293 ರನ್ಗೆ ಪಡಿಕ್ಕಲ್ ಪಡೆ ಆಲೌಟ್ – ಫೈನಲ್ ಗೆಲ್ಲೋ ಕರ್ನಾಟಕದ ಕನಸು ಭಗ್ನ

ರಣಜಿ ಟ್ರೋಫಿ 2026ರ ಫೈನಲ್ ಗೆಲ್ಲೋ ಕರ್ನಾಟಕದ ಕನಸು ಭಗ್ನವಾಗಿದೆ. ಇನ್ನೂ ಜಮ್ಮು ಕಾಶ್ಮೀರ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಕಲೆಹಾಕಿದ ಹಿನ್ನೆಲೆ, ಕರ್ನಾಟಕದ ತಂಡ ಈ ಸ್ಕೋರ್ ಕಲೆ ಹಾಕೋಕೆ ಒದ್ದಾಡಿತು. ಜಮ್ಮು ಮೊದಲ ಇನ್ನಿಂಗ್ಸ್ನಲ್ಲಿ 584 ರನ್ಗಳಿಸಿತ್ತು. ಈ ರನ್ ಬೆನ್ನಟ್ಟಿದ ಕರ್ನಾಟಕ 293 ರನ್ಗೆ ಅಲೌಟ್ ಆಗಿದೆ.
ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಕಳಪೆ ಪ್ರದರ್ಶನ ತೋರಿಸಿತು. ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್ ಪೆವಿಲಿಯನ್ ಪರೇಡ್ ನಡೆಸಿದ್ರು. ಏಕಾಂಗಿ ಹೋರಾಟ ನಡೆಸಿದ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ತಂಡಕ್ಕೆ ಆಸರೆಯಾದ್ರೂ ಕೂಡ ಪ್ರಯೋಜನವಾಗಿಲ್ಲ.. ಮಯಾಂಕ್ ಅಗರ್ವಾಲ್ 266 ಬಾಲ್ ಎದುರಿಸಿ 160 ರನ್ಗಳಿಸಿದ್ರು. ನಂತ್ರ ಯಾರೂ ಕೂಡ ಕರ್ನಾಟಕದ ಪರ ಆಡಿಲ್ಲ.. ಹೀಗಾಗಿ ಕರ್ನಾಟಕ 293 ರನ್ಗೆ ಆಲೌಟ್ ಆಯ್ತು.
ಇದನ್ನೂ ಓದಿ: ಇತ್ತ ಪಂದ್ಯ ಗೆದ್ದ ಸಂಭ್ರಮ ಅತ್ತ ತಂದೆಯ ಸಾವಿನ ಶೋಕ – ರಿಂಕು ಸಿಂಗ್ ತಂದೆ ವಿಧಿವಶ
ಇವತ್ತು ಮತ್ತು ನಾಳೆ ಎರಡೇ ದಿನ ಪಂದ್ಯ ಇರೋದ್ರಿಂದ ಈ ಪಂದ್ಯ ಡ್ರಾ ಆಗಲಿದೆ. ಸೆಕೆಂಡ್ ಇನ್ನಿಂಗ್ಸ್ ಕಂಪ್ಲೀಟ್ ಆಗಲ್ಲ.. ಹೀಗಾಗಿ ಪೈನಲ್ ಡ್ರಾ ಆಗೋದ್ರಿಂದ ಮೊದಲ ಇನ್ನಿಂಗ್ಸ್ ನಲ್ಲಿ ಯಾರು ಮುನ್ನಡೆ ಕಾಯ್ದುಕೊಂಡಿರುತ್ತಾರೋ ಆ ತಂಡವನ್ನು ವಿನ್ನರ್ ಎಂದು ಘೋಷಿಸಲಾಗುತ್ತೆ. ಮೊದಲ ಇನ್ನಿಂಗ್ಸ್ನಲ್ಲಿ ಜಮ್ಮು ಕಾಶ್ಮೀರ 584 ರನ್ಗಳಿಸಿದ್ರೆ, ಕರ್ನಾಟಕ 293ರನ್ಗೆ ಆಲ್ಟ್ ಆಗಿದೆ. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚು ರನ್ಗಳಿಸಿರೋ ಜಮ್ಮು ಕಾಶ್ಮೀರವನ್ನೇ ರಣಜಿ ವಿನ್ನರ್ ಎಂದು ಘೋಷಿಸಲಾಗುತ್ತೆ.

ನೋಡಿರಿ

