ಸಿಹಿ ಉಡುಗೊರೆ ನೀನು.. ಮುದ್ದು ಮಗನ ಮುದ್ದಾದ ಫೋಟೋ ರಿವೀಲ್‌ ಮಾಡಿದ ಕವಿತಾ ಗೌಡ, ಚಂದನ್‌

ಸಿಹಿ ಉಡುಗೊರೆ ನೀನು.. ಮುದ್ದು ಮಗನ ಮುದ್ದಾದ ಫೋಟೋ ರಿವೀಲ್‌ ಮಾಡಿದ ಕವಿತಾ ಗೌಡ, ಚಂದನ್‌

ಕವಿತಾ ಗೌಡ ಹಾಗೂ ಚಂದನ್‌.. ಲಕ್ಷ್ಮೀ ಬಾರಮ್ಮ ಸೀರಿಯಲ್‌ ಮೂಲಕ ಕನ್ನಡಿಗರ ಮನಗೆದ್ದಿದ್ರು.. ಈ ಜೋಡಿಯ ಲವ್‌ ಸ್ಟೋರಿ ಅನೇಕರಿಗೆ ಗೊತ್ತೇ ಇದೆ. ಲಕ್ಷ್ಮೀ ಬಾರಮ್ಮ ಸೀರಿಯಲ್‌ ಅವರಿಬ್ರ ಪ್ರೀತಿಗೆ ಬುನಾದಿಯಾಯ್ತು.. ಸೀರಿಯಲ್​ನಲ್ಲಿ ಪತಿ-ಪತ್ನಿ ಆಗಿದ್ದ ಲಚ್ಚಿ-ಚಂದುಗೆ ರಿಯಲ್​ ಲೈಫ್​ನಲ್ಲೂ ಮದುವೆ ಯೋಗ ಕೂಡಿ ಬಂದಿತ್ತು. ಇದೀಗ ಈ ದಂಪತಿಗೆ ಮುದ್ದಾದ ಮಗುವಿದ್ದು, ಇದೇ ಮೊದಲ ಬಾರಿಗೆ ಮಗುವಿನ ಫೋಟೋ ರಿವೀಲ್‌ ಮಾಡಿದ್ದಾರೆ.

ಇದನ್ನೂ ಓದಿ: ಶನಿವಾರ ಕರ್ನಾಟಕದ ಬಂದ್ – ಏನಿರುತ್ತೆ? ಏನಿರಲ್ಲಾ?. ಯಾರೆಲ್ಲಾ ಬೆಂಬಲವಿದೆ?

ಚಂದನ್‌ ಹಾಗೂ ಕವಿತಾ ಗೌಡ ಈ ತಮ್ಮ ಮುದ್ದಾದ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದೀಗ ಕವಿತಾ ಮಗುವಿಗೆ 6 ತಿಂಗಳು ತುಂಬಿದೆ. ಇದೇ ಮೊದಲ ಬಾರಿಗೆ ಕವಿತಾ ಗೌಡ ಹಾಗೂ ಚಂದನ್​ ಕುಮಾರ್ ಮಗುವಿನ ಜೊತೆಗೆ ಒಂದು ಸುಂದರವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಹೊಸ ಜೀವನದ 6 ತಿಂಗಳುಗಳು. ಗುಂಡಪ್ಪ. ಆರು ತಿಂಗಳ ಹಿಂದೆ, ನಮ್ಮ ಹೃದಯಗಳು ನಾವು ಎಂದಿಗೂ ಊಹಿಸದ ರೀತಿಯಲ್ಲಿ ಬೆಳೆದವು. ಇಂದು, ನಾವು ನಿಮ್ಮೊಂದಿಗೆ ಅರ್ಧ ವರ್ಷವನ್ನು ಆಚರಿಸುತ್ತಿರುವಾಗ, ನಿನ್ನ ತಂದೆ ತಾಯಿಯಾಗಲು ನಾವು ಎಷ್ಟು ಅದ್ಭುತ ಅದೃಷ್ಟಶಾಲಿಗಳು ಮತ್ತು ಅಂತ್ಯವಿಲ್ಲದ ಸಂತೋಷವನ್ನು ಹೊಂದಿದ್ದೇವೆ ಎಂಬುದನ್ನು ನಮಗೆ ನೆನಪಿಸುತ್ತದೆ. ನಮ್ಮ ದಿನಗಳನ್ನು ಪ್ರೀತಿ, ನಗು ಮತ್ತು ಆಶ್ಚರ್ಯದಿಂದ ತುಂಬುವ ಅತ್ಯಂತ ಸಿಹಿ ಉಡುಗೊರೆ ನೀನು ಎಂದು ಬರೆದುಕೊಂಡಿದ್ದಾರೆ.

Shwetha M