ಬಿಗ್‌ಬಾಸ್ ಫಿನಾಲೆಯಲ್ಲಿ ಎಡವಿದ ಕಾವು – ರವಿಚಂದ್ರನ್ ಜೊತೆಯಲ್ಲಿ ಹೊರಗೆ ಬಂದ ಕಾವ್ಯ

ಬಿಗ್‌ಬಾಸ್ ಫಿನಾಲೆಯಲ್ಲಿ ಎಡವಿದ ಕಾವು –  ರವಿಚಂದ್ರನ್ ಜೊತೆಯಲ್ಲಿ ಹೊರಗೆ ಬಂದ ಕಾವ್ಯ

ಬಿಗ್‌ಬಾಸ್ ಫಿನಾಲೆಯಲ್ಲಿ ಕಾವ್ಯ ಎಲಿಮಿನೇಟ್ ಆಗಿದ್ದಾರೆ. ಗಿಲ್ಲಿ ಜೊತೆ ಕಾವ್ಯಾ ಜೋಡಿ ವೀಕ್ಷಕರಿಗೆ ಇಷ್ಟವಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಕಾವು ಮನೆಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ರಘು ಕನಸು ಭಗ್ನ – ದೊಡ್ಮನೆಯಿಂದ ಹೊರಗೆ ಕರೆತಂದ ನಟಿ ಶ್ರುತಿ

ಬಿಗ್‌ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಕೊಟ್ಟರು. ಕನಸುಗಾರ ರವಿಚಂದ್ರನ್ ಅವರನ್ನು ಕಂಡ ಕೂಡಾ ನಾಲ್ವರು ಸ್ಪರ್ಧಿಗಳಿಗೆ ಖುಷಿಯಾದರೂ ಕೂಡಾ ಟೆನ್ಷನ್ ಜೋರಾಗಿತ್ತು. ರವಿಚಂದ್ರನ್ ಕೈಯಲ್ಲಿ ಒಂದು ಸೂಟ್‌ಕೇಸ್ ಕೂಡಾ ಇತ್ತು. ಇದರಲ್ಲಿ 5 ಲಕ್ಷ ದುಡ್ಡಿದೆ ತಗೊಂಡು ಹೊರಗೆ ಬರುವವರು ಬನ್ನಿ ಎಂದು ಕ್ರೇಜಿಸ್ಟಾರ್ ಆಫರ್ ನೀಡಿದರು. ಆದರೆ, ದುಡ್ಡು ಪಡೆಯಲು ಸ್ಪರ್ಧಿಗಳು ನಿರಾಕರಿಸಿದರು. ಈ ವೇಳೆ ರವಿಚಂದ್ರನ್ ಅವರು ಎಲಿಮಿನೇಟ್ ಪ್ರಕ್ರಿಯೆ ಶುರು ಮಾಡಿದರು. ಆಗ ಕಾವ್ಯ ಅವರು ಎಲಿಮಿನೇಟ್ ಆದರು . ಬಿಗ್‌ಬಾಸ್ ಮನೆಯಿಂದ ಕೊನೇ ಕ್ಷಣದಲ್ಲಿ ಹೊರಬಂದ ಕಾವ್ಯ ಅವರಿಗೆ 10 ಲಕ್ಷ ರೂಪಾಯಿಯ ನಗದು ಬಹುಮಾನ ಸಿಕ್ಕಿದೆ.

ಮೊದಲು ಧನುಷ್ ಗೌಡ ಎಲಿಮಿನೇಟ್ ಆದರು. ಈ ವೇಳೆ ಕಾವ್ಯ ಶೈವ ಕಣ್ಣೀರು ಹಾಕಿದರು. ನಂತರ ರಘು ಎಲಿಮಿನೇಟ್ ಆದಾಗಾಲೂ ಕಾವ್ಯ ಡಲ್ ಆಗಿದ್ದರು. ನಂತರ ಹೊರಗೆ ಹೋಗುವುದು ನಾನೇ ಅನ್ನೋ ರೀತಿ ಬೇಸರದಲ್ಲಿದ್ದಂತೆ ಕಾವ್ಯ ಕಂಡು ಬಂದರು. ಕೊನೆಗೂ ಕಾವ್ಯ ನಾಲ್ಕನೇ ಸ್ಪರ್ಧಿಯಾಗಿ ಹೊರಗೆ ಬಂದಿದ್ದಾರೆ.

Sulekha