ನಿನ್ನ ಗಿಲ್ಲಿ ಫ್ರೆಂಡ್‌ಶಿಪ್ ನೆಕ್ಸ್ಟ್ ಲೆವಲ್ ಎಂದ ಕಾವ್ಯ ಸಹೋದರ! – ಬಿಗ್‌ಬಾಸ್ ಮೂಲ ನಿಯಮ ಮುರಿದ ಕಾವ್ಯ ಕುಟುಂಬ!

ಬಿಗ್‌ಬಾಸ್ ಮನೆಯಲ್ಲಿ ಈವಾರ ಫ್ಯಾಮಿಲಿ ವೀಕ್. ಸ್ಪರ್ಧಿಗಳ ಕುಟುಂಬದವರು ಈ ವಾರ ಮನೆಗೆ ಬಂದು ಅವರ ಜೊತೆ ಕಾಲ ಕಳಿತಾ ಇದ್ದಾರೆ. ಈಗಾಗಲೇ ರಾಶಿಕಾ ಶೆಟ್ಟಿ, ಸೂರಜ್, ಧನುಷ್, ಅಶ್ವಿನಿ ಗೌಡ, ರಕ್ಷಿತಾ ಹಾಗೂ ಗಿಲ್ಲಿ ನಟ ಅವರ ಕುಟುಂಬ ಮನೆಗೆ ಭೇಟಿ ಮಾಡಿ ತಮ್ಮ ಮಕ್ಕಳನ್ನು ಮಾತನಾಡಿಸಿ ಬಂದಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಕಾವ್ಯ ಕುಟುಂಬದವರು ಬಂದಿದ್ದು, ದೊಡ್ಮನೆಯ ಮೂಲ ನಿಯಮವನ್ನೇ ಮುರಿದಿದ್ದಾರೆ. ಇದೀಗ ಕಾವ್ಯ ಫ್ಯಾಮಿಲಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಜೀವದ ಗೆಳತಿಯರ ಬಾಳಲ್ಲಿ ದುರಂತ! – ಸ್ನೇಹಿತೆಯರ ಖುಷಿ ಕಸಿದುಕೊಂಡ ಯಮರಾಜ!
ಬಿಗ್‌ಬಾಸ್‌ಮನೆಗೆ ಕಾವ್ಯಾ ಅವರ ಕುಟುಂಬ ಆಗಮಿಸಿದೆ. ಕಾವ್ಯಾಳ ಸಹೋದರ ಕಾರ್ತಿಕ್ ಹಾಗೂ ತಾಯಿ ಸಾವಿತ್ರಿ ಮನೆಗೆ ಆಗಮಿಸಿ ಕಾವ್ಯಾರನ್ನು ಮಾತನಾಡಿಸಿದ್ದಾರೆ. ಆದರೆ, ಇದೇ ವೇಳೆ ಕುಟುಂಬ ಬಿಗ್‌ಬಾಸ್‌ನ ಮೂಲ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಅವರನ್ನು ಬಿಗ್‌ಬಾಸ್ ಹೊರ ಕಳಿಸುವ ಆದೇಶ ನೀಡಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ.
ಮೊದಲಿಗೆ ಕಾವ್ಯಾ ಅವರ ತಾಯಿ ಮನೆಗೆ ಆಗಮಿಸಿದರೆ, ನಂತರ ಕಾವ್ಯಾ ಸಹೋದರ ಕಾರ್ತಿಕ್ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಈ ವೇಳೆ ಗಿಲ್ಲಿ ಜೊತೆ ಕಾರ್ತಿಕ್ ಕೂಡ ತಮಾಷೆಯಾಗಿ ಕೆಲ ಹೊತ್ತು ಕಳೆದಿದ್ದಾರೆ. ಅದಾದ ಬಳಿಕ,’ಸೋಶಿಯಲ್ ಮೀಡಿಯಾ ನೀನೇ ಹ್ಯಾಂಡಲ್ ಮಾಡ್ತಿದ್ಯಾ?’ ಎಂದು ಕಾವ್ಯಾ, ಕಾರ್ತಿಕ್‌ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕಾರ್ತಿಕ್, ‘ಎಲ್ಲಾ ಚೆನ್ನಾಗಿ ಹೋಗ್ತಿದೆ. ಏನೂ ತಲೆಕೆಡಿಸಿಕೊಳ್ಳಬೇಡ. ನಿಂದು, ಗಿಲ್ಲಿದು ಫ್ರೆಂಡ್ ನೆಕ್ಸ್ಟ್ ಲೆವಲ್ ಇದೆ. ಆದ್ರೆ ನಾಮಿನೇಷನ್‌ನಲ್ಲಿ ಅವನ ಹೆಸರು ತಗೋತೀಯಾ ಯಾಕೆ? ಗಿಲ್ಲಿಯಿಂದ ಕಾವ್ಯಾ, ಗಿಲ್ಲಿಯಿಂದ ಕಾವ್ಯಾ ಅಂತಾ ಹೇಳ್ತಿರೋದು ಯಾರು? ಎಂದು ಕಾರ್ತಿಕ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಾವ್ಯಾ ಅವರ ತಾಯಿ ‘ನಿನಗೆ ಆಗ್ದೆ ಇರೋರು’ ಎನ್ನುತ್ತಾರೆ. ಅದಕ್ಕೆ ಕಾರ್ತಿಕ್, ‘ಇರೇ ಒಂದ್ನಿಮಿಷ’ ಎಂದು ಗದರಿಸಿದ್ದಾರೆ.
ಇದರ ಬೆನ್ನಲ್ಲಿಯೇ ಬಿಗ್‌ಬಾಸ್ ಘೋಷಣೆ ಆಗಮಿಸಿದ್ದು, ಈ ಮನೆಯ ಮೂಲ ನಿಯಮದ ಉಲ್ಲಂಘನೆಯಾಗಿದೆ. ಕಾರ್ತಿಕ್ ಹಾಗೂ ಸಾವಿತ್ರಿ ಈ ಕೂಡಲೇ ಮುಖ್ಯದ್ವಾರದ ಮೂಲಕ ಮನೆಯಿಂದ ಹೊರಬರಬೇಕು ಎಂದು ಅದೇಶ ನೀಡಿದ್ದಾರೆ. ಇದರ ನಡುವೆ ಕಾವ್ಯಾ ಸಾರಿ ಎಂದು ಕೇಳಿದ್ದರೂ, ಬಿಗ್‌ಬಾಸ್ ಮನೆಯ ಮುಖ್ಯದ್ವಾರ ಓಪನ್ ಆಗಿರುವುದು ಕಂಡಿದೆ. ಈ ವೇಳೆ ಕಾವ್ಯಾ ಕಣ್ಣೀರಿಟ್ಟಿದ್ದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.

ನೋಡಿರಿ

