ಮದುವೆ – ಚೆನ್ನೈನಲ್ಲಿ ಆರತಕ್ಷತೆಗೆ ಭರ್ಜರಿ ಸಿದ್ಧತೆ

ಐಪಿಎಲ್ನ ಸನ್‌ರೈಸರ್ಸ್ ಹೈದರಾಬಾದ್‌ನ ಒಡತಿ ಕಾವ್ಯ ಮಾರನ್ ಮತ್ತು ತೆಲುಗು ಸಿನಿಮಾ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮದುವೆಯಾಗಿದ್ದಾರೆ. ಬಹು ದಿನಗಳ ಪ್ರೀತಿಗೆ ಈಗ ಮದುವೆಯ ಮುದ್ರೆ ಬಿದ್ದಿದೆ. ಗ್ರೀಸ್‌ನಲ್ಲಿ ಕುಟುಂಬದವರ, ಸ್ನೇಹಿತರ, ಅತಿಥಿಗಳ ಸಮ್ಮುಖದಲ್ಲಿ ಅದ್ಧೂರಿ ಮದುವ ನಡೆದಿದೆ. ಈಗ ಈ ಜೋಡಿ ಚೆನ್ನೈನಲ್ಲಿ ನಡೆಯುತ್ತಿರುವ ಆರತಕ್ಷತೆಗೆ ಸಜ್ಜಾಗಿದೆ.
ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಅವರ ಮದುವೆ ಸಮಾರಂಭಕ್ಕೆ ಕುಟುಂಬದವರು, ಆಪ್ತರು ಹಾಗೂ ಕೆಲವೇ ಕೆಲವು ಗಣ್ಯ ವ್ಯಕ್ತಿಗಳು ಆಗಮಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ವಧು ವರರಿಗೆ ಶುಭ ಹಾರೈಸಿದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದರು. ಮದುವೆ ಸಂಭ್ರಮದ ಫೋಟೋವನ್ನು ಅನಿರುದ್ಧ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಜೀವನದ ಏಕೈಕ ಮತ್ತು ಜೀವಮಾನದ ಪಯಣ (11.11)’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ನವೆಂಬರ್ 10 ಮತ್ತು 11ರಂದು ಎರಡು ದಿನಗಳ ಕಾಲ ಯುರೋಪ್‌ನ ಗ್ರೀಸ್‌ನಲ್ಲಿ ಮದುವೆ ಸಮಾರಂಭಗಳು ಜರುಗಿದವು. ಅತ್ಯಂತ ಆಪ್ತರು ಹಾಗೂ ಗಣ್ಯ ವ್ಯಕ್ತಿಗಳನ್ನು ವಿಶೇಷ ವಿಮಾನಗಳ ಮೂಲಕ ಈ ಮದುವೆಗೆ ಆಹ್ವಾನಿಸಲಾಗಿತ್ತು. ಮದುವೆಯ ವೇಳೆ ಈ ಜೋಡಿ ಸಾಂಪ್ರದಾಯಿಕ ಹಾಗೂ ಇಂಡೋ-ವೆಸ್ಟರ್ನ್ ಶೈಲಿಯ ಉಡುಗೆಯಲ್ಲಿ ಕಂಗೊಳಿಸಿದರು. ಅನಿರುದ್ಧ್ ಅವರು ಕ್ರೀಮ್-ಬೀಜ್ ಬಣ್ಣದ ಕುರ್ತಾ ಹಾಗೂ ಕಸ್ಟಮೈಸ್ಡ್ ಜ್ಯಾಕೆಟ್ ಧರಿಸಿದ್ದರೆ, ಕಾವ್ಯಾ ಮಾರನ್ ಅವರು ಬೆಳ್ಳಿ ಬಣ್ಣದ ಹೂವಿನ ಎಂಬ್ರಾಯ್ಡರಿ ವಿನ್ಯಾಸ ಹೊಂದಿದ್ದ ರೋಸ್-ಪಿಂಕ್ ಬಣ್ಣದ ಗೌನ್‌ನಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದರು.
ಗ್ರೀಸ್‌ನಲ್ಲಿ ಮದುವೆ ಮುಗಿಸಿಕೊಂಡು ಭಾರತಕ್ಕೆ ಮರಳಲಿರುವ ಈ ಜೋಡಿಗೆ ನವೆಂಬರ್ 21ರಂದು ತಮಿಳುನಾಡಿನ ಚೆನ್ನೈನಲ್ಲಿ ಬೃಹತ್ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾವ್ಯ ಮಾರನ್ IPL ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಲೀಕರಾಗಿದ್ದಾರೆ. ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ. ಇನ್ನು ಅನಿರುದ್ಧ ರವಿಚಂದರ್ ಟಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ನೋಡಿರಿ

