6 ಇನ್ನಿಂಗ್ಸ್.. 664 ರನ್ – ಕರುಣ್ ನಾಯರ್ ಇನ್ನೆಷ್ಟು ಹೊಡೆಯಬೇಕು?

6 ಇನ್ನಿಂಗ್ಸ್.. 664 ರನ್ – ಕರುಣ್ ನಾಯರ್ ಇನ್ನೆಷ್ಟು ಹೊಡೆಯಬೇಕು?

ವಿದರ್ಭ ತಂಡದ ಕ್ಯಾಪ್ಟನ್ ಆಗಿ ಬ್ಯಾಟಿಂಗ್​ನಲ್ಲೂ ಅಬ್ಬರಿಸುತ್ತಿರುವ ಕರುಣ್ ನಾಯರ್, 6 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಬರೋಬ್ಬರಿ 664 ರನ್ ​ಗಳಿಸಿದ್ದಾರೆ. ಇದರಲ್ಲಿ 5 ಶತಕಗಳಿರುವುದು ವಿಶೇಷ. ಕರುಣ್ ನಾಯರ್​ರ ಮತ್ತೊಂದು ಸ್ಪೆಷಾಲಿಟಿ ಅಂದ್ರೆ ಈ 6 ಇನ್ನಿಂಗ್ಸ್​ಗಳಲ್ಲಿ ಒಮ್ಮೆ ಮಾತ್ರ ವಿಕೆಟ್ ಒಪ್ಪಿಸಿದ್ದಾರೆ. ಉಳಿದ 5 ಇನ್ನಿಂಗ್ಸ್​ನಲ್ಲಿ ಅಜೇಯರಾಗಿ ಉಳಿದಿದ್ದಾರೆ. ಇಡೀ ಟೂರ್ನಿಯಲ್ಲಿ ಯಾವುದೇ ತಂಡ ಅಥವಾ ಬೌಲರ್ ಎಷ್ಟೇ ಸ್ಟ್ರಾಂಗ್ ಇದ್ರೂ ಕರುಣ್ ನಾಯರ್ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಎಲ್ಲರನ್ನೂ ನಡುಗಿಸುತ್ತಿದ್ದಾರೆ. ಟೀಂ ಇಂಡಿಯಾದಿಂದ ದೂರನೇ ಉಳಿದಿದ್ರೂ ದೇಶೀಯ ಕ್ರಿಕೆಟ್ ನಲ್ಲಿ ರನ್ ಗಳ ಮಳೆ ಸುರಿಸುತ್ತಿದ್ದಾರೆ.  2024-25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್  ಕ್ರಮವಾಗಿ 112, 44, 163, 111, 112 ಹಾಗೂ 122 ರನ್​ ಸಿಡಿಸಿದ್ದಾರೆ. ಇದು ಕರುಣ್ ನಾಯರ್ ಅವರ ಕೊನೆಯ ಆರು ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ಸ್ಕೋರ್‌ಗಳು. ಯುಪಿ ವಿರುದ್ಧ 112 ರನ್​ಗಳಿಸಿ ಔಟ್ ಆಗಿದ್ದರು. ಉಳಿದೆಲ್ಲಾ ಇನ್ನಿಂಗ್ಸ್​ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಆದ್ರೆ ಇಷ್ಟೆಲ್ಲಾ ಅಬ್ಬರಿಸಿದ್ರೂ ತಂಡಕ್ಕೆ ಕಮ್ ಬ್ಯಾಕ್ ಮಾಡೋ ಕನಸು ಕನ್ನೂ ಕನಸಾಗೇ ಉಳಿದಿದೆ.

ಕರುಣ್ ನಾಯರ್​ 2016 ರಲ್ಲಿ ಟೀಂ ಇಂಡಿಯಾ ಪರ ಆಡಿದ್ದು, ಆರು ಟೆಸ್ಟ್​ ಪಂದ್ಯಗಳಲ್ಲಿ 374 ರನ್ ಗಳಿಸಿದ್ದರು. ಆಗಲೂ ಇದೇ ರೀತಿಯ ಪ್ರದರ್ಶನ ತೋರಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ನಾಯರ್ ಇಂಗ್ಲೆಂಡ್ ವಿರುದ್ಧದ ತ್ರಿಶತಕ ಸಿಡಿಸಿದ್ದರು. ಭಾರತೀಯ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ತ್ರಿಶತಕ ಸಾಧನೆ ಮಾಡಿದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆ ಅವರ ಹೆಸರಿನಲ್ಲಿದೆ. ಅಂದ್ರೆ ಭಾರತದ ಪರ ವೀರೇಂದ್ರ ಸೆಹ್ವಾಗ್ ರನ್ನ ಬಿಟ್ರೆ ತ್ರಿಬಲ್ ಸೆಂಚುರಿ ಬಾರಿಸಿದ್ದು ಕರುಣ್ ನಾಯರ್ ಒಬ್ರೇ. 2016ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 303 ರನ್ ಕಲೆ ಹಾಕಿದ್ದರು. ಅದಕ್ಕೂ ಮುನ್ನ 2004ರಲ್ಲಿ ವೀರೇಂದ್ರ ಸೆಹ್ವಾಗ್ ಮುಲ್ತಾನ್ ಸ್ಟೇಡಿಯಮ್​ನಲ್ಲಿ ಪಾಕ್ ವಿರುದ್ಧ 309 ರನ್ ಬಾರಿಸಿದ್ದರು. ಹಾಗೇ 2008ರಲ್ಲಿ ಮತ್ತೆ ಸೌತ್ ಆಫ್ರಿಕಾ ವಿರುದ್ಧ 319 ರನ್ ಸಿಡಿಸಿದ್ದರು. ಅಂದ್ರೆ ಸೆಹ್ವಾಲ್ ತಮ್ಮ ಕರಿಯರ್​ನಲ್ಲಿ 2 ಬಾರಿ ತ್ರಿಬಲ್ ಸೆಂಚುರಿ ಬಾರಿಸಿದ್ದಾರೆ.

2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ನಂತರ ಕರುಣ್ ನಾಯರ್ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಆಡಿದ 6 ಪಂದ್ಯಗಳಿಂದ 62.33 ಸರಾಸರಿಯಲ್ಲಿ ಬಲಗೈ ಆಟಗಾರ 374 ರನ್ ಸಿಡಿಸಿದ್ದಾರೆ. ಆದ್ರೂ ಮತ್ತೆ ಚಾನ್ಸ್ ಕೊಡ್ಲೇ ಇಲ್ಲ. ಕರುಣ್ ನಾಯರ್​ಗೆ ಸದ್ಯ 33 ವರ್ಷ. 2017ರ ಬಳಿಕ ಟೀಂ ಇಂಡಿಯಾದಿಂದ ಹೊರಗೆ ಉಳಿದಿರುವ ಕರುಣ್​ಗೆ ಅವ್ರ ವಯಸ್ಸೇ ಕಂಟಕವಾದಂತೆ ಕಾಣ್ತಿದೆ. ಅಂದ್ರೆ 33 ವರ್ಷ ಆಗಿರೋದ್ರಿಂದ ಸೆಲೆಕ್ಟ್ ಮಾಡೋಕೆ ಬಿಸಿಸಿಐ ಕೂಡ ಹಿಂದೇಟು ಹಾಕ್ತಿದೆ. ವಾಸ್ತವ ಏನಂದ್ರೆ ಟೀಂ ಇಂಡಿಯಾದಲ್ಲಿ 35 ವರ್ಷ ಮೇಲ್ಪಟ್ಟಿದ್ರೂ ತಂಡದಲ್ಲಿದ್ದು ಕಳಪೆ ಫಾರ್ಮ್​ನಲ್ಲಿರೋ ಸಾಕಷ್ಟು ಆಟಗಾರರು ಇದ್ದಾರೆ. ಆದ್ರೂ ಕರುಣ್ ವಿಚಾರದಲ್ಲಿ ಮಾತ್ರ ಪದೇಪದೆ ಮೋಸ ಆಗ್ತಿದೆ. 33 ವರ್ಷ ನಿವೃತ್ತಿ ವಯಸ್ಸಂತೂ ಖಂಡಿತವಾಗಿಯೂ ಅಲ್ಲ. ಇದೇ ವಯಸ್ಸಿನಲ್ಲಿ ಟೀಮ್ ಇಂಡಿಯಾಕ್ಕೆ ಅದೆಷ್ಟೋ ಆಟಗಾರರು ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. ಆದರೆ ಕರುಣ್ ಈಗಾಗಲೇ ಟೀಮ್ ಇಂಡಿಯಾ ಜೆರ್ಸಿ ತೊಟ್ಟಾಗಿದೆ. ಈಗೇನಿದ್ದರೂ ಕಂ ಬ್ಯಾಕ್ ಮಾತ್ರ ಬಾಕಿ.

ಕರುಣ್ ನಾಯರ್​ಗೆ ಆಗ್ತಿರೋ ಮೋಸ ನೋಡಿಯೇ ಸಾಕಷ್ಟು ಮಾಜಿ ಕ್ರಿಕೆಟರ್ಸ್ ಬಿಸಿಸಿಐ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹರ್ಭಜನ್ ಸಿಂಗ್ ಕೂಡ ಇದನ್ನೇ ಪ್ರಶ್ನಿಸಿದ್ದಾರೆ. ಕರುಣ್‌ ನಾಯರ್ ಅಮೋಘ ಫಾರ್ಮ್‌ನಲ್ಲಿದ್ರೂ ಸಹ ಅವರನ್ನು ಆಯ್ಕೆ ಮಾಡದಿರಲು ಕಾರಣ ಏನು ಎಂಬ ಹರ್ಭಜನ್ ಪ್ರಶ್ನೆ ಮಾಡಿದ್ದಾರೆ. ಕೆಲವು ಆಟಗಾರರು ದೇಶೀಯ ಟೂರ್ನಿಯಲ್ಲಿ ಎರಡು ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಲಿ, ಐಪಿಎಲ್‌ನಲ್ಲಿ ಅಬ್ಬರಿಸಿದರೆ, ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತದೆ. ಆದರೆ ದೇಶೀಯ ಟೂರ್ನಿಯಲ್ಲಿ ಮಿಂಚುತ್ತಿರುವ ಆಟಗಾರರಿಗೆ ಅವಕಾಶ ಇಲ್ಲವೇ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ದೇ ಕರುಣ್‌ ಟ್ಯಾಟೂ ಹಾಕಿಸಿಕೊಂಡಿಲ್ಲ. ಫ್ಯಾಷನ್ ಮಾಡಲ್ಲ ಅಂತಾ ಆಯ್ಕೆ ಮಾಡ್ತಿಲ್ವಾ? ರೋಹಿತ್ ಮತ್ತು ವಿರಾಟ್ ಫಾರ್ಮ್‌ನಲ್ಲಿಲ್ಲ ಎಂದು ಜನರು ಹೇಳುತ್ತಾರೆ,. ಹಾಗೇ ಅವರನ್ನು ರಣಜಿಗೆ ಕಳುಹಿಸುತ್ತಿದ್ದೀರಿ. ಆದರೆ ರಣಜಿ ಆಡುತ್ತಾ ರನ್ ಗಳಿಸುತ್ತಿರುವವರನ್ನು… ಏಕೆ ನಿರ್ಲಕ್ಷಿಸುತ್ತಿದ್ದೀರಿ? ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Shantha Kumari

Leave a Reply

Your email address will not be published. Required fields are marked *