ಪಠ್ಯ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ – ಯಾವ್ಯಾವ ಲೇಖಕರ ಪಠ್ಯಗಳಿಗೆ ಕತ್ತರಿ ಗೊತ್ತಾ..?  

ಪಠ್ಯ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ – ಯಾವ್ಯಾವ ಲೇಖಕರ ಪಠ್ಯಗಳಿಗೆ ಕತ್ತರಿ ಗೊತ್ತಾ..?  

ಶಾಲೆಗಳು ಈಗಷ್ಟೇ ಶುರುವಾಗಿದ್ದು ಮಕ್ಕಳೆಲ್ಲಾ ಶಾಲೆಗೆ ಮರಳಿದ್ದಾರೆ. ಮಕ್ಕಳಿಗೆ ಪಠ್ಯಪುಸ್ತಕಗಳನ್ನೂ ಹಂಚಿಕೆ ಮಾಡಿಯಾಗಿದೆ.  ದರೆ ಈಗ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಮುಂದಾಗಿದ್ದು, ತಾತ್ಕಾಲಿಕ ಸಮಿತಿಯನ್ನು ರಚನೆ ಮಾಡಿ ಲೋಪದೋಷಗಳನ್ನು ಸರಿಪಡಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಆಗಿದ್ದು, ಪ್ರಮುಖ ಲೇಖಕರ ಪಠ್ಯಗಳನ್ನು ಪಠ್ಯಕ್ರಮದಿಂದ ಕೈಬಿಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ರಾಜ್ಯದಲ್ಲಿರುವ ನೂತನ ಕಾಂಗ್ರೆಸ್ ಸರ್ಕಾರ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ನಿರ್ಧಾರ ಮಾಡಿದ್ದು, ತಾತ್ಕಾಲಿಕ ಸಮಿತಿಯನ್ನು ರಚನೆ ಮಾಡಿದೆ. ಶಾಲಾ ಪಠ್ಯದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ಸಾಹಿತಿ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಜೊತೆಗೆ ಪಠ್ಯ ಪರಿಷ್ಕರಣೆ ಸಂಬಂಧಿಸಿದಂತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಇದನ್ನೂ ಓದಿ : ‘ಮದುವೆಗೆ ಬಂದ್ರೂ ಮುಯ್ಯಿ ಹಾಕಲ್ಲ.. ಸಹಾಯ ಕೇಳಿ ಬರಬೇಡಿ..’ – ಸೋಲಿನ ನೋವು ತೋಡಿಕೊಂಡ ಮಾಜಿ ಶಾಸಕ!

ಈಗಾಗಲೇ ರಾಜ್ಯದಲ್ಲಿ ಶಾಲೆಗಳು ಆರಂಭವಾಗಿವೆ. ಪುಸ್ತಕಗಳು ಮುದ್ರಣವಾಗಿ ಶಾಲೆಗಳಿಗೂ ತಲುಪಿವೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ತಿದ್ದುಪಡಿ ಮಾಡಲು ಸಮಯ ಇಲ್ಲ. ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಪಠ್ಯಗಳನ್ನು ತೆಗೆದು ಹಾಕಿ, ಬೇರೆ ಪಠ್ಯ ಸೇರಿಸುವ ತಿದ್ದೋಲೆಗಳನ್ನು ಎಲ್ಲ ಶಾಲೆಗಳಿಗೆ ಕಳುಹಿಸಲು ಚರ್ಚೆ ಮಾಡಲಾಗಿದೆ. ಮುಖ್ಯವಾಗಿ ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೆವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ವಿದ್ವಾಂಸರಾದ ಬನ್ನಂಜೆ ಗೋಂವಿದಾಚಾರ್ಯ ಅವರ ಪಠ್ಯಗಳು ಸೇರಿದಂತೆ ಹಲವು ಪಠ್ಯಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಠ್ಯಪರಿಷ್ಕರಣೆ ಮಾಡಲು ಸಮಿತಿಯೊಂದನ್ನು ರಚನೆ ಮಾಡುವುದು, ಆ ಸಮಿತಿಗೆ ಏಳೆಂಟು ತಿಂಗಳ ಸಮಯ ಸಿಗುತ್ತದೆ. ಆ ನಂತರ ಪಠ್ಯ ಮುದ್ರಿಸಿ ಶಾಲೆಗಳಿಗೆ ರವಾನಿಸಬಹುದೆಂಬ ಬಗ್ಗೆಯೂ ಚರ್ಚೆಯಾಗಿದೆ ಎನ್ನಲಾಗಿದೆ. ಆದರೆ ಬರಗೂರು ಸಮಿತಿ ಅಧ್ಯಕ್ಷತೆ ವಹಿಸಲು ನಿರಾಕರಿಸಿದ ಹಿನ್ನೆಲೆ ಸದ್ಯಕ್ಕೆ ಶಿಕ್ಷಣ ತಜ್ಞರ ಸಲಹೆ ಮೇರೆಗೆ ಸರ್ಕಾರ ತಾತ್ಕಲಿಕವಾಗಿ ವಿವಾಧಿತ ಮೂರು ಪಠ್ಯಕ್ಕೆ ಕತ್ತರಿ ಹಾಕಲು ಚಿಂತನೆ ನಡೆಸಿದೆ.

ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾಜಿ ಸಚಿವ ವಿ.ಸುನಿಲ್​ ಕುಮಾರ್​ ಟ್ವೀಟ್ ಮಾಡಿ​ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಳಿಯದಂತೆ ಮುಚ್ಚಿಡುವುದು ಸರ್ಕಾರದ ಉದ್ದೇಶವೇ? ಶಾಲೆಗಳಿಗೆ ಪಠ್ಯ- ಪುಸ್ತಕ ಪೂರೈಕೆಯಾದ ನಂತರ ಪರಿಷ್ಕರಣೆಯ ಹಠವೇಕೆ? ಮಾನ್ಯ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

suddiyaana