ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ಸ್ಟಾರ್ ಜೋಡಿ – ಮದ್ವೆಯಾದ 4 ವರ್ಷದ ಬಳಿಕ ಗುಡ್‌ನ್ಯೂಸ್ ಕೊಟ್ಟ ಕತ್ರಿನಾ ಕೈಫ್!

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಬಾಲಿವುಡ್ ನ ಸ್ಟಾರ್ ಜೋಡಿ. ಮದ್ವೆ ಆಗಿ ನಾಲ್ಕು ವರ್ಷ ಆಯ್ತು.. ಗುಡ್‌ನ್ಯೂಸ್ ಇಲ್ವಾ ಅನ್ನೋ ಪ್ರಶ್ನೆ ಈ ದಂಪತಿಗೆ ಎದುರಾಗ್ತಿತ್ತು. ಇದೀಗ ಈ ಸ್ಟಾರ್ ಜೋಡಿ ಕಡೆಗೂ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭೂಮಿಕಾ ಎಲ್ಲೋ.. ಗೌತಮ್ ಅಲ್ಲೇ.. – ಶಕುಂತಲಾ, ಜೈದೇವ್ ಬೀದಿಗೆ ಬೀಳಲು ಕೌಂಟ್‌ಡೌನ್ ಶುರು..
ಕಳೆದ ಕೆಲವು ತಿಂಗಳಿನಿಂದ ಕತ್ರಿನಾ ಗರ್ಭಿಣಿ ಎಂಬ ವಿಚಾರ ಸದ್ದು ಮಾಡ್ತಿದೆ. ಕತ್ರಿನಾ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಅಕ್ಟೋಬರ್-ನವೆಂಬರ್‌ನಲ್ಲಿ ಜನಿಸಲಿದೆ ಎನ್ನಲಾಗ್ತಿದೆ. ಆದ್ರೆ ಆದರೆ, ದಂಪತಿ ಈ ಸಂಬಂಧ ಇಲ್ಲಿವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ಬ್ಯಾಡ್ ನ್ಯೂಜ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕತ್ರಿನಾ ಕೈಫ್ ಗರ್ಭಧಾರಣೆಯ ವದಂತಿಯ ಬಗ್ಗೆ ವಿಕ್ಕಿ ಕೌಶಲ್ ಅವರನ್ನು ಪ್ರಶ್ನಿಸಲಾಯಿತು. ಈ ಬಗ್ಗೆ ಒಳ್ಳೆಯ ಸುದ್ದಿ ಬಂದರೆ, ನಾವು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷಪಡುತ್ತೇವೆ. ಆದರೆ ಸದ್ಯಕ್ಕೆ ಊಹಾಪೋಹಗಳಲ್ಲಿ ಯಾವುದೇ ಸತ್ಯವಿಲ್ಲ. ಅಲ್ಲಿಯವರೆಗೆ ಬ್ಯಾಡ್ ನ್ಯೂಜ್ ಚಿತ್ರವನ್ನು ಆನಂದಿಸಿ, ನಾವು ಒಳ್ಳೆಯ ಸುದ್ದಿಯೊಂದಿಗೆ ಖಂಡಿತ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿದ್ರು.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021 ರಲ್ಲಿ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾದರು. ಕತ್ರಿನಾ-ವಿಕ್ಕಿ ಅವರ ವಿವಾಹದಲ್ಲಿ ಆಪ್ತರು ಹಾಜರಿದ್ದರು.

ನೋಡಿರಿ

