ಕಾವ್ಯ – ಗಿಲ್ಲಿ ಹನಿಮೂನ್ ಪ್ಲ್ಯಾನ್.. ಬಿಗ್‌ಬಾಸ್ ಜೋಡಿ ಮದುವೆಗೆ ಸಿದ್ದ? – ಗಿಲ್ಲಿ- ಕಾವು ಲವ್ ಸೀಕ್ರೆಟ್!

ಗಿಲ್ಲಿ – ಕಾವು.. ಬಿಗ್‌ಬಾಸ್ ಕನ್ನಡ ಸೀಸನ್ 12 ರಲ್ಲಿ ಹೆಚ್ಚು ಸದ್ದು ಮಾಡಿದ ಜೋಡಿ. ಇವರಿಬ್ಬರ ಬಾಂಡಿಂಗ್‌ಗೆ ಇಡಿ ಕರುನಾಡೇ ಫುಲ್ ಫಿದಾ ಆಗಿದೆ. ಇದೀಗ ಶೋ ಮುಗಿದ ಮೇಲೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಇವರಿಬ್ಬ ಮದುವೆ ಆಗ್ಬೇಕು ಅನ್ನೋದು ಫ್ಯಾನ್ಸ್ ಆಶಯ. ಇದೀಗ ಗಿಲ್ಲಿ ಕಾವ್ಯ ಮದುವೆ ಸೀಕ್ರೆಟ್ ರಿವೀಲ್ ಆಗಿದೆ. ಶೋವೊಂದರಲ್ಲಿ ಗಿಲ್ಲಿ ಕಾವ್ಯ ಮದುವೆ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮಗಳನ್ನ ಮನೆಯಲ್ಲೇ ಲಾಕ್ ಮಾಡಿ ಸ್ಕೂಲ್‌ಗೆ ಹೊರಟ ತಾಯಿ! – ಅಯ್ಯಯೋ.. ಆಮೇಲೆ ಏನಾಯ್ತು?
ಗಿಲ್ಲಿ ಕಾವ್ಯ ಬಿಗ್‌ಬಾಸ್ ಮನೆಗೆ ಒಟ್ಟಿಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದಲೇ ಈ ಜೋಡಿ ವೀಕ್ಷಕರಿಗೆ ಇಷ್ಟವಾಗಿತ್ತು. ಕಾವ್ಯಳನ್ನ ಸದಾ ರೇಗಿಸುತ್ತಲೇ ಗಿಲ್ಲಿ ಟೈಂ ಪಾಸ್ ಮಾಡ್ತಿದ್ರು. ಬೇರೆ ಸ್ಪರ್ಧಿಗಳು ಗಿಲ್ಲಿಯಿಂದಲೇ ಕಾವ್ಯ ಎಂದು ಹೇಳ್ತಿದ್ರು. ಆದ್ರೂ ಕಾವ್ಯ ಒಂಚೂರು ಬೇಜಾರು ಮಾಡಿಕೊಳ್ತಿರ್ಲಿಲ್ಲ. ಗಿಲ್ಲಿ ಇದ್ದಲ್ಲಿ ಕಾವ್ಯ ಇರ್ಲೇಬೇಕು. ಕಾವ್ಯ ಇದ್ದಲ್ಲಿ ಗಿಲ್ಲಿ ಇರ್ತಿದ್ರು. ಯಾವುದೇ ಕಾರಣಕ್ಕೂ ಒಬ್ಬರನ್ನೊಬ್ಬರು ಬಿಟ್ಟುಕೊಡ್ತಿರ್ಲಿಲ್ಲ. ಇವರಿಬ್ಬರ ಬಾಂಡಿಂಗ್‌ಗೆ ವೀಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಶೋ ಮುಗಿದ್ರೂ ಗಿಲ್ಲಿ ಕಾವ್ಯ ಹವಾ ನಿಂತಿಲ್ಲ. ಇದೀಗ ಕಾವ್ಯ ಶೋನಲ್ಲಿ ಮದುವೆ, ಹನಿಮೂನ್ ಬಗ್ಗೆ ಮಾತನಾಡಿದ್ದಾರೆ.
ಹೌದು ಬಿಗ್‌ಬಾಸ್ ಮನೆಯಿಂದ ಆಚೆ ಬಂದ್ಮೇಲೂ ಗಿಲ್ಲಿ ಕಾವು ಸಖತ್ ಸೌಂಡ್ ಮಾಡ್ತಿದ್ದಾರೆ. ಈಗಾಗಲೇ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲೂ ಗಿಲ್ಲಿ ಕಾವ್ಯ ಭಾಗವಹಿಸಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ. ಇದು ವೀಕ್ಷರಿಗೆ ಸಖತ್ ಇಷ್ಟವಾಗಿದೆ.
ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಯಾರು ಯಾರನ್ನ ಹೆಚ್ಚು ಅರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿಯಲು ಬಿಗ್‌ಬಾಸ್ ಸ್ಪರ್ಧಿಗಳಿಗೆ ಆಂಕರ್ ಸುಷ್ಮಾ ರಾವ್ ಗೇಮ್‌ವೊಂದನ್ನ ಆಡಿಸಿದ್ದಾರೆ. ಈ ಗೇಮ್‌ನಲ್ಲಿ ಒಂದು ಪದವನ್ನು ಕೊಟ್ಟು ಅದನ್ನು ನೇರವಾಗಿ ಹೇಳದೇ, ಅದಕ್ಕೆ ಸೂಟ್ ಆಗುವ ಕ್ಲೂ ಕೊಡಬೇಕು. ಆ ಪದ ಏನು ಅಂತ ಪಾಟ್ನರ್ ಗೆಸ್ ಮಾಡಬೇಕು. ಆರಂಭದಲ್ಲಿ ರಾಶಿಕಾ ಹಾಗೂ ಸೂರಜ್ ಆಟವಾಡಿದ್ರು. ಅದಾದ ಬಳಿಕ ಗಿಲ್ಲಿ ಹಾಗೂ ಕಾವ್ಯಳನ್ನ ಆಟವಾಡಿಸಿದ್ದಾರೆ. ಆಗ ಕಾವ್ಯ ಬಳಿ ಗಿಲ್ಲಿ ಗೆಸ್ ಮಾಡಲು ಹೇಳಿದ್ದಾರೆ. ಗಿಲ್ಲಿ ಸರದಿ ಬಂದಾಗ ಕರಿಬೇವು ಸೊಪ್ಪು ಎನ್ನುವುದನ್ನು ಗುರ್ತಿಸಲು ಕರಿಬಸಪ್ಪ ಅವರನ್ನು ರಕ್ಷಿತಾ ಏನೆಂದು ಕರೀತಾಳೆ? ಎಂದು ಕೇಳಿದ್ದಾರೆ. ಅದಕ್ಕೆ ಕಾವ್ಯಾ ಕರಿಬಸೊಪ್ಪು ಎಂದು ಹೇಳಿ ನಕ್ಕಿದ್ದಾರೆ. ಬಳಿಕ ನಾನು ನಿನ್ನನ್ನು ಏನ್ ಮಾಡ್ತಿದ್ದೀನಿ ಎಂದು ಗಿಲ್ಲಿ ಕೇಳಿದ್ದು ಲವ್ ಎಂದು ಕಾವ್ಯಾ ಹೇಳಿದ್ದಾರೆ. ಬಳಿಕ ನಾನು ನೀನು ಹೋಗೋಣ ಅಂದ್ಕೊಂಡಿದ್ವಲ್ಲ, ಎಂದು ಗಿಲ್ಲಿ ಕೇಳುತ್ತಿದ್ದಂತೆ, ಹನಿಮೂನ್ ಎಂದು ಕಾವ್ಯಾ ಹೇಳಿದ್ದಾರೆ. ಆಗ ಸುಷ್ಮಾ ಹನಿಮೂನಾ ಎಂದು ರಾಗ ಎಳೆದಾಗ ಕಾವ್ಯ ನಾಚಿಕೊಂಡಿದ್ದಾರೆ. ಈ ವೇಳೆ ಗ್ಯಾಲರಿಯಲ್ಲಿ ಕೂತಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ.
ಅಂದ್ಹಾಗೆ ಗಿಲ್ಲಿ ಕಾವ್ಯ ಜೀವನ ಪೂರ್ತಿ ಒಟ್ಟಿಗೆ ಇರಬೇಕು. ಇವರಿಬ್ಬರು ಮದುವೆ ಆಗಬೇಕು ಫ್ಯಾನ್ಸ್ ಹೇಳುತ್ತಲೇ ಬಂದಿದ್ದಾರೆ. ಆದ್ರೆ ಗಿಲ್ಲಿ ಕಾವ್ಯ ನಾವಿಬ್ಬರು ಫ್ರೆಂಡ್ಸ್. ನಮ್ಮ ಫ್ರೆಂಡ್‌ಶಿಪ್ ಮುಂದುವರಿಯುತ್ತೆ ಎಂದಿದ್ದರು. ಮದುವೆ ಬಗ್ಗೆಯೂ ಗಿಲ್ಲಿ ಮಾತನಾಡಿದ್ರು. ನಾವು ಅಂದುಕೊಂಡಂತೆ ಯಾವುದೂ ನಡೆಯಲ್ಲ. ಕಂಕಣ ಭಾಗ್ಯ ಕೂಡಿ ಬರಬೇಕು ಎಂದಿದ್ದರು. ಇದೀಗ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಗಿಲ್ಲಿ, ಕಾವ್ಯ ಆಟದ ವೇಳೆ ಮಾತನಾಡಿದ್ದು ನೋಡಿ ಫುಲ್ ಶಾಕ್ ಆಗಿದ್ದಾರೆ. ಇದೀಗ ಗಿಲ್ಲಿ ಕಾವ್ಯ ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ದಾರಾ? ಒಬ್ಬರನ್ನೊಬ್ಬರು ಇಷ್ಟೊಂದು ಅರ್ಥ ಮಾಡಿಕೊಳ್ಳೊಕೆ ಹೇಗೆ ಸಾಧ್ಯ ಅಂತ ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಗಿಲ್ಲಿ ಕಾವು ಜೋಡಿನಾ ನೋಡೋದೆ ಚೆಂದ ಇಬ್ಬರು ಜೀವನ ಪರ್ಯಂತ ಖುಷಿ ಖುಷಿಯಾಗಿ ಬಾಳಲಿ ಅಂತ ಕಮೆಂಟ್ಸ್ ಮಾಡ್ತಿದ್ದಾರೆ.

ನೋಡಿರಿ

