ಕರುಣ್ ನಾಯರ್ ಕಣ್ಣೀರು – ಗೆಳೆಯನ ಸಂತೈಸಿದ ಕೆಎಲ್ ರಾಹುಲ್

ಕರುಣ್ ನಾಯರ್ ಕಣ್ಣೀರು – ಗೆಳೆಯನ ಸಂತೈಸಿದ ಕೆಎಲ್ ರಾಹುಲ್

8 ವರ್ಷಗಳ ನಂತರ ಆಡಲು ಅವಕಾಶ ಸಿಕ್ಕರೂ ಕೂಡಾ ಯಾಕೋ ಕನ್ನಡಿಗನ ಅದೃಷ್ಟವೇ ಸರಿಯಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದರೂ ಕೂಡಾ ಕಳಪೆ ಅಲ್ಲದಿದ್ದರೂ, ಒಂದಾದರೂ ಅರ್ಧ ಶತಕ ಕೂಡಾ ಬಾರಿಸಲು ಸಾಧ್ಯವಾಗಿರಲಿಲ್ಲ. ಇಂಗ್ಲೆಂಡ್ ವಿರುದ್ಧ ಆಡಿದ 6 ಇನಿಂಗ್ಸ್​ಗಳಲ್ಲಿ ಕರುಣ್ ಕಲೆಹಾಕಿದ ಒಟ್ಟು ಸ್ಕೋರ್ 131 ರನ್​ಗಳು ಮಾತ್ರ. ಇದೀಗ ಕರುಣ್ ನಾಯರ್ ಕಣ್ಣೀರು ಹಾಕಿರುವ ಫೋಟೋ ವೈರಲ್ ಆಗಿದೆ. ಅದು ಇಂಗ್ಲೆಂಡ್‌ನಲ್ಲಿಯೇ ಅನ್ನೋದು ಫೋಟೋದಲ್ಲಿ ಗೊತ್ತಾಗ್ತಿದೆ. ಯಾವಾಗ, ಏನಾಯ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಇಂಗ್ಲೆಂಡ್ ಪರ ಬ್ಯಾಟರ್ ಗಳ ಭರ್ಜರಿ ಪ್ರದರ್ಶನ -10 ವರ್ಷಗಳ ಬಳಿಕ ಭಾರತ ಕೆಟ್ಟ ದಾಖಲೆ  

ಕರುಣ್ ನಾಯರ್ ಟೀಮ್ ಇಂಡಿಯಾ ಪರ 6 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 7 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ಅವರು ತ್ರಿಶತಕ ಸಿಡಿಸುವ ಮೂಲಕ ಮಿಂಚಿದ್ದರು. ಆದರೆ ಈ ತ್ರಿಪಲ್ ಸೆಂಚುರಿ ಬಳಿಕ ವಿಫಲರಾದ ಕಾರಣ ಅವರನ್ನು ಆ ಬಳಿಕ ಭಾರತ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ. ಇದೀಗ 8 ವರ್ಷಗಳ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡರೂ, ಬಿಗ್ ಸ್ಕೋರ್ ಬರಲೇ ಇಲ್ಲ. ಅವಕಾಶ ಬಳಸಿಕೊಳ್ಳುವಲ್ಲಿ ಕರುಣ್ ನಾಯರ್ ಎಡವಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಡಿದ 6 ಇನಿಂಗ್ಸ್​ಗಳಲ್ಲಿ ಕರುಣ್ ಕಲೆಹಾಕಿದ ಒಟ್ಟು ಸ್ಕೋರ್ 131 ರನ್​ಗಳು ಮಾತ್ರ. ಹೀಗಾಗಿಯೇ ನಾಲ್ಕನೇ ಟೆಸ್ಟ್​ನಿಂದ ಕನ್ನಡಿಗನನ್ನು ಕೈ ಬಿಡಲಾಗಿತ್ತು. ಇತ್ತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಕರುಣ್ ನಾಯರ್ ಕಣ್ಣೀರು ಹಾಕುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಫೋಟೋದಲ್ಲಿ ಕರುಣ್ ಕಣ್ಣೀರು ಹಾಕುತ್ತಿದ್ದರೆ, ಅತ್ತ ಕೆಎಲ್ ರಾಹುಲ್ ತನ್ನ ಗೆಳೆಯನನ್ನು ಸಮಾಧಾನಪಡಿಸುತ್ತಿರುವುದು ಕಾಣಬಹುದು.

ಅಂದಹಾಗೆ ಕರುಣ್ ಕಣ್ಣೀರು ಹಾಕಿದ್ದು ಮ್ಯಾಂಚೆಸ್ಟರ್ ಟೆಸ್ಟ್​ ಪಂದ್ಯದ ವೇಳೆ ಅಲ್ಲ. ಬದಲಾಗಿ ಲಾರ್ಡ್ಸ್​ ಟೆಸ್ಟ್ ಪಂದ್ಯದ ವೇಳೆ ಕಂಡು ಬಂದ ದೃಶ್ಯ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಕರುಣ್ ಕೇವಲ 14 ರನ್​ಗಳಿಸಿ ಔಟಾಗಿದ್ದರು. ತನ್ನ ಕೆರಿಯರ್​ಗೆ ನಿರ್ಣಾಯಕವಾಗಿದ್ದ ಈ ಇನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡದೇ ಔಟಾಗಿದ್ದರಿಂದ ಅವರು ನಿರಾಸೆಗೊಂಡಿದ್ದರು. ಹೀಗಾಗಿಯೇ ಔಟಾದ ಬಳಿಕ ಲಾರ್ಡ್ಸ್ ಬಾಲ್ಕನಿಯಲ್ಲಿ ಕೂತಿದ್ದ ಕರುಣ್ ನೋವಲ್ಲಿ ಕಣ್ಣೀರು ಹಾಕಿದ್ದರು. ಈ ವೇಳೆ ಕರ್ನಾಟಕದ ಆಟಗಾರ ಕೆಎಲ್ ರಾಹುಲ್ ಅವರನ್ನು ಸಮಾಧಾನ ಮಾಡುತ್ತಿರುವುದು ಕಂಡು ಬಂದಿದೆ. ಎಂಟು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ ಕರುಣ್ ನಾಯರ್ ನಿರೀಕ್ಷಿತ ರೀತಿಯಲ್ಲಿ ಪ್ರದರ್ಶನ ನೀಡಿಲ್ಲ. ಹಾಗಂತಾ ಕರುಣ್ ನಾಯರ್ ತೀರಾ ಕಳಪೆಯಾಗಿಯೂ ಆಡಿಲ್ಲ. ಒಂದೇ ಒಂದು ಅರ್ಧಶತಕ ಬಾರಿಸಿಲ್ಲ ಅನ್ನೋದು ಬಿಟ್ಟರೆ ಉತ್ತಮ ಜೊತೆಯಾಟಕ್ಕೆ ಸಾಥ್ ನೀಡಿದ್ದರು.

Sulekha