ಕ್ರಿಕೆಟ್ ಸಾಮ್ರಾಜ್ಯದ KING ವೈಭವ್! – ಕೊಹ್ಲಿ ಸ್ಲಾಟ್‌ಗೆ ತಿಲಕ್ ವರ್ಮಾ?

ಕ್ರಿಕೆಟ್ ಸಾಮ್ರಾಜ್ಯದ KING ವೈಭವ್! – ಕೊಹ್ಲಿ ಸ್ಲಾಟ್‌ಗೆ  ತಿಲಕ್ ವರ್ಮಾ?

 ವೆಸ್ಟ್ ಇಂಡೀಸ್ ವಿರುದ್ಧದ 3ನೇ ODIಯಲ್ಲಿ ಕೆ.ಎಲ್. ರಾಹುಲ್ ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 87 ಎಸೆತಗಳಲ್ಲಿ ಅಜೇಯ 129 ರನ್ ಗಳಿಸಿದ ರಾಹುಲ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಭಾರತದ 15ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆದ್ದ ಬಳಿಕ ನಾಯಕ ಶುಭ್ಮನ್ ಗಿಲ್, 2027ರ ವಿಶ್ವಕಪ್‌ಗೆ ಮುನ್ನ ಪ್ರಯೋಗ ಮಾಡಲು ಹೆಚ್ಚಿನ ಸಮಯವಿಲ್ಲ ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ಸರಣಿಗೆ ಪ್ರಮುಖ ಆಟಗಾರರನ್ನು ಮರಳಿ ಪಡೆಯುವುದು ತಂಡದ ಪ್ರಮುಖ ಗುರಿಯಾಗಿದೆ. ಅಂಶುಲ್ ಕಾಂಬೋಜ್ ಮತ್ತು ಔಕಿಬ್ ನಬಿ ಮುಂದಿನ ದಿನಗಳಲ್ಲಿ ODI ತಂಡದಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದೂ ಗಿಲ್ ಹೇಳಿದ್ದಾರೆ.

ಇದನ್ನೂ ಓದಿ: SRHಗೆ ಅಭಿಷೇಕ್ ಗುಡ್ ಬೈ? – IPL ಕ್ಯಾಪ್ಟನ್ಸಿ ಆಫರ್ ಸಿಕ್ಕಿತಾ?

ನಾಳೆಯಿಂದ ವೆಸ್ಟ್ ಇಂಡೀಸ್ ನಡುವೆ 5 ಪಂದ್ಯಗಳ T20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ  ನಾಳೆ ಲಖನೌನಲ್ಲಿ ನಡೆಯಲಿದೆ. ಬಳಿಕ ರಾಂಚಿ, ಇಂದೋರ್, ಅಹಮದಾಬಾದ್ ಮತ್ತು ಕೊನೆಯ ಪಂದ್ಯ  ಬೆಂಗಳೂರಿನಲ್ಲಿ ನಡೆಯಲಿದೆ. T20 ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದಾರೆ.

ಮೈದಾನದ ಹೊರಗೆ ವೈಭವ್ ತುಂಬಾ ಶಾಂತ ಮತ್ತು ನಾಚಿಕೆ ಸ್ವಭಾವದವರಾಗಿದ್ದರೂ, ಕ್ರೀಸ್‌ಗೆ ಕಾಲಿಟ್ಟ ತಕ್ಷಣವೇ ಅವರು ಎದುರಾಳಿ ಬೌಲರ್‌ಗಳ ಮೇಲೆ ಅಬ್ಬರಿಸುವ ಬಿರುಗಾಳಿಯಂತೆ ಬದಲಾಗುತ್ತಾರೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ಸೂಕ್ತ ಸಮಯ ಬಂದಾಗ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸುತ್ತಾರೆ ಮತ್ತು ದೀರ್ಘಕಾಲದವರೆಗೆ ಆ ಪ್ರಾಬಲ್ಯವನ್ನು ಕಾಯ್ದುಕೊಳ್ಳುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

2027ರ ಏಕದಿನ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿಯಾದರೆ, ಅವರ 3ನೇ ಕ್ರಮಾಂಕಕ್ಕೆ ತಿಲಕ್ ವರ್ಮಾ ಸೂಕ್ತ ಆಯ್ಕೆ ಎಂದು ವಾಸಿಂ ಜಾಫರ್ ಹೇಳಿದ್ದಾರೆ. ತಿಲಕ್ ಅವರ ವೈವಿಧ್ಯಮಯ ಬ್ಯಾಟಿಂಗ್ ಸಾಮರ್ಥ್ಯವನ್ನು ಕೊಂಡಾಡಿರುವ ಅವರು, ಕೊಹ್ಲಿ ಉತ್ತರಾಧಿಕಾರಿಯಾಗುವ ಎಲ್ಲಾ ಲಕ್ಷಣಗಳು ಇವರಲ್ಲಿವೆ ಎಂದಿದ್ದಾರೆ. ಜೊತೆಗೆ ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಪ್ರಬುದ್ಧ ಆಟವನ್ನೂ ಜಾಫರ್ ಮೆಚ್ಚಿದ್ದಾರೆ.

2026-27ರ ಇರಾನಿ ಕಪ್‌ನಲ್ಲಿ Rest of India ತಂಡ ಜಮ್ಮು-ಕಾಶ್ಮೀರವನ್ನು 167 ರನ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿದೆ. ಮುಕೇಶ್ ಕುಮಾರ್ ಮತ್ತು ಆಕಾಶ್ ದೀಪ್ ಸೇರಿ 9 ವಿಕೆಟ್ ಪಡೆದು ಜಮ್ಮು-ಕಾಶ್ಮೀರದ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು. ಗೆಲ್ಲಲು 279 ರನ್ ಗುರಿ ಬೆನ್ನಟ್ಟಿದ ಜಮ್ಮು-ಕಾಶ್ಮೀರ ತಂಡವು ಕೇವಲ 111ರನ್‌ಗೆ  ಆಲ್‌ಔಟ್ ಆಯ್ತು.

ಮುಂಬೈನ ಯುವ ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಗೆ ಭಾರತ ‘ಎ’ ತಂಡದಲ್ಲಿ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬದಲಿಗೆ ಆಡಲಿದ್ದಾರೆ. ಭಾರತ ‘ಎ’ ತಂಡವು ಪುದುಚೇರಿಯಲ್ಲಿ ಆಸ್ಟ್ರೇಲಿಯ A ತಂಡದ ವಿರುದ್ಧ 3 ಏಕದಿನ ಪಂದ್ಯ ಆಡಲಿದೆ. ಫಿಟ್ನೆಸ್ ಪರಿಶೀಲನೆಗಾಗಿ ಸೂರ್ಯಾಂಶ್ ಬೆಂಗಳೂರಿನಲ್ಲಿರುವ ಬಿಸಿಸಿಐನ ಎಕ್ಸಲೆನ್ಸ್ ಸೆಂಟರ್‌ಗೆ ತೆರಳಿದ್ದು, ಸಿಒಇನ ವೈದ್ಯಕೀಯ ತಂಡವು ಸೂರ್ಯಾಂಶ್‌ಗೆ ಫಿಟ್ನೆಸ್ ಪ್ರಮಾಣಪತ್ರ ನೀಡಿದೆ.

ಮೊಹಮ್ಮದ್ ಶಮಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಬಿಗ್ ಸ್ಟೇಟ್‌ಮೆಂಟ್ ನೀಡಿದ್ದಾರೆ. ಭಾರತ ತಂಡದಲ್ಲಿ ಸದ್ಯ ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಅತ್ಯುತ್ತಮ ಯುವ ವೇಗಿಗಳಿದ್ದಾರೆ. ಹೀಗಾಗಿ ಮೊಹಮ್ಮದ್ ಶಮಿ ಅವರನ್ನು ಭಾರತ ತಂಡಕ್ಕೆ ಮತ್ತೆ ಆಯ್ಕೆ ಮಾಡುವುದರಲ್ಲಿ ಅರ್ಥವಿಲ್ಲ. ಭಾರತೀಯ ಕ್ರಿಕೆಟ್ ಈಗಾಗಲೇ ಅವರಿಗಿಂತ ಮುಂದೆ ಸಾಗಿದೆ ಎಂದು ದಿನೇಶ್ ಕಾರ್ತಿಕ್ ನೇರವಾಗಿ ಹೇಳಿದ್ದಾರೆ.

ನ್ಯೂಜಿಲೆಂಡ್ ಪ್ರವಾಸಕ್ಕೆ ವೇಗಿ ಪ್ರಸಿದ್ಧ್ ಕೃಷ್ಣರನ್ನ ಆಯ್ಕೆ ಮಾಡೋ ಸಾಧ್ಯತೆ ಇದೆ. ಗಾಯದ ಸಮಸ್ಯೆಯಿಂದ ಪ್ರಸಿದ್ಧ್ ಅವರು ಸದ್ಯಕ್ಕೆ ಆಟದಿಂದ ದೂರ ಉಳಿಯುವ ಸಾಧ್ಯತೆಯಿದ್ದರೂ, ಭಾರತದ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 22 ರಿಂದ ಡಿಸೆಂಬರ್ 1 ರವರೆಗೆ ಐದು ಟಿ20ಐ,  ಐದು ODI  ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಪ್ರಸಿದ್ಧ್‌  ಹ್ಯಾಮ್‌ಸ್ಟ್ರಿಂಗ್ ಗಾಯವು ಅವರನ್ನು ಪ್ರವಾಸದಿಂದ ಹೊರಗಿಡುವಷ್ಟು ಗಂಭೀರವಾದುದಲ್ಲ ಎಂದು ಪರಿಗಣಿಸಲಾಗಿದ್ದು, ಈ ಪ್ರವಾಸಕ್ಕೆ ಆಯ್ಕೆ ಆಗೋ ಸಾಧ್ಯತೆಯಿದೆ.

ರಣಜಿ ಟ್ರೋಫಿಯ ಆರಂಭಿಕ ಪಂದ್ಯಗಳಿಗೆ ಮಹಾರಾಷ್ಟ್ರ ತಂಡದ ನಾಯಕತ್ವವನ್ನು ಸ್ಟಾರ್ ಬ್ಯಾಟರ್ ಪೃಥ್ವಿ ಶಾ ಅವರಿಗೆ ವಹಿಸಲಾಗಿದೆ. ಈ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ಶಾ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲಿರುವ ಶಾ, ಬ್ಯಾಟಿಂಗ್ ಜೊತೆಗೆ ನಾಯಕನಾಗಿ ಮಹಾರಾಷ್ಟ್ರಕ್ಕೆ ಉತ್ತಮ ಆರಂಭ ನೀಡುವ ನಿರೀಕ್ಷೆಯಿದೆ. ಅವರ ಅನುಭವ ಮತ್ತು ಆಕ್ರಮಣಕಾರಿ ಆಟ ತಂಡಕ್ಕೆ ದೊಡ್ಡ ಬಲವಾಗುವ ಸಾಧ್ಯತೆಯಿದೆ.

Kishor KV

Leave a Reply

Your email address will not be published. Required fields are marked *