ಕಟೀಲು ದುರ್ಗಾಪರಮೇಶ್ವರಿ ದೇವಿಗೆ 10 ಸಾವಿರ ಅಟ್ಟಿ ಮಲ್ಲಿಗೆ ಅರ್ಪಣೆ

ಕಟೀಲು ದುರ್ಗಾಪರಮೇಶ್ವರಿ ದೇವಿಗೆ 10 ಸಾವಿರ ಅಟ್ಟಿ ಮಲ್ಲಿಗೆ ಅರ್ಪಣೆ

ಕಟೀಲು: ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರೆ ಪ್ರಯುಕ್ತ ದೇವರ ಬಲಿ ಉತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯತ್ತಿವೆ. ಗುರುವಾರ ರಾತ್ರಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಶಯನೋತ್ಸವ ನಡೆದಿದ್ದು, ದೇವರಿಗೆ 10 ಸಾವಿರ ಅಟ್ಟಿ ಮಲ್ಲಿಗೆ ಹೂವು ಸಮರ್ಪಣೆಯಾಗಿದೆ.

ಇದನ್ನೂ ಓದಿ: ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ – ಏಪ್ರಿಲ್ 17 ರಿಂದ ನೊಂದಣಿಗೆ ಅವಕಾಶ

ದೇವಿಯ ಶಯೋತ್ಸವದ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಗುರುವಾರ ಹಗಲಿನಲ್ಲಿ ಬ್ರಹ್ಮರಥೋತ್ಸವ ನಡೆದಿದ್ದು, ಮಧ್ಯಾಹ್ನದಿಂದಲೇ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಲ್ಲಿಗೆ ಸಮರ್ಪಣೆ ಮಾಡಿದ್ದು, ಒಟ್ಟು 10 ಸಾವಿರ ಅಟ್ಟಿ ಮಲ್ಲಿಗೆ ಅರ್ಪಣೆಯಾಗಿದೆ.

ಶುಕ್ರವಾರ ಪ್ರಾತಃ ಕವಾಟೋದ್ಘಾಟನೆ, ವಸಂತ ಮಂಟಪದಲ್ಲಿ ಶಯನ – ಪುಷ್ಪ ವಿತರಣೆ, ಪ್ರಸಾದ ವಿತರಣೆ, ಅಭಿಷೇಕ ಸೇವೆಗಳು ಮಹಾಪೂಜೆ ನೆರವೇರಲಿದೆ. ಸಂಜೆ ಯಾತ್ರೆ ಬಲಿ ಹೊರಟು ವಸಂತ ಪೂಜೆ, ಓಕುಳಿ ಪೂಜೆ, ಚಿನ್ನದ ಪಲ್ಲಕ್ಕಿಯಲ್ಲಿ ಎಕ್ಕಾರು ಸವಾರಿ, ಕಟ್ಟೆ ಪೂಜೆ, ರಾತ್ರಿ ರಥ ಬಲಿ, ರಥಾರೋಹಣ ನಡೆಯಲಿದೆ.

suddiyaana