2024ರಲ್ಲಿ ಜೈಲಿಗೆ ಹೋದ VIPಗಳು ಯಾರು ಗೊತ್ತಾ? – D ಬಾಸ್‌, ಪ್ರಜ್ವಲ್‌ಗೆ ಪರಪ್ಪನ ಅಗ್ರಹಾರ ‘ದರ್ಶನ’

2024ರಲ್ಲಿ ಜೈಲಿಗೆ ಹೋದ VIPಗಳು ಯಾರು ಗೊತ್ತಾ? – D ಬಾಸ್‌, ಪ್ರಜ್ವಲ್‌ಗೆ ಪರಪ್ಪನ ಅಗ್ರಹಾರ ‘ದರ್ಶನ’

2024.. ಈ ವರ್ಷ ಒಂದಷ್ಟು ಜನಕ್ಕೆ ಒಳ್ಳೆಯದಾದ್ರೆ, ಸಾಕಷ್ಟು ಜನಕ್ಕೆ ಕಷ್ಟದ ವರ್ಷ.. ಯಾರು ಊಹಿಸದಂತಹ ಘಟನೆಗಳು ಈ ವರ್ಷವೇ ಹೆಚ್ಚು ನಡೆದಿದೆ. ಅದ್ರಲ್ಲೂ ಕರ್ನಾಟಕದ ವಿಐಪಿಗಳಿಗೆ ಸಮಸ್ಯೆ ಕೊಟ್ಟವರ್ಷ. ಸ್ಟಾರ್ ನಟರು, ರಾಜಕಾರಣಿಗಳು ಜೈಲಿಗೆ ಹೋಗುವಂತೆ ಮಾಡಿದ ವರ್ಷ.. ಹಾಗಿದ್ರೆ 2024ರಲ್ಲಿ ಕರ್ನಾಟಕದ ಯಾವೆಲ್ಲಾ ವಿಐಪಿಗಳು ಜೈಲಿಗೆ ಹೋಗಿದ್ದಾರೆ? ಯಾರೆಲ್ಲಾ ಮೇಲೆ ಅಪವಾದ ಬಂದಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಒಬ್ಬರಿಗೆ ಆಟ ಅರ್ಥ ಆಗಿಲ್ಲ.. ಮತ್ತೊಬ್ಬರಿಗೆ ಬಿಗ್‌ ಬಾಸ್‌ ಮೇಲೆ ರೆಸ್ಪೆಕ್ಟ್​ ಇಲ್ಲ! – ತ್ರಿಮೋಕ್ಷಿಗೆ ಕಿಚ್ಚನ ಕ್ಲಾಸ್?‌

ಕನ್ನಡದ ಸ್ಟಾರ್ ನಟನಿಗೆ, ರಾಜ್ಯದ ರಾಜಕಾರಣಿಗಳಿಗೆ 2024 ಸಾಕಷ್ಟು ತೊಂದ್ರೆ ಕೊಟ್ಟ ವರ್ಷ..2024ರಲ್ಲಿ  ಪ್ರಭಾವಿ ರಾಜಕಾರಣಿಗಳು, ಸ್ಟಾರ್ ನಟ ದರ್ಶನ್‌ ಸೇರಿ ಹಲವು ಗಣ್ಯರಿಗೆ ಜೈಲಿನ ದರ್ಶನವಾಗಿದೆ. ಹಾಗಿದ್ರೆ 2024 ರಲ್ಲಿ ಯಾರೆಲ್ಲಾ ಜೈಲಿಗೆ ಹೋಗಿದ್ದಾರೆ? ಯಾರೆಲ್ಲಾ ಇನ್ನೂ ಜೈಲಿನಲ್ಲೇ ಇದ್ದಾರೆ? ಯಾವ ಕೇಸ್‌ನಲ್ಲಿ ಜೈಲಿ ಹೋಗಿದ್ದಾರೆ ಅನ್ನೋ ವಿವರ ಇಲ್ಲಿದೆ.

ಜೈಲಿನಲ್ಲೇ ಲಾಕ್‌ ಆದ ಪೆನ್‌ಡ್ರೈವ್ ಪ್ರಜ್ವಲ್ ರೇವಣ್ಣ  

ಪ್ರಜ್ವಲ್ ರೇವಣ್ಣ.. ಹಾಸನದ ಹಾಲಿ ಸಂಸದ.. ಇವರ ಪುರಾಣವನ್ನ, ಲೀಲೆಯನ್ನ ಕೇವಲ ಕರ್ನಾಟಕದವರು ಮಾತ್ರ ಅಲ್ಲ, ಇಡೀ ಜಗತ್ತೇ ನೋಡಿತ್ತು.. 2024 ರ ಲೋಕಸಭಾ ಚುನಾವಣೆಗೆ ಅಭ್ಯರ್ಧಿಯಾಗಿ ಕಣಕ್ಕಿಳಿದ ಪ್ರಜ್ವಲ್‌ ರೇವಣ್ಣ ರಹಸ್ಯ ಲೀಲೆ ಮತದಾನದ ಹಿಂದಿನ ದಿನ ಹೊರ ಬಿದ್ದಿತ್ತು.. ಏಪ್ರೀಲ್26ಕ್ಕೆ ಹಾಸನದಲ್ಲಿ ಮತದಾನ ನಡೆದ್ರೆ, ಎರಡು ದಿನಗಳ ಹಿಂದೆ ಹಾಸನದ ಬೀದಿ ಬೀದಿಗಳಲ್ಲಿ ಪೆನ್‌ಡ್ರೈವ್ ಸಿಕ್ಕಿತ್ತು.. ಅದ್ರಲ್ಲಿ ಏನಿದೆ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿ, ಮಾಜಿ ಸಂಸದರ ಮಾನ ಬೀದಿ ಬೀದಿಗಳಲ್ಲಿ ಹರಾಜ್ ಆಗಿತ್ತು.. ಲೋಕಸಭೆ ಚುನಾವಣೆಯ ನಡುವೆ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲ್‌ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್‌ ಪ್ರಕರಣ ಸೌಂಡ್ ಮಾಡಿತ್ತು.. ಎಲೆಕ್ಷನ್ ದಿನ ರಾತ್ರಿ ಫಾರಿನ್‌ಗೆ ಎಸ್ಕೇಪ್ ಆದ ಪೆನ್‌ಡ್ರೈವ್ ಪ್ರಜ್ವಲ್ ಬಂದಿದ್ದು, ಒಂದು ತಿಂಗಳ ನಂತ್ರ. 2-3 ತಿಂಗಳು ಕನ್ನಡ ಮೀಡಿಯಾಗಳಿಗೆ ಪ್ರಜ್ವಲ್ ಒಳ್ಳೆಯ ಆಹಾರ ಆಗಿದ್ರು, ದಿನ ಬೆಳಗಾದ್ರೆ ಅವರ ಸುದ್ದಿ ಬಿಟ್ಟು ಬೇರೆ ಸುದ್ದಿಗಳೇ ಬರ್ತಿರಲಿಲ್ಲ.. ಇನ್ನೂ ಪೆನ್‌ಡ್ರೈವ್  ಪ್ರಜ್ವಲ್ ಫಾರಿನ್‌ಯಿಂದ ಬರ್ತಿದ್ದಂತೆ, ಎಸ್‌ಐಟಿ ಅಧಿಕಾರಿಗಳ ಏರ್‌ಪೋರ್ಟ್‌ನಲ್ಲೇ ಲಾಕ್ ಮಾಡಿ, ಒಂದಿಷ್ಟು ದಿನ ವಿಚಾರಣೆ ಮಾಡಿ  ಪರಪ್ಪನ ಅಗ್ರಹಾರಕ್ಕೆ  ಕಳುಹಿಸಿದ್ರು. ಅದೆಷ್ಟೋ ಹೆಣ್ಣುಗಳ ಜೀವನದಲ್ಲಿ ಆಟವಾಡಿ, ತಾನು ಮಾಡಿ ನೀಚ ಕೃತ್ಯವನ್ನ ವಿಡಿಯೋ ಮಾಡಿಕೊಟ್ಟುಕೊಂಡಿದ್ದ ಪ್ರಜ್ವಲ್ ರೇವಣ್ಣನ ಬಂಡವಾಳನನ್ನ ಅವರ ಕಾರ್‌ ಡ್ರೈವರ್ ಊರು ತುಂಬ ಹಂಚಿದ್ರು.. ನಂತ್ರ ಅದು ರಾಜಕೀಯ ತಿರುವು ಪಡೆದು, ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಸದ್ಯ ಇನ್ನೂ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದು, ಬೇಲ್‌ ಸಿಗದೆ ಪರದಾಡುತ್ತಿದ್ದಾನೆ.

ಮಗನ ಕಾಪಾಲು ಹೋಗಿ ರೇವಣ್ಣನಿಗೆ ಜೈಲು ವಾಸ

ಇದೇ ಪ್ರಜ್ವಲ್ ರೇವಣ್ಣನನ್ನ ಕಾಪಾಡಲು ಹೋದ ರೇವಣ್ಣ ಕೂಡ ಜೈಲಿಗೆ ಹೋಗಿ ಬಂದ್ರು. ಮೈಸೂರು ಜಿಲ್ಲೆಯ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಿಡ್ನಾಪ್‌ ಪ್ರಕರಣದ ದೂರಿನ ಆಧಾರದ ಮೇಲೆ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಹಾಸನದಲ್ಲಿ ಅಶ್ಲೀಲ ವಿಡಿಯೋ ಬಹಿರಂಗವಾದ ಬಳಿಕ ತಾಯಿ ನಾಪತ್ತೆಯಾಗಿದ್ದಾರೆ ಎಂದು 20 ವರ್ಷದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ದೂರಿನಲ್ಲಿ ಎರಡನೇ ಆರೋಪಿಯಾಗಿದ್ದ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿ ಸತೀಶ್ ಬಾಬು ಎನ್ನುವವರನ್ನು ಎಸ್‌ಐಟಿ ಮೊದಲೇ ಬಂಧಿಸಿತ್ತು. ಬಳಿಕ ಪ್ರಕರಣದ ಮೊದಲ ಆರೋಪಿಯಾದ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆ ನಡೆಸಿ ಎಸ್‌ಐಟಿ ನಂತ್ರ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿತ್ತು, ನಂತ್ರ ರೇವಣ್ಣ ಬೇಲ್ ಮೇಲೆ ಹೊರ ಬಂದ್ರು. ಇದೇ ವಿಚಾರವಾಗಿ ಭವಾನಿ ರೇವಣ್ಣ ಮೇಲೂ ಕೂಡ ಆರೋಪ ಬಂದಿತ್ತು..

ತಮ್ಮ, ಅಪ್ಪನ ಬಳಿಕ ಸೂರಜ್ ಜೈಲಿಗೆ ಎಂಟ್ರಿ

ಜೆಡಿಎಸ್‌ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ. ಈ ಮೂಲಕ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ತಂದೆ, ಮಕ್ಕಳು ಸೇರಿ ಮೂವರು ಜೈಲಿಗೆ ಸೇರಿದ್ರು. 27 ವರ್ಷದ ಸಂತ್ರಸ್ತನ ಮೇಲೆ ಲೈಂಗಿಕ ದೌಜನ್ಯ ಎಸಗಿರುವ ಪ್ರಕರಣದಲ್ಲಿ  ಹೊಳೆನರಸೀಪುರ ಪೊಲೀಸರು ಸೂರಜ್‌ ರೇವಣ್ಣನ  ಬಂಧಿಸಿದ್ರು.  ಒಂದಷ್ಟು ದಿನ ಶಿಕ್ಷ ಅನುಭವಿಸಿದ ಸೂರಜ್ ಬೇಲ್ ಮೂಲಕ ಹೊರ ಬಂದ್ರು.

ಸಿನಿಮೀಯಾ ಸ್ಟೈಲ್‌ನಲ್ಲಿ  D -ಬಾಸ್ ದರ್ಶನ್ ಅರೆಸ್ಟ್

ಇದು ಮಾತ್ರ ಯಾರು ಊಹಿಸದ ಘಟನೆಯಾಗಿತ್ತು. ಮರ್ಡರ್ ಕೇಸ್‌ನಲ್ಲಿ ದರ್ಶನ್ ಅವರನ್ನ ಪೊಲೀಸರು ಸಿನಿಮೀಯಾ ಸ್ಟೈಲ್‌ನಲ್ಲಿ ಅರೆಸ್ಟ್ ಮಾಡಿದ್ರು.. ಇದು ಅವರ ಅಭಿಮಾನಿಗಳಿಗೆ ಬರಸಿಡಿಲೇ ಬಡಿದಂತಾಗಿತ್ತು..  ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನಲ್ಲಿ ಮೈಸೂರಿನಲ್ಲಿ ಹೋಟೆಲ್‌ನಲ್ಲಿದ್ದ ದಾಸನನ್ನ ಪೊಲೀಸರು ಬಂದಿಸಿದ್ರು.  33 ವರ್ಷದ  ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ನಟಿ ಪವಿತ್ರಾಗೌಡಗೆ ಬ್ಯಾಡ್ ಮ್ಯಾಸೇಜ್  ಕಳುಹಿಸುತ್ತಿದ್ದರು ಎಂಬ ಕಾರಣಕ್ಕಾಗಿ ಮರ್ಡರ್ ನಡೆದಿತ್ತು. ರೇಣುಕಾಸ್ವಾಮಿಯನ್ನ ಜೂನ್‌.8 ರಂದು ನಗರಕ್ಕೆ ಕರೆತಂದು ಅಲ್ಲಿಂದ ಕಾಮಾಕ್ಷಿಪಾಳ್ಯದ ದರ್ಶನ್‌ ಆಪ್ತ ವಿನಯ್‌ ಎಂಬುವರ ಷೆಡ್‌ನಲ್ಲಿ ಕೂಡಿಹಾಕಿ, ರಾತ್ರಿ ಐದಾರು ಮಂದಿ ಸೇರಿ ಹಲ್ಲೆ ನಡೆಸಿದ್ದರು. ತಲೆ, ಕತ್ತು ಹಾಗೂ ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ರಾಡ್‌ನಿಂದ ಹಲ್ಲೆ ನಡೆಸಿರುವ ಕಾರಣಕ್ಕೆ ರೇಣುಕಾಸ್ವಾಮಿ ಮೃತಪಟ್ಟಿದ್ದ…ನಂತರ ಶವವನ್ನು ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಸುಮನಹಳ್ಳಿಯ ಮೋರಿಯೊಂದರಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಜೂ.9ರಂದು ಬೆಳಿಗ್ಗೆ ನಾಯಿ ಶವವನ್ನು ಎಳೆದಾಡುತ್ತಿದ್ದಾಗ ಸಮೀಪದ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯೊಬ್ಬರು ಸಮೀಪ ಹೋಗಿ ನೋಡಿದಾಗ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಈ ಕೇಸ್‌ನಲ್ಲಿ ಡೌಟ್ ಬಂದು ತನಿಖೆ ನಡೆಸಿದಾಗ ದರ್ಶನ್ ಪವಿತ್ರಗೌಡ ಸೇರಿ ಒಟ್ಟು 17 ಜನ ಅರೆಸ್ಟ್ ಆಗಿದ್ರು. ದರ್ಶನ್ ಅರೆಸ್ಟ್ ಆಗುತ್ತಿದ್ದಂತ ಅವರ ಅಭಿಮಾನಿಗಳು ತಮ್ಮ ಅಭಿಮಾನ ತೋರಿಸಿದ್ರು, ಕಾನೂನಿನ ಮುಂದೆ ಯಾರ ಆಟವು ನಡೆದಿಲ್ಲ. ಪರಪ್ಪನ ಅಗ್ರಹಾರದಲ್ಲಿ ಬಿಂದಾಸ್ ಆಗಿದ್ದ ದಾಸನ ಫೋಟೋ ಹೊರ ಬರುತ್ತಿದ್ದಂತೆ, ಬಳ್ಳಾರಿ ಶಿಫ್ಟ್ ಮಾಡಿದ್ರು. ಆದ್ರೆ ಬೆನ್ನು ನೋವು ಶುರವಾಗಿದ್ರಿಂದ ದರ್ಶನ್‌ನ್ನ ಮಂಧ್ಯತರ ಜಾಮೀನು ನೀಡಿ ಚಿಕಿತ್ಸೆಗೆ ಕಳುಹಿಸಲಾಗಿತ್ತು.

ವಾಲ್ಮೀಕಿ ಹಗರಣದಲ್ಲಿ ಜೈಲು ಸೇರಿದ ಬಿ.ನಾಗೇಂದ್ರ

ಇನ್ನು 2024ರಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಸಚಿವರೂ ಆಗಿದ್ದ ಬಿ.ನಾಗೇಂದ್ರ ಅವರ ಪಾತ್ರವಿದೆ ಎಂದು ಅರೆಸ್ಟ್ ಮಾಡಲಾಯ್ತು. ಬಳಿಕ ಅವರು ತಮ್ಮ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ನಿಗಮದಲ್ಲಿ ಬರೋಬ್ಬರಿ 187 ಕೋಟಿ ರೂಪಾಯಿಯಷ್ಟು ಹಗರಣ ನಡೆದಿದೆ ಎಂಬ ಆರೋಪದ ಮೇಲೆ  ಎ1 ಆಗಿದ್ದ ನಾಗೇಂದ್ರ ಅವರು ಜೈಲು ಶಿಕ್ಷೆಯನ್ನ ಅನುಭವಿಸಿ ಹೋರ ಬಂದಿದ್ದಾರೆ.

ಅತ್ಯಾಚಾರ, ಹನಿಟ್ರ್ಯಾಪ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಮುನಿರತ್ನ

ಅತ್ಯಾಚಾರ ಹಾಗೂ ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ‌ ಬಿಜೆಪಿ ಶಾಸಕ ಮುನಿರತ್ನ ಜೈಲು ಶಿಕ್ಷೆ ಅನುಭವಿಸಿದ್ದಾರೆ.  ಅತ್ಯಾಚಾರ ಆರೋಪದಲ್ಲಿ ಕಗ್ಗಲಿಪುರ ಠಾಣೆಯಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗುತ್ತಿದ್ದ ಮುನಿರತ್ನನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ರು. ಸುಮಾರು 20 ದಿನಗಳ ಕಾಲ ಜೈಲಿನಲ್ಲಿದ್ದ ಮುನಿರತ್ನ  ಬೇಲ್‌ ಮೂಲಕ ಹೊರ ಬಂದಿದ್ದಾರೆ.

ಬೇಲೆಕೇರಿ ಅದಿರು ಕೇಸ್‌ನಲ್ಲಿ ಸತೀಶ್ ಶೈಲ್‌ಗೆ ಜೈಲು ಶಿಕ್ಷೆ

2009-10ರ ಅವಧಿಯಲ್ಲಿ ಬೇಲೆಕೇರಿ ಬಂದರಿನಿಂದ ವಶಪಡಿಸಿಕೊಂಡ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿ ಅಕ್ರಮವಾಗಿ ರಫ್ತು ಮಾಡಿದ್ದಕ್ಕಾಗಿ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ಸತೀಶ್ ಕೃಷ್ಣ ಸೈಲ್ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ಮೊತ್ತದ ದಂಡವನ್ನು ವಿಧಿಸಿತ್ತು. ನಂತ್ರ ಶಾಸಕ ಸತೀಶ್ ಸೈಲ್ ಹಾಗೂ ಇತರೆ ಅಪರಾಧಿಗಳಿಗೆ ಹೈಕೋರ್ಟ್ ಬೇಲ್ ನೀಡಿ ಬಿಗ್ ರಿಲೀಫ್ ನೀಡ್ತು.

ಕಪ್ಪು ಚುಕ್ಕೆ ಇಲ್ಲದ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ  

ಇನ್ನೂ 40 ವರ್ಷದ ರಾಜಕೀಯದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಮುಡಾ ಉರುಳು ಸುತ್ತಿಕೊಂಡಿದೆ. 2024 ಸಿದ್ದರಾಮಯ್ಯ ಪಾಲಿಗೆ ಕಪ್ಪು ಚುಕ್ಕೆಯಾಗೇ ಉಳಿದಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿ, ಇಡಿ ಕೂಡ ವಿಚಾರಣೆ ನಡೆಸುತ್ತಿದೆ. ಸಿದ್ದರಾಮಯ್ಯ ಅಕ್ರಮ ಸೈಟ್ ಹಂಚಿಕೆ ಪ್ರಕರಣದಲ್ಲಿ ಎ 1 ಆರೋಪಿಯಾಗಿದ್ರೆ, ಅವರ ಪತ್ನಿ ಪಾರ್ವತಿ ಎ 2 ಆರೋಪಿಯಾಗಿದ್ದಾರೆ. ಇದ್ರಿಂದ ಸಿದ್ದರಾಮಯ್ಯ ಸಾಕಷ್ಟು ಮುಜುಗರ ಎದುರಿಸುವಂತಾಯ್ತು. ವಿರೋಧ ಪಕ್ಷದವರು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಕೂಡ ಅಗ್ರಹಿಸಿದ್ರು. 2024 ರಲ್ಲಿ ಅಧಿಕಾರಿಗಳ ಮುಂದೆ ಸಿದ್ದರಾಮಯ್ಯ ಕೈ ಕಟ್ಟಿ ನಿಲ್ಲುವಂತೆ ಆಯ್ತು. ರಾಜ್ಯ ರಾಜಕೀಯದಲ್ಲಿ ಹೆಸರು ಮಾಡಿದವರು, ಅಪಾರ ಅಭಿಮಾನಿಗಳನ್ನ ಹೊಂದಿದ ದರ್ಶನ್‌ಗೆ 2024 ನರಕ ತೋರಿಸಿದೆ.. ಜೈಲಿನ ದರ್ಶನವಾಗಿದೆ.. ತಪ್ಪು ಮಾಡಿದವರು ಎಷ್ಟೇ ಪ್ರಭಾವಿ ಆದ್ರೂ ಶಿಕ್ಷೆ ಕಟ್ಟಿಟ್ಟ ಬುತ್ತಿ ಅಂತ ನಮ್ಮ ಕೂನೂನು ತೋರಿಸಿಕೊಟ್ಟಿದೆ.

Shwetha M