ಕಾರ್ತಿಕ್ ಮತ್ತು ನಮ್ರತಾ ಅತಿ ಆಪ್ತತೆಗೆ ಸಿಕ್ತು ಜೋಕರ್ ಪಟ್ಟ – ಹೌದು.. ನಾನು ಫ್ಲರ್ಟ್ ಮಾಡೋದು ಎಂದು ಸತ್ಯ ಒಪ್ಪಿಕೊಂಡ ಕಾರ್ತಿಕ್

ಕಾರ್ತಿಕ್ ಮತ್ತು ನಮ್ರತಾ ಅತಿ ಆಪ್ತತೆಗೆ ಸಿಕ್ತು ಜೋಕರ್ ಪಟ್ಟ – ಹೌದು.. ನಾನು ಫ್ಲರ್ಟ್ ಮಾಡೋದು ಎಂದು ಸತ್ಯ ಒಪ್ಪಿಕೊಂಡ ಕಾರ್ತಿಕ್

ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಈಗ ಜೋಕರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಮೊದಲು ಸಂಗೀತಾ ಜೊತೆ ಸಂಗೀ ಸಂಗೀ ಅಂತಾ ಸುತ್ತಾಡುತ್ತಿದ್ದ ಕಾರ್ತಿಕ್, ನಂತರ ತನಿ ತನಿ ಅಂತಾ ತನಿಶಾ ಜೊತೆ ಕ್ಲೋಸ್ ಆಗಿದ್ದರು. ನಂತರ ಕಾರ್ತಿಕ್ ಕಣ್ಣು ನಮ್ರತಾ ಮೇಲೆ ಬಿದ್ದಿದೆ. ಈಗ ನಮ್ರತಾ ಜೊತೆ ಜಾಸ್ತಿಯಾಗಿಯೇ ಆಪ್ತತೆ ಬೆಳೆಸಿಕೊಂಡಿರುವ ಕಾರ್ತಿಕ್‌ಗೆ ಜೋಕರ್ ಪಟ್ಟ ಸಿಕ್ಕಿದೆ.

ಇದನ್ನೂ ಓದಿ: ಫಿನಾಲೆ ಟಿಕೆಟ್ ವರ್ತೂರು ಸಂತೋಷ್ ಪಡೆಯುವುದು ಗ್ಯಾರಂಟಿ – ಬಿಗ್‌ಬಾಸ್ ಮನೆಯಲ್ಲಿ ಹಳ್ಳಿಕಾರ್ ಹವಾ

ಕಾರ್ತಿಕ್ ಮಹೇಶ್ ಹಾಗೂ ನಮ್ರತಾ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಇಬ್ಬರ ಮಧ್ಯೆ ಆಪ್ತತೆ ಹೆಚ್ಚಿದೆ. ನನಗೆ ಕಾರ್ತಿಕ್ ಅವರು ಕಂಫರ್ಟ್ ಜೋನ್ ನೀಡಿದ್ದಾರೆ ಎಂದು ನಮ್ರತಾ ಹೇಳಿಕೊಂಡಿದ್ದಾರೆ. ಇದಾದ ಕೆಲ ಹೊತ್ತಲ್ಲೇ ಕಾರ್ತಿಕ್ ಅವರನ್ನು ಜೋಕರ್ ಎಂದು ನಮ್ರತಾ ಕರೆದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಅವರ ವರ್ಚಸ್ಸು ಮೊದಲಿದ್ದ ರೀತಿ ಇಲ್ಲ. ಅಲ್ಲಿ, ಇಲ್ಲಿ ಫ್ಲರ್ಟ್ ಮಾಡಿಕೊಂಡು ತಮ್ಮ ನಿಜವಾದ ಆಟವನ್ನು ಅವರು ತೋರಿಸುತ್ತಿಲ್ಲ. ಈಗ ಅವರಿಗೆ ಜೋಕರ್ ಪಟ್ಟವೂ ಸಿಕ್ಕಿದೆ. ಕಾರ್ತಿಕ್ ಅವರು ಆರಂಭದಲ್ಲಿ ಸಂಗೀತಾ ಜೊತೆ ಕ್ಲೋಸ್ ಆಗಿದ್ದರು. ಆದರೆ ಇಬ್ಬರ ಮಧ್ಯೆ ಹೊಂದಾಣಿಕೆ ಬರಲಿಲ್ಲ. ಆ ಬಳಿಕ ಅವರಿಗೆ ಸಿಕ್ಕಿದ್ದು ನಮ್ರತಾ ಗೌಡ. ನಮ್ರತಾ ಜೊತೆ ಕ್ಲೋಸ್ ಆಗೋಕೆ ಅವರು ಪ್ರಯತ್ನಿಸಿದ್ದಾರೆ. ಕಾರ್ತಿಕ್ ಅವರು ನಡೆದುಕೊಳ್ಳುತ್ತಿರುವ ಬಗ್ಗೆ ವಿನಯ್ ಬಳಿ ನಮ್ರತಾ ಮಾತನಾಡಿದ್ದಾರೆ. ‘ಕಳೆದ ಒಂದು ವಾರದಿಂದ ಅಷ್ಟು ಸ್ವೀಟ್ ಆಗಿ ಏಕೆ ಮಾತನಾಡುತ್ತಿದ್ದೀರಿ ಎಂದು ಕಾರ್ತಿಕ್ ಬಳಿ ಕೇಳಿದೆ. ಅವರು ನಿನ್ನ ಜೊತೆ ಸಮಯ ಕಳೆಯೋಕೆ ನನಗೆ ಖುಷಿ ಇದೆ ಎಂದು ಹೇಳಿದರು’ ಎಂದು ವಿವರಿಸಿದ್ದಾರೆ ನಮ್ರತಾ. ನಂತರ ಕಾರ್ತಿಕ್ ನಡೆಯನ್ನು ನೋಡಿ ಜೋಕರ್ ಎಂದು ಕರೆದಿದ್ದಾರೆ. ‘ಅವನು ಬರೀ ದೇಹ ಬೆಳೆಸಿಕೊಂಡು, ಹೂಸು ಬಿಟ್ಕೊಂಡು ಓಡಾಡ್ತಾ ಇರ್ತಾನೆ’ ಎಂದು ಇದೇ ವೇಳೆ ವಿನಯ್ ಹೇಳಿದರು. ಆಗ ನಮ್ರತಾ ಅವರು ‘ಜೋಕರ್ ಅವನು’ ಎಂದಿದ್ದಾರೆ.

ಇನ್ನು ಬಿಗ್ ಬಾಸ್ ಕನ್ನಡ 10′ ಮನೆಯಲ್ಲಿ ಕಾರ್ತಿಕ್ ಅವರು ಒಂದು ಶಾಕಿಂಗ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ನಮ್ರತಾ ಮಾತ್ರ ಇಷ್ಟುದಿನ ಕಾರ್ತಿಕ್ ಅವರು ಫ್ಲರ್ಟ್ ಮಾಡ್ತಾರೆ ಅಂತ ಹೇಳುತ್ತ ಬಂದಿದ್ದರು. ಈಗ ಕಾರ್ತಿಕ್ ಅವರು ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ ಮುಂದೆ ಸತ್ಯವೊಂದನ್ನು ರಿವೀಲ್ ಮಾಡಿದ್ದಾರೆ. ಕಿಚನ್ ಏರಿಯಾದಲ್ಲಿ ತನಿಷಾ, ಪ್ರತಾಪ್ ಜೊತೆ ಮಾತಾಡುವಾಗ ಕಾರ್ತಿಕ್ ಅವರು “ನಾನು ಫ್ಲರ್ಟ್ ಮಾಡೋದು ಸತ್ಯ” ಎಂದು ಹೇಳಿದ್ದಾರೆ.

Sulekha