ಜಾರಿ ಬಿದ್ದ INDಗೆ ಕರುಣ್ ಆಸರೆ – ನಾಯರ್ ಕೈ ಹಿಡಿದ Dear ಕ್ರಿಕೆಟ್
3146 ದಿನದ ನಂತ್ರ ಆಫ್ ಸೆಂಚುರಿ

ಟೀಂ ಇಂಡಿಯಾದಲ್ಲಿ ಒಂದೇ ಒಂದು ಅವಕಾಶ ಸಿಕ್ಕಿದ್ರೆ ಸಾಕು ಅಂತ ಹೇಗ 8 ವರ್ಷಗಳಿಂದ ಕರುಣ್ ನಾಯರ್ ಕಾಯ್ತಾ ಇದ್ರೂ ಹಾಗೇ ಅಭಿಮಾನಿಗಳು ಇವರಿಗೆ ಅವಕಾಶ ಸಿಗಬೇಕು ಅಂತ ಕಾಯ್ತಾ ಇದ್ರೂ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕನ್ನಡಿಗ ಕರುಣ್ ನಾಯರ್ ಆಯ್ಕೆಯಾದಾಗ ತುಂಬಾ ಜನ ಖುಷಿ ಪಟ್ಟಿದ್ರು. ಆದ್ರೆ ಮೊದಲ ಮೂರು ಪಂದ್ಯದಲ್ಲಿ ಚಾನ್ಸ್ ಸಿಕ್ಕಿದ್ರೂ ಕರುಣ್ ನಾಯರ್ ಸದ್ದೇ ಮಾಡಿಲ್ಲ, ಡಿಯರ್ ಕ್ರಿಕೆಟ್ ಕೊಟ್ಟ ಅವಕಾಶವನ್ನ ನಾಯರ್ ಸರಿಯಾಗಿ ಬಳಸಿಕೊಂಡಿಲ್ಲ.. 4 ನೇ ಟೆಸ್ಟ್‌ನಲ್ಲಿ ತಪ್ಪಿದ ಅವಕಾಶ 5ನೇ ಟೆಸ್ಟ್ ನಲ್ಲಿ ಸಿಗುತ್ತಿದ್ದಂತೆ ಸುನಾಮಿಯಂತೆ ಆರ್ಭಟಿಸುತ್ತಿದ್ದಾರೆ.. ತಾನು ಕ್ರಿಕೆಟ್‌ಗೆ ಅನ್‌ಫಿಟ್ ಅಲ್ಲ ಅನ್ನೋದ್ದನ್ನ ತೋರಿಸುತ್ತಿದ್ದಾರೆ. ಓವಲ್‌ನಲ್ಲಿ ನಡೆಯುತ್ತಿರೋ 5ನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ಕಂ ಬ್ಯಾಕ್ ಮಾಡಿದ್ದಾರೆ.
3148 ಬಳಿಕ ಇಂಗ್ಲೆಂಡ್‌ನಲ್ಲಿ ಕರುಣ್ ಆಫ್ ಸೆಂಚುರಿ
5ನೇ ಟೆಸ್ಟ್ ಪಂದ್ಯದ ಮೊದಲ ದಿನ ಕುಸಿದ ಭಾರತಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟರ್ ಕರುಣ್ ನಾಯರ್ ಅವರು ಸೊಗಸಾದ ಅರ್ಧಶತಕ ಬಾರಿಸುವ ಮೂಲಕ ಆಸರೆಯಾದರು. ಭಾರತ ತಂಡ 83ಕ್ಕೆ 3 ವಿಕೆಟ್ ಗಳನ್ನು ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸಿಗೆ ಕರುಣ್ ನಾಯರ್ ಬಂದ್ರು. ಒಂದು ಕಡೆಯಿಂದ ವಿಕೆಟ್ ಗಳು ನಿರಂತರವಾಗಿ ಬೀಳುತ್ತಿದ್ದರೂ ಕ್ರೀಸಿನಲ್ಲಿ ನೆಲಕಚ್ಚಿ ಆಡುವ ಮೂಲಕ ಇನಿಂಗ್ಸ್ ನ ಮರ್ಯಾದೆ ಕಾಪಾಡಿದರು. 89 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿ, ತಂಡವನ್ನು ಸ್ಥಿರಗೊಳಿಸಿದರು. ಡ್ರೆಸ್ಸಿಂಗ್ ರೂಂ ಕಡೆಗೆ ಬ್ಯಾಟ್ ಎತ್ತಿ ಸಂಭ್ರಮಿಸಿದರು. 2016ರ ಚೆನ್ನೈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ 303* ರನ್‌ಗಳ ತ್ರಿಶತಕದ ನಂತರ, ಇದು ನಾಯರ್‌ರ ಎರಡನೇ ಅತ್ಯುತ್ತಮ ಟೆಸ್ಟ್ ಸ್ಕೋರ್ ಆಗಿದೆ. 3,148 ದಿನಗಳ ಅಂದ್ರೆ 9 ವರ್ಷದ ಬಳಿಕ ಬಂದ ಈ ಅರ್ಧಶತಕ ಇದಾಗಿದೆ. ಕರುಣ್ ಎರಡನೇ ದಿನವಾದ ಇಂದು 57 ರನ್ ಔಟ್ ಆದ್ರು.
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಶತಕಗಳ ಸರಮಾಲೆ ಕಟ್ಟಿದ್ದ ಕರುಣ್ ನಾಯರ್ ಇಂಗ್ಲೆಂಡ್ ಸರಣಿಯ ಮೊದಲು 3 ಪಂದ್ಯದಲ್ಲಿ ಒಂದು ಅರ್ಧಶತಕವನ್ನೂ ಗಳಿಸೋಕೆ ಆಗ್ದೇ ಒದ್ದಾಡಿದ್ರು. ಟಾಪ್ ಆರ್ಡರ್ನಲ್ಲೇ ಚಾನ್ಸ್ ನೀಡಿದ್ರೂ ಅರ್ಧಶತಕವನ್ನೂ ಬಾರಿಸಲು ಸಾಧ್ಯವಾಗಿರಲಿಲ್ಲ.. ಇದ್ದನ್ನ ನೋಡಿದ ಫ್ಯಾನ್ಸ್ ಕರುಣ್ ಕ್ರಿಕೆಟ್ ಕೆರಿಯಲ್ ಎಂಡ್ ಆಗುತ್ತೆ ಅಂತ ಅಂದ್ಕೊಂಡಿದ್ರು. ಆದ್ರೆ ಈಗ 5ನೇ ಟೆಸ್ಟ್ ನಲ್ಲಿ ಕರುಣ್ ಕಂ ಬ್ಯಾಕ್ ಮಾಡಿದ್ದು, 57 ರನ್‌ಗಳಿಸಿ ಔಟ್ ಆಗಿದ್ದಾರೆ.

ನೋಡಿರಿ

