ಇಬ್ಬರ ಜಗಳದಲ್ಲಿ ಲಾಭ ಮಾಡಿಕೊಂಡ ಕಾವ್ಯ – ಆಡದೆಯೇ ಟಾಪ್ ಸಿಕ್ಸ್ ರೇಸ್ ಗೆ ಕಾವ್ಯ ಎಂಟ್ರಿ

ಇಬ್ಬರ ಜಗಳದಲ್ಲಿ ಲಾಭ ಮಾಡಿಕೊಂಡ ಕಾವ್ಯ – ಆಡದೆಯೇ ಟಾಪ್ ಸಿಕ್ಸ್ ರೇಸ್ ಗೆ ಕಾವ್ಯ ಎಂಟ್ರಿ

ಬಿಗ್‌ಬಾಸ್ ರಿಯಾಲಿಟಿ ಶೋ ಈಗ ಅಂತಿಮಹಂತಕ್ಕೆ ಕಾಲಿಟ್ಟಿದೆ. ಇದೀಗ ಟಾಪ್ ಸಿಕ್ಸ್ ಗೆ ಯಾರು ಎಂಟ್ರಿಯಾಗ್ತಾರೆ ಎಂಬ ರೇಸ್ ಶುರುವಾಗಿದೆ. ಈಗಾಗಲೇ ಮನೆಯ ಲಾಸ್ಟ್ ಕ್ಯಾಪ್ಟನ್ ಧನುಷ್ ಎಂಟ್ರಿಯಾಗಿದ್ದಾರೆ. ಇವರ ಜೊತೆ ರೇಸ್‌ಗೆ ಕಾವ್ಯ ಕೂಡಾ ಎಂಟ್ರಿಯಾಗಿದ್ದಾರೆ. ಕಾವ್ಯಗೆ ಈ ಚಾನ್ಸ್ ಸಿಕ್ಕಿದ್ದು ಅಶ್ವಿನಿ ಮತ್ತು ಧ್ರುವಂತ್ ಕಡೆಯಿಂದ ಅನ್ನೋದು ಸತ್ಯ.

ಇದನ್ನೂ ಓದಿ:ಪೂಜೆ ವಿಚಾರಕ್ಕೆ ಅಶ್ವಿನಿ ಮೇಲೆ ಸಿಟ್ಟಾದ ಧ್ರುವಂತ್‌! – ಇಬ್ಬರ ಜಗಳ.. ಗಿಲ್ಲಿಗೆ ಮಜಾವೋ ಮಜಾ!

ಬಿಗ್‌ಬಾಸ್ ಅಶ್ವಿನಿ, ಧ್ರುವಂತ್ ಮತ್ತು ಕಾವ್ಯಾಗೆ ಟಾಸ್ಕ್ ಕೊಟ್ಟಿದ್ದರು. ಯಾರ ಬಕೆಟ್‌ನಲ್ಲಿ ಜಾಸ್ತಿ ಮಣ್ಣು ತುಂಬಿ ನೆಲಕ್ಕೆ ತಾಗುತ್ತೋ ಅವರು ಆಟದಿಂದ ಹೊರಗುಳಿಯಬೇಕಿತ್ತು. ಈ ಮೂವರು ಹಿಡಿದುಕೊಂಡಿರುವ ಬಕೆಟ್‌ಗೆ ಗಿಲ್ಲಿ, ರಘು ಮತ್ತು ರಾಶಿಕಾ, ರಕ್ಷಿತಾ ಮಣ್ಣು ತುಂಬಿಸಬೇಕಿತ್ತು. ಮೊದಲು ಕೆಸರಿನ ಮೇಲೆ ಹೊರಳಾಡಿ ಬಕೆಟ್ ನಲ್ಲಿ ಕೆಸರು ತುಂಬಿಸಬೇಕು. ನಂತರ ಕೈಯಲ್ಲಿ ಮಣ್ಣಿನ ಉಂಡೆ ಕಟ್ಟಿ ಬಕೆಟ್‌ಗೆ ಎಸೆಯಬೇಕು. ಇಲ್ಲಿ ಎಲ್ಲರ ಟಾರ್ಗೆಟ್ ಅಶ್ವಿನಿಗೌಡ. ನಂತರ ಧ್ರುವಂತ್. ಇವರಿಬ್ಬರನ್ನು ಸೋಲಿಸುವ ಹಠದಲ್ಲಿ ಕಾವ್ಯಾ ಸ್ಪರ್ಧಿ ಅನ್ನೋದೇ ಮರೆತುಹೋಗಿರಬೇಕು. ಹೀಗಾಗಿ ಕಾವ್ಯಾ ಸುದ್ದಿಗೆ ಯಾರು ಹೋಗಲೇಇಲ್ಲ. ಮಧ್ಯದಲ್ಲಿ ರಘು ಬಿಟ್ಟರೆ, ಯಾರೂ ಕೂಡಾ ಕಾವ್ಯ ತಂಟೆಗೆ ಹೋಗಲೇ ಇಲ್ಲ. ಹೀಗಾಗಿ ಅಶ್ವಿನಿ, ಮತ್ತು ಧ್ರುವಂತ್ ಸೋಲಿಸುವ ಭರದಲ್ಲಿ ಕಾವ್ಯ ಯಾವ ಸ್ಪರ್ಧೆ ಕೊಡದೇ ಗೆಲುವು ಸಾಧಿಸಿದರು. ಈ ಮೂಲಕ ಟಾಪ್ ಸಿಕ್ಸ್ ರೇಸ್ ಗೆ ಕಾವ್ಯ ಸುಲಭವಾಗಿಯೇ ಎಂಟ್ರಿಕೊಟ್ಟರು.

ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ನೂರು ದಿನಗಳನ್ನು ಪೂರೈಸಿ ಅಂತಿಮ ಘಟ್ಟ ತಲುಪಿದೆ. ಟಾಪ್ 8 ಸ್ಪರ್ಧಿಗಳ ನಡುವೆ ಈ ಟಿಕೆಟ್ ಟು ಫಿನಾಲೆ ಫೈಟ್ ನಡೆಯುತ್ತಿದೆ. ಈಗಾಗಲೇ ಗಿಲ್ಲಿ ನಟ ಸೋತು ಹೊರಬಿದ್ದಿದ್ದಾರೆ. ಜೊತೆಗೆ ರಕ್ಷಿತಾ ಶೆಟ್ಟಿ ಕೂಡಾ ಈ ರೇಸ್ ನಿಂದ ಔಟ್ ಆಗಿದ್ದಾರೆ.  ಕಾವ್ಯಾ ಟಾಪ್ 6ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Sulekha