ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್! – ಈ ನಂಬರ್‌ ಹೇಳಿದ್ರೆ  ಇನ್ಮುಂದೆ ಪಡಿತರ ಸಿಗುತ್ತೆ!

ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್! – ಈ ನಂಬರ್‌ ಹೇಳಿದ್ರೆ  ಇನ್ಮುಂದೆ ಪಡಿತರ ಸಿಗುತ್ತೆ!

ರಾಜ್ಯ ಸರ್ಕಾರ ಪಡಿತರ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಇನ್ಮುಂದೆ  ಪಡಿತರ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಿತ್ತು. ಆದ್ರೆ ಇನ್ಮುಂದೆ ಈ ತಲೆನೋವು ಇರಲ್ಲ. ನೀವು ಜಸ್ಟ್‌ ಈ ನಂಬರ್‌ ಹೇಳಿ ಪಡಿತರ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಬಿಗ್‌ಬಾಸ್‌ ಕಪ್‌ ಗೆದ್ದ ಗಿಲ್ಲಿಗೆ ಹುಟ್ಟೂರಲ್ಲಿ ಭವ್ಯ ಸ್ವಾಗತ! – ಮಳವಳ್ಳಿಯಲ್ಲಿ ಭರ್ಜರಿ ರೋಡ್​ ಶೋ!

ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಈ ಮೊದಲು ಜನರು ಪಡಿತರ ಪಡೆಯಲು ಬಹಳ ಕಷ್ಟ ಪಡುತ್ತಿದ್ದರು. ಅಲ್ಲದೆ ವಿತರಣೆ ಸಮಯ ಸಹ ಹೆಚ್ಚಾಗುತ್ತಿದ್ದು, ಸರತಿ ಸಾಲಿನಲ್ಲಿ ದೀರ್ಘ ಕಾಲ ನಿಲ್ಲಬೇಕಿತ್ತು. ಇದನ್ನು ಮನಗಂಡಿರುವ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಈಗ ಹೊಸ ವ್ಯವಸ್ಥೆ ಮೂಲಕ ಪಡಿತರ ನೀಡಲು ಮುಂದಾಗಿದೆ. ಇನ್ಮುಂದೆ ಒಟಿಪಿ ಹೇಳಿ ಕ್ಷಣ ಮಾತ್ರದಲ್ಲಿ ಪಡಿತರ ಪಡೆದುಕೊಂಡು ಬರಬಹುದಾಗಿದೆ.

ಇದು ಮೊದಲೇ ತಿಳಿಸಿದಂತೆ ದೀರ್ಘ ಕಾಯುವಿಕೆ ಸಮಯ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಉಂಟು ಮಾಡಿತ್ತು. ಅಷ್ಟೇ ಅಲ್ಲದೆ ಕೆಲವು ರೈತರು ಕೆಲಸ ಮಾಡುವಾಗ ಬೆರಳುಗಳನ್ನು ಗಾಯ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ರೇಷನ್‌ ಪಡೆಯುವುದು ದೊಡ್ಡ ಕಷ್ಟವೇ ಆಗಿತ್ತು.ಈಗ ಈ ಒಟಿಪಿ ವ್ಯವಸ್ಥೆಯಿಂದ ಯಾವುದೇ ಸಮಸ್ಯೆ ಇಲ್ಲದೆ ರೇಷನ್‌ ಪಡೆದುಕೊಳ್ಳಬಹುದಾಗಿದೆ. ಇದಿಷ್ಟೇ ಅಲ್ಲದೆ ಹಲವಾರು ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್‌ ಸಮಸ್ಯೆ ದೊಡ್ಡ ಮಟ್ಟದಲ್ಲಿ ಇತ್ತು. ಇದರಿಂದ ಜನರು ನಿಂತಲ್ಲೆ ನಿಲ್ಲಬೇಕಿತ್ತು. ಆದರೆ ಈ ಒಟಿಪಿ ವ್ಯವಸ್ಥೆಯಿಂದಾಗಿ ಈ ರೀತಿಯ ಸಮಸ್ಯೆ ಅನುಭವಿಸುವುದು ತಪ್ಪಿದಂತೆ ಆಗಲಿದೆ. ಜೊತೆಗೆ ವೃದ್ಧರು, ಕೂಲಿಗಾರರು, ಗಾರೆ ಕೆಲಸ ಮಾಡುವವರ ಬೆರಳುಗಳು ಸವೆಯುವ ಕಾರಣಕ್ಕೆ ತುಂಬಾ ಸಮಸ್ಯೆ ಎದುರಾಗುತ್ತಿತ್ತು. ಆದರೆ ಇನ್ಮುಂದೆ ಈ ಸಮಸ್ಯೆಗಳಿಗೆಲ್ಲಾ ಫುಲ್‌ಸ್ಟಾಪ್‌ ಇಡಲಾಗುತ್ತಿದೆ.

ಒಟಿಪಿ ಬಗ್ಗೆ ಈಗಾಗಲೇ ಎಲ್ಲರಿಗೂ ತಿಳಿದಿದೆ. ಇನ್ನು ರೇಷನ್‌ ವಿಚಾರಕ್ಕೆ ಬಂದರೆ, ನ್ಯಾಯಬೆಲೆ ಅಂಗಡಿಯಲ್ಲಿ ಈ ಮೊದಲು ಬಯೋಮೆಟ್ರಿಕ್‌ ಆಕ್ಸೆಸ್‌ ಮೂಲಕ ಹೇಗೆ ಪಡಿತರ ನೀಡಲು ಅನುಮತಿ ನೀಡುತ್ತಿತ್ತೋ ಅದೇ ರೀತಿ ನಿಮ್ಮ ರಿಜಿಸ್ಟರ್‌ ಫೋನ್‌ಗೆ ಒಟಿಪಿ ಬರಲಿದೆ. ಅದನ್ನು ಹೇಳಿದಾಗ ನಿಮಗೆ ರೇಷನ್‌ ನೀಡಲು ನ್ಯಾಯಬೆಲೆ ಅಂಗಡಿಯವರಿಗೆ ಅನುಮತಿ ನೀಡುತ್ತದೆ.

Shwetha M