ಕರುಣ್ : 5 ಇನ್ನಿಂಗ್ಸ್.. 740 ರನ್ಸ್ –  ಸಾಯಿ ಸುದರ್ಶನ್ : 5 ಇನ್ನಿಂಗ್ಸ್.. 134 ರನ್ಸ್ – ಈ ನಂಬರ್ ಗಂಭೀರ್ ಗೆ ಕಾಣಲ್ವಾ?

ಕರುಣ್ : 5 ಇನ್ನಿಂಗ್ಸ್.. 740 ರನ್ಸ್ –  ಸಾಯಿ ಸುದರ್ಶನ್ : 5 ಇನ್ನಿಂಗ್ಸ್.. 134 ರನ್ಸ್ – ಈ ನಂಬರ್ ಗಂಭೀರ್ ಗೆ ಕಾಣಲ್ವಾ?

ಭಾರತದ ಟೆಸ್ಟ್ ಕ್ರಿಕೆಟ್ ಸದ್ಯ ಅಧೋಗತಿಗೆ ಸಾಗ್ತಿದೆ. ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತವ್ರು ಗುವಾಹಟಿಯಲ್ಲಿ ನಡೆದ ಎರಡನೇ ಮ್ಯಾಚಲ್ಲಿ ಅದಕ್ಕಿಂತ್ಲೂ ಹೀನಾಯ ಪ್ರದರ್ಶನ ನೀಡಿದ್ದಾರೆ. ಭಾರತ ತಂಡದ ಸೋಲಿಗೆ ಒನ್ ಆಫ್ ದಿ ಮೇನ್ ರೀಸನ್ ಟೀಂ ಸೆಲೆಕ್ಷನ್. ಅನುಭವಿಗಳಿಗೆ, ಫಾರ್ಮ್​ನಲ್ಲಿ ಇದ್ದವ್ರಿಗೆ ಚಾನ್ಸ್ ಕೊಡೋದು ಬಿಟ್ಟು ತಮಗೆ ಬೇಕಾದವ್ರಿಗೆ ಅವಕಾಶ ಕೊಟ್ಟಿದ್ದೇ ದೊಡ್ಡ ಎಡವಟ್ಟಾಗಿದೆ. ಅದ್ರಲ್ಲೂ ರಣಜಿ ಟೂರ್ನಿಯ ಹೀರೋ ಕರುಣ್ ನಾಯರ್​ರನ್ನ ಕೈಬಿಟ್ಟು ಸಾಯಿ ಸುದರ್ಶನ್​ಗೆ ಮಣೆ ಹಾಕಿದ ಬಿಸಿಸಿಐ ಈಗ ಸರಿಯಾಗೇ ಹೊಡೆತ ತಿಂದಿದೆ.

ಇದನ್ನೂ ಓದಿ : ಮುಖ್ಯಮಂತ್ರಿ ಬದಲಾವಣೆ ಆದ್ರೆ ಡಿಕೆಶಿ ಅಲ್ಲ.. ಪರಮೇಶ್ವರ್ ಸಿಎಂ ಆಗಬೇಕು! – ಕೆಎನ್ ರಾಜಣ್ಣ

ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲೇ ಟೆಸ್ಟ್ ಸರಣಿ ಸೋತಿರೋ ಭಾರತಕ್ಕೆ ವಿಶ್ವಮಟ್ಟದಲ್ಲಿ ಗರ್ವಭಂಗವಾಗಿದೆ. ದಶಕಗಳ ಕಾಲ ವಿಶ್ವಮಟ್ಟದಲ್ಲಿ ಭಾರತವನ್ನ ಬಲಿಷ್ಠ ತಂಡವನ್ನಾಗಿ ಕಟ್ಟಿ ಬೆಳೆಸಿದ ದಿಗ್ಗಜರು ಕೂಡ ಟೀಂ ಇಂಡಿಯಾ ಸ್ಥಿತಿ ಕಂಡು ಸಿಟ್ಟಾಗಿದ್ದಾರೆ. ಅಭಿಮಾನಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ವಾರ್ ನಡೀತಿದೆ. ಌಕ್ಚುಲಿ ಸೌತ್ ಆಫ್ರಿಕಾ ವಿರುದ್ಧ ಟಫ್ ಫೈಟ್ ನೀಡಿ ಭಾರತ ಸೋತಿದ್ರೆ ಬಹುಶಃ ಇಟ್ಸ್ ಎ ಗೇಮ್ ಅನ್ಕೊಂಡು ಎಕ್ಸ್​ಕ್ಯೂಸ್ ಕೊಡ್ತಿದ್ರು. ಆದ್ರೆ ಟೀಂ ಇಂಡಿಯಾದ ಆಟಗಾರರು ಫೈಟೇ ಕೊಡದೇ ಸೋಲೊಪ್ಪಿಕೊಂಡಿದ್ದಾರೆ. ನಿಜ ಹೇಳ್ಬೇಕಂದ್ರೆ ತಂಡದಲ್ಲಿ ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಡುವಂತ ಒಬ್ಬೇ ಒಬ್ಬ ದಿಟ್ಟ ಆಟಗಾರ ಇಲ್ಲ. ಗೆಲ್ಲಿಸಿಕೊಡುವಂತ ಆಟಗಾರರಿಗೆ ಅವಕಾಶ ಕೊಟ್ಟಿಲ್ಲ. ಈ ಪೈಕಿ ಮತ್ತೊಮ್ಮೆ ಮೋಸಕ್ಕೆ ಒಳಗಾಗಿದ್ದು ಕರುಣ್ ನಾಯರ್. ಸಾಯಿ ಸುದರ್ಶನ್ ಬದಲಿಗೆ ತಂಡಕ್ಕೆ ಸೆಲೆಕ್ಟ್ ಆಗೋಕೆ ಕರುಣ್ ನಾಯರ್​ಗೆ ಎಲ್ಲಾ ರೀತಿಯ ಕ್ವಾಲಿಟೀಸ್ ಇತ್ತು. ಆದ್ರೆ ಗಂಭೀರ್ ಎಡವಟ್ಟಿಗೆ ಅವಕಾಶ ಕಳ್ಕೊಂಡ್ರು. ಇಬ್ಬರು ಆಟಗಾರರ ಕಳೆದ ಐದು ಇನ್ನಿಂಗ್ಸ್ ಗಳೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎನ್ನುವಂತಿದೆ.

ಇಂಗ್ಲೆಂಡ್ ಟೆಸ್ಟ್ ಸಿರೀಸ್ ಬಳಿಕ ಕರುಣ್ ನಾಯರ್​ರನ್ನ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಆ ಬಳಿಕ ರಣಜಿಗೆ ಕಂ ಬ್ಯಾಕ್ ಮಾಡಿದ್ದ ಕರುಣ್ ರನ್​ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದಾರೆ. ಕಳೆದ ಐದು ರಣಜಿ ಇನ್ನಿಂಗ್ಸ್ ಗಳಲ್ಲಿ ಕರುಣ್ ನಾಯರ್ ಎಕ್ಸ್​ಟ್ರಾರ್ಡಿನರಿ ಪರ್ಫಾಮೆನ್ಸ್ ನೀಡಿದ್ದಾರೆ. ಕರ್ನಾಟಕ ತಂಡದ ಪರ ಪ್ರದರ್ಶನ ನೀಡ್ತಿರೋ ಕರುಣ್ 2025-26ರ ಟೂರ್ನಿಯಲ್ಲಿ ಕಳೆದ ಐದು ಇನ್ನಿಂಗ್ಸ್​ಗಳ ಸ್ಕೋರ್ ನೋಡ್ತಾ ಹೋಗೋಣ. ಕೇರಳ ವಿರುದ್ಧ 233 ರನ್ಸ್, ಗೋವಾ ವಿರುದ್ಧ 174 ರನ್ಸ್.. ಹಾಗೇ ವಿದರ್ಭ ವಿರುದ್ಧ 112, 86 ಹಾಗೇ 135 ರನ್ಸ್.. ಸೋ ಲಾಸ್ಟ್ ಫೈವ್ ಇನ್ನಿಂಗ್ಸ್​ಗಳಲ್ಲಿ ಕಲೆ ಹಾಕಿರೋದು ಬರೋಬ್ಬರಿ 740 ರನ್ಸ್. ಕರುಣ್ ನಾಯರ್ ಎಂಥಾ ಕ್ವಾಲಿಟಿ ಪ್ಲೇಯರ್ ಅನ್ನೋದಕ್ಕೆ ಬಹುಶಃ ಇದಕ್ಕಿಂತ ಬೆಸ್ಟ್ ನಂಬರ್ ಬೇಕಿಲ್ಲ ಅನ್ಸುತ್ತೆ. ಇನ್ನು ಸಾಯಿ ಸುದರ್ಶನ್ 2024-25ರ ಟೂರ್ನಿಯಲ್ಲಿ ತಮಿಳುನಾಡು ಪರ ರಣಜಿ ಆಡಿದ್ದು ಅದಾದ್ಮೇಲೆ ಭಾರತ ತಂಡಕ್ಕೆ ಸೆಲೆಕ್ಟ್ ಆದ್ಮೇಲೆ ರಣಜಿ ಆಡಿಲ್ಲ. ಪ್ರಸ್ತುತ ಭಾರತದ ಪರ ಇಂಟರ್​ನ್ಯಾಷನಲ್​ ಮ್ಯಾಚಸ್ ಆಡ್ತಿದ್ದಾರೆ. ಸೋ ಸಾಯಿ ಸುದರ್ಶನ್ ಕಳೆದ 5 ಇನ್ನಿಂಗ್ಸ್​ಗಳಲ್ಲಿ ಹೇಗೆ ಪರ್ಫಾಮ್ ಮಾಡಿದ್ದಾರೆ ಅವ್ರ ಸ್ಕೋರ್ ಹೇಗಿದೆ ಅನ್ನೋದನ್ನ ನೋಡೋಣ. ಇಂಗ್ಲೆಂಡ್ ವಿರುದ್ಧದ ಐದನೇ ಮ್ಯಾಚಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 38 ರನ್ ಗಳಿಸಿದ್ದ ಸಾಯಿ ಸುದರ್ಶನ್ ಎರಡನೇ ಇನ್ನಿಂಗ್ಸ್​ನಲ್ಲಿ 11 ರನ್​ಗಳಿಗೆ ಔಟ್ ಆಗಿದ್ರು. ಆ ಬಳಿಕ ಕಳೆದ ಅಕ್ಟೋಬರ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸೆಲೆಕ್ಟ್ ಆಗಿದ್ದ ಸಾಯಿ ಸುದರ್ಶನ್ ಮೊದಲ ಮ್ಯಾಚ್​ನ ಮೊದಲ ಇನ್ನಿಂಗ್ಸ್​ನಲ್ಲಿ 7 ರನ್ ಗಳಿಸಿ ಔಟ್ ಆಗಿದ್ರು. ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 87 ರನ್ಸ್ ಕಲೆ ಹಾಕಿದ್ರು. ಆ ನಂತ್ರ ಎರಡನೇ ಇನ್ನಿಂಗ್ಸ್​ನಲ್ಲಿ 37 ರನ್ಸ್​ಗೆ ವಿಕೆಟ್ ಒಪ್ಪಿಸಿದ್ರು. ಈಗ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಮ್ಯಾಚಲ್ಲಿ ಅವ್ರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಎರಡನೇ ಪಂದ್ಯದಲ್ಲಿ ನಂಬರ್ 3 ಸ್ಲಾಟ್​ನಲ್ಲಿ ಬ್ಯಾಟಿಂಗ್ ಮಾಡೋಕೆ ಅವಕಾಶ ಸಿಕ್ಕಿದೆ. ಮೊದಲ ಇನ್ನಿಂಗ್ಸ್​ನಲ್ಲಿ 15 ರನ್ಸ್ ಕಲೆಹಾಕಿದ್ದ ಸಾಯಿ ಎರಡನೇ ಇನ್ನಿಂಗ್ಸ್​ನಲ್ಲಿ 14 ರನ್​​ಗಳಿಗೆ ವಿಕೆಟ್ ಒಪ್ಪಿಸಿದ್ರು. ಹೀಗೆ ಭಾರತದ ಪರ ಕಳೆದ ಐದು ಇನ್ನಿಂಗ್ಸ್​ಗಳಲ್ಲಿ 134 ರನ್​ಗಳನ್ನ ಕಲೆ ಹಾಕಿದ್ದಾರೆ. ಸೋ ಈ ನಂಬರ್​ಗಳನ್ನ ನೋಡಿದ್ರೇನೇ ಗೊತ್ತಾಗುತ್ತೆ ಸಾಯಿ ಸುದರ್ಶನ್​ಗಿಂತ ಕರುಣ್ ನಾಯರ್ ಯಾಕೆ ಬೆಸ್ಟ್ ಅನ್ನೋದು. ಆದ್ರೆ ಈ ಯಾವ ನಂಬರ್ ಕೂಡ ಹೆಡ್ ಕೋಚ್ ಗೌತಮ್ ಗಂಭೀರ್​ಗೆ ಕಾಣಲ್ಲ.

ಕರುಣ್ ನಾಯರ್ ಬಗ್ಗೆ ಇಲ್ಲಿ ಇನ್ನೊಂದು ವಾದ ಇದೆ. ಅದೇನಂದ್ರೆ ಕರುಣ್ ರನ್ಸ್ ಜಾಸ್ತಿ ಹೊಡ್ಯೋದು ರಣಜಿಯಲ್ಲಿ ಇಂಟರ್​ನ್ಯಾಷನಲ್ಸ್ ಅಂತಾ ಬಂದಾಗ ಅವ್ರೂ ಕೂಡ ಫೇಲ್ಯೂರ್ ಆಗಿದ್ದಾರೆ. ಕಳೆದ ಇಂಗ್ಲೆಂಡ್ ಸಿರೀಸ್​ನಲ್ಲಿ ಚಾನ್ಸ್ ಕೊಟ್ಟಾಗ ಕ್ಲಿಕ್ ಆಗಿಲ್ಲ. ಅದಕ್ಕೆ ಕೈಬಿಟ್ಟಿರೋದು ಅಂತಾ. ಯೆಸ್ ಅವ್ರ ವಾದ ಕರೆಕ್ಟೇ. ಆದ್ರೆ ಇಂಡಿಯನ್ ಸಾಯಿಲ್ ಅಂತಾ ಬಂದಾಗ ರಣಜಿ ಹೀರೋಗಳೇ ಬಿಗ್ ಸ್ಕೋರ್ ಬಾರಿಸೋದು. ಆಲ್ರೆಡಿ ಸೌತ್ ಆಫ್ರಿಕಾ ವಿರುದ್ಧ ಫಸ್ಟ್ ಮ್ಯಾಚ್ ಸೋತು ಎರಡನೇ ಪಂದ್ಯಕ್ಕೆ ಶುಭ್​ಮನ್ ಗಿಲ್ ರೂಲ್ಡ್ ಔಟ್ ಆದಾಗ ಮಸ್ಟ್ ವಿನ್ ಮ್ಯಾಚ್ ಗಾಗಿ ಕರುಣ್​ಗೆ ಅವಕಾಶ ಕೊಡ್ಬೋದಿತ್ತು. ಬಟ್ ಅದನ್ನ ಮಾಡದೇ ಇರೋದೇ ಇಲ್ಲಿರೋ ಪ್ರಶ್ನೆ. ಇನ್ನು ಗುವಾಹಟಿ ಟೆಸ್ಟ್ ಮ್ಯಾಚ್ ಟೈಮಲ್ಲೇ ಕರುಣ್ ನಾಯರ್ ಮಾರ್ಮಿಕವಾಗಿ ಪೊಸ್ಟ್​ವೊಂದನ್ನ ಬರೆದುಕೊಂಡಿದ್ರು. ಕೆಲ ಪರಿಸ್ಥಿತಿಗಳು ನಿಮಗೆ ಹೃದಯದಿಂದ ತಿಳಿದಿರುವ ಭಾವನೆಯನ್ನು ಹೊಂದಿರುತ್ತವೆ – ಮತ್ತು ಹೊರಗೆ ಇಲ್ಲದಿರುವ ಮೌನವು ತನ್ನದೇ ಆದ ನೋವನ್ನು ಸೇರಿಸುತ್ತದೆ ಅಂತಾ. ಇದಕ್ಕೆ ಆರ್ ಅಶ್ವಿನ್ ಕೂಡ ರಿಯಾಕ್ಟ್ ಮಾಡಿದ್ರು. 2016 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ತ್ರಿಶತಕ ಬಾರಿಸಿ ಮಿಂಚಿದ್ದರು. ಆದರೆ ಮುಂದಿನ ಪಂದ್ಯದಲ್ಲೇ ಅವರನ್ನು ಬೆಂಚು ಕಾಯಿಸಲಾಗಿತ್ತು. ಇಂಗ್ಲೆಂಡ್ ಸಿರೀಸ್​ನಲ್ಲೂ ಹಾಗೇ ಮಾಡಿದ್ರು. ಒಟ್ನಲ್ಲಿ ಬಿಸಿಸಿಐ ಪರಿಸ್ಥಿತಿ ಈಗ ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.

Shantha Kumari