ಮನೆ ಬಾಗಿಲಿಗೆ ಬರುತ್ತೆ ದೇವಸ್ಥಾನಗಳ ಪ್ರಸಾದ! – ಯಾವ ಯಾವ ದೇವಸ್ಥಾನದಲ್ಲಿ ಬುಕ್‌ ಮಾಡ್ಬೋದು?

ಮನೆ ಬಾಗಿಲಿಗೆ ಬರುತ್ತೆ ದೇವಸ್ಥಾನಗಳ ಪ್ರಸಾದ! – ಯಾವ ಯಾವ ದೇವಸ್ಥಾನದಲ್ಲಿ ಬುಕ್‌ ಮಾಡ್ಬೋದು?

ದೇವಸ್ಥಾನಗಳಲ್ಲಿ ಹೆಚ್ಚಿನ ಜನ ಸಂದಣಿ ಇದ್ರೆ ಪ್ರಸಾದ ತೆಗೆದುಕೊಳ್ಳೋದಿಕ್ಕೆ ಸಾಧ್ಯವಾಗೋದಿಲ್ಲ. ಇದ್ರಿಂದಾಗಿ ಅದೆಷ್ಟೋ ಭಕ್ತರು ಬೇಸರ ಮಾಡಿಕೊಂಡಿದ್ದೂ ಇದೆ. ಹೀಗಾಗೇ ರಾಜ್ಯ ಸರ್ಕಾರ ಇ – ಪ್ರಸಾದ ಯೋಜನೆಯನ್ನ ಇತ್ತೀಚೆಗೆ ಜಾರಿಗೆ ತಂದಿದ್ದು, ಇದು ಸಕ್ಸಸ್‌ ಆಗಿದೆ. ಇದೀಗ ಇನ್ನಷ್ಟು ದೇವಾಲಯಗಳ ಪ್ರಸಾದವನ್ನು ಆನ್‌ಲೈನ್ ಮೂಲಕ ಮನೆಮನೆಗೂ ತಲುಪಿಸಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಶತ್ರುಗಳಿದ್ದಾರೆ.. ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ!‌ – ನಟ ರಿಷಭ್‌ ಶೆಟ್ಟಿಗೆ ಎಚ್ಚರಿಕೆ ಕೊಟ್ಟ ಪಂಜುರ್ಲಿ ದೈವ

ಹೌದು, ಇತ್ತೀಚೆಗೆ ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಪ್ರಸಾದವನ್ನು ಆನ್‌ಲೈನ್ ಮೂಲಕ ಭಕ್ತರ ಮನೆಗೆ ತಲುಪಿಸಲು `ಇ-ಪ್ರಸಾದ’ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿತ್ತು. ಪ್ರಾಯೋಗಿಕವಾಗಿ 14 ದೇವಸ್ಥಾನಗಳಲ್ಲಿ ಜಾರಿ ಮಾಡಲಾಗಿತ್ತು. ಇದೀಗ ಈ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೂ ಆನ್‌ಲೈನ್‌ ಮೂಲಕ 10 ಸಾವಿರ ಭಕ್ತಾಧಿಗಳು ಪ್ರಸಾದ ಬುಕ್‌ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ಕೇರಳದಿಂದಲೂ ಇ – ಪ್ರಸಾದಕ್ಕೆ ಬೇಡಿಕೆ ಹೆಚ್ಚಾಗಿದೆ. ಈಗ ಮತ್ತಷ್ಟು ದೇವಸ್ಥಾನಗಳನ್ನು ಈ ಯೋಜನೆಗೆ ಸೇರಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.

ಯಾವ ದೇವಸ್ಥಾನಗಳ ಪ್ರಸಾದಕ್ಕೆ ಬೇಡಿಕೆ ಹೆಚ್ಚು?

  • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ
  • ನಂಜನಗೂಡು ದೇವಸ್ಥಾನ
  • ರೇಣುಕಾ ಯಲ್ಲಮ್ಮ
  • ದತ್ತಾತ್ರೇಯ ದೇವಸ್ಥಾನ
  • ಹುಲಿಗೆಮ್ಮ ದೇವಸ್ಥಾನ
  • ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ
  • ಕೊಲ್ಲೂರು ಮೂಕಾಂಬಿ ದೇವಸ್ಥಾನ

ಹೊಸದಾಗಿ ಸೇರ್ಪಡೆಗೊಳ್ಳಲಿರುವ ದೇವಸ್ಥಾನಗಳು

  • ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ
  • ಕಟೀಲು ದುರ್ಗಾಪರಮೇಶ್ವರಿ
  • ಘಾಟಿ ಸುಬ್ರಮಣ್ಯ
  • ಸೌತಡ್ಕ ಗಣಪತಿ (ಕೊಕ್ಕಡ, ದಕ್ಷಿಣ ಕನ್ನಡ)

Shwetha M

Leave a Reply

Your email address will not be published. Required fields are marked *