ಕಾಟೇರಕ್ಕೂ ಕೈ ಕೊಟ್ಟ ಲಕ್? – ದರ್ಶನ್ ಹೇಳಿಕೆ.. ಅವಾರ್ಡ್ ಮಿಸ್
ಅತ್ಯುತ್ತಮ ಚಿತ್ರಕ್ಕೆ ಪ್ರಶಸ್ತಿ ಕೈತಪ್ಪಿದ್ದೇಕೆ?

ಸ್ಯಾಂಡಲ್ ವುಡ್ ನಟ ದರ್ಶನ್ ಗೆ ಅದ್ಯಾಕೋ ಟೈಮೇ ಸರಿಯಿಲ್ಲ.. ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುತ್ತಲೇ ಇದ್ದಾರೆ.. ಒಂದಲ್ಲ ಒಂದು ಕಿರಿಕ್ ಮಾಡಿಕೊಂಡು ಕಾನೂನು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದೀಗ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಕೊಲೆ ಕೇಸ್ ನಲ್ಲಿ ಜೈಲು ಸೇರುತ್ತಿದ್ದಂತೆ ಈಗ ದರ್ಶನ್ ಸಿನಿ ಕೆರಿಯರ್ ಮೇಲೂ ಕೊಡೆತಾ ಬೀಳ್ತಾ ಇದ್ಯಾ ಅನ್ನೋ ಅನುಮಾನ ಕೂಡ ಶುರುವಾಗಿದೆ. ಇದಕ್ಕೆ ಕಾರಣ ಕಾಟೇರ ಸಿನಿಮಾ. ಹೌದು, ದರ್ಶನ್ ಕಾಟೇರ ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಬಾಕ್ಸ್ ಆಫೀಸ್‌ನಲ್ಲೂ ದಾಸನ ಸಿನಿಮಾ ದಾಖಲೆ ಬರೆದಿತ್ತು.. ಆದ್ರೀಗ ಕಾಟೇರ ಸಿನಿಮಾಗೆ ಭಾರಿ ಹಿನ್ನಡೆಯಾಗಿದೆ. 2024ನೇ ಸಾಲಿನ ಫಿಲ್ಮ್ಫೇರ್ ಸೌತ್ ಅವಾರ್ಡ್ ನಲ್ಲಿ ಕಾಟೇರ ಸಿನಿಮಾ 7 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಆದ್ರೆ ಕಾಟೇರ ಸಿನಿಮಾಗೆ ಒಂದೇ ಒಂದು ಪ್ರಶಸ್ತಿ ಸಿಕ್ಕಿಲ್ಲ. ಇದೀಗ ದರ್ಶನ್ ಅವಾರ್ಡ್ ಬಗ್ಗೆ ನೀಡಿರುವ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದೇ ಕಾರಣಕ್ಕೆ ದರ್ಶನ್ ಗೆ ಅವಾರ್ಡ್ ಸಿಕ್ಕಿಲ್ವಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ? ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಂಚಿನ ರಾಣಿ ರೇಂಜೇ ಚೇಂಜ್..! – ಮನು ಬಾಕರ್ ಬ್ರ್ಯಾಂಡ್ ಮೌಲ್ಯ ಡಬಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ದೊಡ್ಡ ಮಟ್ಟಿಗೆ ಹೈಪ್ ಇರುತ್ತೆ.. ದಾಸನ ಸಿನಿಮಾ ನೋಡಲು ಫ್ಯಾನ್ಸ್ ಕೂಡ ಕಾಯ್ತಾರೆ. ಅದೇ ರೀತಿ ಕಾಟೇರ ಸಿನಿಮಾ ಕೂಡ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ಬರೋಬ್ಬರಿ 100 ದಿನಗಳ ಭರ್ಜರಿ ಪ್ರದರ್ಶನ ಕಂಡಿತ್ತು. ಬಾಕ್ಸ್ ಆಫೀಸ್‌ನಲ್ಲೂ ದಾಖಲೆ ಬರೆದಿತ್ತು. ಬರೋಬ್ಬರಿ 200 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.. ಕಾಟೇರ ಸಕ್ಸಸ್ ಬಳಿಕ ಡಿಬಾಸ್ ಅಬ್ಬರವೂ ಜೋರಾಗಿತ್ತು.. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಪಾಲಾಗುವಂತೆ ಆಯ್ತು.. ದಾಸ ಜೈಲು ಸೇರ್ತಾ ಇದ್ದಂತೆ ಒಪ್ಪಿಕೊಂಡ ಸಿನಿಮಾಗಳ ಕತೆ ಏನು ಎಂಬ ಪ್ರಶ್ನೆಯೂ ಮೂಡಿತು. ಈ ಹೊತ್ತಲ್ಲೇ ಸೌತ್ ಇಂಡಿಯನ್ ಫಿಲ್ಮ್ ಫೇರ್ ಪ್ರಶಸ್ತಿ ಗೆ ಕಾಟೇರ ಸಿನಿಮಾ 7 ವಿಭಾಗಗಳಲ್ಲಿ ನಾಮೀನೇಟ್ ಆಗಿತ್ತು. ಇದು ನೋವಿನಲ್ಲಿದ್ದ ಅಭಿಮಾನಿಗಳಿಗೂ ಖುಷಿ ಕೊಟ್ಟಿತ್ತು.. ಆದ್ರೆ ಫಿಲ್ಮ್ ಫೇರ್ ಸೌತ್ ನಲ್ಲಿ ಕಾಟೇರ ಸಿನಿಮಾಗೆ ಲಕ್ ಕೈಕೊಟ್ಟಿದೆ.
ಹೌದು ಕಾಟೇರ ಸಿನಿಮಾ ಅತ್ಯುತ್ತಮ ಚಿತ್ರಕ್ಕೆ ನಾಮ ನಿರ್ದೇಶನ ಗೊಂಡಿತ್ತು. ಕಾಟೇರ ಸಿನಿಮಾದಿಂದ ಅತ್ಯುತ್ತಮ ಸಿನಿಮಾ ನಿರ್ದೇಶಕ ಅಂತ ತರುಣ್ ಸುಧೀರ್ ನಾಮಿನೇಟ್ ಆಗಿದ್ದರು. ಇನ್ನು ಅತ್ತುತ್ತಮ ಪೋಷಕ ಪಾತ್ರಕ್ಕೆ ಹಿರಿಯ ನಟಿ ಶೃತಿ ನಾಮಿನೇಟ್ ಆಗಿದ್ದರು. ಅತ್ಯುತ್ತಮ ಸಂಗೀತ ವಿಭಾಗದಲ್ಲಿ ವಿ ಹರಿಕೃಷ್ಣ ನಾಮಿನೇಟ್ ಆಗಿದ್ರು.. ಲೀಡಿಂಗ್ ರೋಲ್ನಲ್ಲಿ ಅತ್ಯುತ್ತಮ ನಟ ದರ್ಶನ್ ಅಂತ ನಾಮಿನೇಟ್ ಆಗಿತ್ತು. ಕಾಟೇರ ಸಿನಿಮಾದಲ್ಲಿ ದರ್ಶನ್ ಉತ್ತಮವಾಗಿ ನಟಿಸಿದ್ರು.. ಅವರ ನಟನೆಗೆ ಸಾಕಷ್ಟು ಪ್ರಶಂಸೆಗಳ ಸುರಿಮಳೆಯೇ ಹರಿದು ಬಂದಿತ್ತು. ಹೀಗಾಗಿ ಅವರಿಗೆ ಅತ್ಯುತ್ತಮ ನಟ ಅವಾರ್ಡ್ ಪಕ್ಕಾ ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಅವಾರ್ಡ್ ನಟ ರಕ್ಷಿತ್ ಶೆಟ್ಟಿ ಪಾಲಾಗಿದೆ. ಇನ್ನು, ಅತ್ಯುತ್ತಮ ಸಿನಿಮಾ ಅವಾರ್ಡ್ ಬಗ್ಗೆಯೂ ಫ್ಯಾನ್ಸ್ಗೆ ನಿರೀಕ್ಷೆ ಇತ್ತು. ಈ ಪ್ರಶಸ್ತಿ ‘ಡೇರ್ ಡೆವಿಲ್ ಮುಸ್ತಫಾ’ ಪಾಲಾಗಿದೆ. ಭಾವೈಕ್ಯತೆ ಸಾರುವ ಕಥೆಯನ್ನು ಈ ಚಿತ್ರ ಹೊಂದಿದೆ. ಇನ್ನು, ಅತ್ಯುತ್ತಮ ನಿರ್ದೇಶನ ಅವಾರ್ಡ್ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಿರ್ದೇಶಕ ಹೇಮಂತ್ ರಾವ್ ಕೈ ಸೇರಿದೆ. ಕಾಟೇರ ಸಿನಿಮಾಗೆ ಯಾವುದೇ ವಿಭಾಗಗಳಲ್ಲಿ ಪ್ರಶಸ್ತಿ ಲಭ್ಯವಾಗಲೇ ಇಲ್ಲ.ಇದು ಸಿನಿಮಾ ಟೀಮ್ ಹಾಗೂ ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ದರ್ಶನ್ ಕೊಲೆ ಕೇಸ್ ನಲ್ಲಿ ಸಿಲುಕಿಕೊಂಡಿರುವುದೇ ಮುಳುವಾಯ್ತಾ? ಈ ಕಾರಣಕ್ಕಾಗಿಯೇ ಅವಾರ್ಡ್ ಕೈ ತಪ್ಪಿತಾ ಅನ್ನೋ ಚರ್ಚೆ ನಡೆಯುತ್ತಿದೆ.
ಇವೆಲ್ಲದ್ರ ಮಧ್ಯೆ ದರ್ಶನ್ ನೀಡಿರುವ ಹಳೆಯ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ದರ್ಶನ್ ಅವಾರ್ಡ್‌ಗಳ ಬಗ್ಗೆ ಸ್ಟೇಟ್ ಮೆಂಟ್ ವೊಂದು ನೀಡಿದ್ರು.. ಪ್ರಶಸ್ತಿಗಳು ಕೊಡೋದಲ್ಲ, ದುಡ್ಡು ಕೊಟ್ಟು ಖರೀದಿ ಮಾಡಬೇಕು ಎಂದು ಅವರು ಹೇಳಿದ್ದರು. ಈಗ ಕಾಟೇರ ಚಿತ್ರಕ್ಕೆ ಯಾವುದೇ ಅವಾರ್ಡ್ ಸಿಗದ ಕಾರಣ ದರ್ಶನ್ ಫ್ಯಾನ್ಸ್ ಈ ಹೇಳಿಕೆಯನ್ನು ವೈರಲ್ ಮಾಡುತ್ತಿದ್ದಾರೆ. ಕೆಲವರು ದುಡ್ಡು ಖರ್ಚು ಮಾಡಿದ್ರೆ ಮಾತ್ರ ಪ್ರಶಸ್ತಿ ಸಿಗುತ್ತೆ ಅಂತಾ ಕಾಮೆಂಟ್ ಮಾಡ್ತಾ ಇದ್ದಾರೆ..
ನಟ ದರ್ಶನ್ ಸಾಲು ಸಾಲು ಸಂಕಷ್ಟಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ವೇಳೆ ದರ್ಶನ್ ವಿರುದ್ಧ ಹಲವು ಸಾಕ್ಷ್ಯಗಳು ಸಿಕ್ಕಿವೆ. ವಿಚಾರಣೆ ಕೂಡ ನಡಿತಾ ಇದೆ.. ಇದೀಗ ಸಿನಿಮಾ ವಿಚಾರದಲ್ಲಿ ಹಿನ್ನಡೆಯಾಗಿದ್ದು, ಅವರ ಫ್ಯಾನ್ಸ್‌ಗೂ ಬೇಸರ ತರಿಸಿದೆ. ದರ್ಶನ್ ಗೆ ಕೊಲೆ ಆರೋಪದಿಂದ ಮುಕ್ತಿ ಸಿಗುತ್ತಾ? ಸಿನಿ ಇಂಡಂಸ್ಟ್ರಿಯಲ್ಲಿ ಮತ್ತೆ ಸದ್ದು ಮಾಡ್ತಾರಾ ಅಂತಾ ಕಾಡು ನೋಡ್ಬೇಕಾಗಿದೆ.