ಸೈಬರ್ ಕ್ರೈಂ ಅಡ್ಡವಾದ ಕರ್ನಾಟಕ – ನಿರುದ್ಯೋಗಿಗಳೇ ಇವರ ಟಾರ್ಗೆಟ್!
ಆನ್ಲೈನ್ ಮೋಸ ತಡೆಯೋದ್ ಹೇಗೆ?
ಮನುಷ್ಯನ ಆಸೆಗೆ ಕೊನೆಯೇ ಇಲ್ಲ. ಶಾರ್ಟ್ ಟೈಂನಲ್ಲಿ ದುಡ್ಡು ಮಾಡ್ಬೇಕು ಅನ್ನೋ ಆಸೆಯೇ ಹೆಚ್ಚು.. ಕಷ್ಟ ಪಡಬಾರದು, ಆದ್ರೆ ದುಡ್ಡು ಕೈ ತುಂಬಾ ಸಿಗಬೇಕು ಅಂತಾರೆ.ಅದ್ರಲ್ಲೂ ಈಗ ಆನ್‌ಲೈನ್ ಕಾಲ.. ಏನ್ ಬೇಕಾದ್ರೂ ಆನ್‌ಲೈನ್‌ನಲ್ಲಿ ಸಿಗುತ್ತೆ.. ದುಡ್ಡು ಕೂಡ ಆನ್‌ಲೈನ್‌ನಲ್ಲೇ ಬರಬೇಕು.. ಮೊಬೈಲ್‌ನಿಂದಲೇ ಸುಲಭವಾಗಿ ದುಡ್ಡು ಸಿಗಬೇಕು ಅಂತಾ ಸಾಕಷ್ಟು ಜನ ಯೋಚನೆ ಮಾಡ್ತಾರೆ.. ಅದನ್ನೇ ಸೈಬರ್ ವಂಚಕರು ಬಂಡವಾಳ ಮಾಡ್ಕೊಂಡು ಸರಿಯಾಗಿ ಟೋಪಿ ಹಾಕುತ್ತಿದ್ದಾರೆ.. ನೀವು ಕಳೆದ 8 ತಿಂಗಳಲ್ಲಿ ನಡೆದ ಸೈಬರ್ ವಂಚನೆ ಅಂದ್ರೆ ಆನ್‌ಲೈನ್ ದೋಖಾದ ಲೆಕ್ಕ ಕೇಳಿದ್ರೆ ಶಾಕ್ ಆಗ್ತೀರಾ!
ಇದನ್ನೂ ಓದಿ:
ನಾವು ಒಂದು ರೂಪಾಯಿ ಹಾಕಿದ್ರೆ ನಮಗೆ 10 ರೂಪಾಯಿ ಬರಬೇಕು.. ಸ್ವಲ್ಪ ಇನ್ವೆಸ್ಟ್ ಮಾಡಿ ಹೆಚ್ಚು ಲಾಭ ತೆಗೆಯಬೇಕು ಅನ್ನೋದು ಸಾಕಷ್ಟು ಜನರ ಅಭಿಪ್ರಾಯ.. ಹೀಗಾಗಿ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ಅಂತಾ ಆನ್‌ಲೈನ್ ಮೂಲಕ ಹೂಡಿಕೆ ಮಾಡ್ತಾರೆ. ಇದ್ರಿಂದ ಸಾಕಷ್ಟು ಜನ ಕೋಟಿ ಕೋಟಿ ಕಳೆದುಕೊಳ್ಳುತ್ತಿದ್ದು, ಸೈಬರ್ ವಂಚಕರ ಹೊಟ್ಟೆ ತುಂಬಿಸುತ್ತಿದ್ದಾರೆ. ಅದರಲ್ಲೂ ವಿದ್ಯಾವಂತರೇ ಹೆಚ್ಚು ಸೈಬರ್ ಹಳ್ಳದಲ್ಲಿ ಬೀಳುತ್ತಿದ್ದಾರೆ. ಅದ್ರಲ್ಲೂ ನಗರ ಪ್ರದೇಶದಲ್ಲೇ ಜನ ಮೋಸ ಹೋಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸೈಬರ್ ಅಪರಾಧಗಳು ಅಪ್ಡೆಟ್ ಆಗುತ್ತಿದ್ದಾರೆ. ಹೂಡಿಕೆ ಮಾಡಿದ ಹಣ ಡಬಲ್ ಮಾಡಿಕೊಡುವ ಆಮಿಷ, ಪಿನ್ ನಂಬರ್ ಪಡೆದು ವಂಚನೆಯ ಜತೆಗೆ ವರ್ಷದಿಂದ ವರ್ಷಕ್ಕೆ ಉದ್ಯೋಗದ ಆಮಿಷ ಪ್ರಕರಣಗಳೂ ರಾಜ್ಯದಲ್ಲಿ ಹೆಚ್ಚುತ್ತಿವೆ. ವಂಚನೆ ನಡೆಸುವಲ್ಲಿ ಸೈಬರ್ ಕಳ್ಳರು ತಮ್ಮ ಬುದ್ಧಿಯನ್ನ ತೋರಿಸುತ್ತಿದ್ದಾರೆ. ಅದೆಲ್ಲೊ ಕುಳಿತು ಸೈಬರ್ ಕಳ್ಳರು ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಪೊಲೀಸರಿಗೆ ವಂಚಕರನ್ನ ಭೇಟೆಯಾಡೋದು ದೊಡ್ಡ ಸವಾಲಾಗಿದೆ. ರಾಜ್ಯದಾದ್ಯಂತ ದಾಖಲಾದ ಪ್ರಕರಣಗಳಿಗೆ ಹೋಲಿಸಿದರೆ, ಬೆಂಗಳೂರು ನಗರದಲ್ಲೇ ಅಧಿಕ ಪ್ರಕರಣಗಳು ವರದಿಯಾಗಿವೆ’ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ನಂತರದ ದಿನಗಳಲ್ಲಿ ಉದ್ಯೋಗದ ಸಮಸ್ಯೆ ತೀವ್ರವಾಗಿದೆ. ಕೆಲವು ಕಂಪನಿಗಳು ನೌಕರರನ್ನು ಕೆಲಸದಿಂದ ವಜಾಗೊಳಿಸಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು, ನಿರುದ್ಯೋಗಿಗಳಿಗೆ ಆಮಿಷವೊಡ್ಡಿ ವಂಚಿಸುತ್ತಿದ್ದಾರೆ. ಹಾಗಿದ್ರೆ ಎಷ್ಟೆಲ್ಲಾ ವಂಚನೆ ಪ್ರಕರಣಗಳು ನಡೆದಿವೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅತ್ತೆ ಕೈಚಳಕ ಭಾಗ್ಯ ಲಕಲಕ! -ಹೆಂಡ್ತಿ ನೋಡಿ ಕಳೆದು ಹೋದ ತಾಂಡವ್
ಆನ್‌ಲೈನ್ ಉದ್ಯೋಗ ವಂಚನೆ ಕೇಸ್
ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ ಸಾಕಷ್ಟು ಉದ್ಯೋಗ ವಂಚನೆ ಪ್ರಕರಣಗಳು ನಡೆದಿವೆ. 2020 ರಲ್ಲಿ 394 ಕೇಸ್ ದಾಖಾಲಗಿದ್ದು, ₹5 ಕೋಟಿ 67 ಲಕ್ಷ ವಂಚನೆ ಆಗಿದೆ. ಇದ್ರಲ್ಲಿ 80 ಲಕ್ಷ ಮಾತ್ರ ಜಪ್ತಿ ಮಾಡಲಾಗಿದೆ. ಇನ್ನು 2021ರಲ್ಲಿ 570 ಕೇಸ್ ದಾಖಲಾಗಿದ್ರೆ ₹12 ಕೋಟಿ 31 ಲಕ್ಷ ವಂಚನೆ ಆಗಿದ್ರೆ, ಇದ್ರಲ್ಲಿ ಕೇವಲ ₹2 ಕೋಟಿ 21 ಲಕ್ಷ ವಶಕ್ಕೆ ಪಡೆಯಲಾಗಿದೆ. ಇನ್ನು 2022 ರಲ್ಲಿ 977 ಕೇಸ್ ದಾಖಲಾಗಿದ್ದು ಇದ್ರಲ್ಲಿ ₹23 ಕೋಟಿ 11 ಲಕ್ಷ ವಂಚಿಸಲಾಗಿದೆ. ಆದ್ರೆ ಜಪ್ತಿ ಆಗಿದ್ದು ₹3 ಕೋಟಿ 95 ಲಕ್ಷ ಹಣ ಮಾತ್ರ. ಇನ್ನು 2023 ರಲ್ಲಿ 4,470 ಕೇಸ್ ದಾಖಲಾಗಿ ₹347 ಕೋಟಿ 70 ಲಕ್ಷ ವಂಚನೆಯಾಗಿದೆ. ಇದ್ರಲ್ಲಿ ₹46.73 ರಿಕವರಿ ಮಾಡಲಾಗಿದೆ. ಹಾಗೇ 2024 ಅಂದ್ರೆ ಈ ವರ್ಷ ಇಲ್ಲಿ ತನಕ 2,000 ಕೇಸ್ ದಾಖಲಾಗಿದ್ದು, ₹190.18 ಕೋಟಿ ವಂಚನೆ ಮಾಡಲಾಗಿದೆ. ಇದ್ರಲ್ಲಿ 18.71 ಮಾತ್ರ ರಿಕವರಿ ಮಾಡಲಾಗಿದೆ. ಒಟ್ಟು ಕಳದ ವರ್ಷದ ಉದ್ಯೋಗದ ಹೆಸರಲ್ಲಿ ವಂಚನೆ ಮಾಡಿರೋದು 8,411 ಕೇಸ್.. ₹578.97ಕೋಟಿ ವಂಚನೆ ಮಾಡಲಾಗಿದೆ. ಇದ್ರಲ್ಲಿ ₹72.4 ರಿಕವರಿ ಮಾಡಲಾಗಿದೆ. ಹಾಗೇ ಆ್ಯಪ್ ಮೂಲಕ ಕೂಡ ಕೋಟಿ ಕೋಟಿ ವಂಚನೆ ಮಾಡಲಾಗಿದೆ.
ಆ್ಯಪ್ ಮೂಲಕ ವಂಚನೆ
2020ರಲ್ಲಿ 51 ಕೇಸ್‌ಗಳು ಆ್ಯಪ್ ಮೂಲಕ ವಂಚನೆ ಮಾಡಿರೋದು ದಾಖಲಾಗಿದ್ದು, ಇದ್ರಲ್ಲಿ 98 ಲಕ್ಷ ವಂಚನೆ ಆಗಿದೆ. ಇದ್ರಲ್ಲಿ 25 ಲಕ್ಷ ರಿಕವರಿ ಮಾಡಲಾಗಿದೆ. 2022ರಲ್ಲಿ 209 ವಂಚನೆ ಕೇಸ್ ದಾಖಲಾದ್ರೆ, ₹1.64 ಕೋಟಿ ವಂಚವೆಯಾಗಿದೆ. ಇದ್ರಲ್ಲಿ 44 ಲಕ್ಷ ಜಪ್ತಿ ಮಾಡಲಾಗಿದೆ. 2022ರಲ್ಲಿ 411 ಕೇಸ್ ದಾಖಲಾಗಿದ್ರೆ, ₹13.80 ಕೋಟಿ ವಂಚನೆಯಾಗಿದೆ. ಇದ್ರಲ್ಲಿ ₹1.30 ಕೋಟಿ ವಂಚನೆ ಮಾಡಲಾಗಿದೆ. 2023ರಲ್ಲಿ 517 ಕೇಸ್ ದಾಖಲಾಗಿದ್ರೆ, ₹6.88 ಕೋಟಿ ವಂಚನೆ ಯಾಗಿದೆ. ಇದಲ್ಲಿ ಕೇವಲ ₹1.28 ಕೋಟಿ ಮಾತ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2023 ರಲ್ಲಿ 150 ಕೇಸ್ ದಾಖಲಾಗಿದ್ರೆ, ₹6.61 ಕೋಟಿ ವಂಚನೆ ಮಾಡಲಾಗಿದೆ. ಹೀಗೆ ಒಟ್ಟು ಕಳೆದ 5 ವರ್ಷದಲ್ಲಿ 1,338 ಕೇಸ್‌ಗಳು ಆ್ಯಪ್ ಮೂಲಕ ವಂಚನೆ ಮಾಡಿರೋ ಕೇಸ್ ದಾಖಲಾಗಿದ್ದು, 29.91 ಕೋಟಿ ವಂಚನೆ ಆಗಿದೆ. ಇದ್ರಲ್ಲಿ ₹3.67 ಕೋಟಿ ಮಾತ್ರ ಜಪ್ತಿ ಮಾಡಲಾಗಿದೆ. ಹೀಗೆ ನಾಲ್ಕು ವರ್ಷ10 ತಿಂಗಳಲ್ಲಿ ಸಾವಿರಾರು ಕೋಟಿ ಸೈಬರ್ ವಂಚನೆ ನಮ್ಮ ರಾಜ್ಯದಲ್ಲಿನಡೆದಿವೆ. ವಿದೇಶಿ ಕಂಪನಿ, ಹೂಡಿಕೆ, ಉದ್ಯೋಗ, ಆ್ಯಪ್, ಹಣ ಡಬಲ್ ಆಸೆ ತೋರಿಸಿ ಕೋಟಿ ಕೋಟಿ ಹಣ ಸೈಬರ್ ಕಳ್ಳರ ಪಾಲಾಗಿದೆ.
ಕಳೆದ 8 ತಿಂಗಳಲ್ಲಿ 12,356 ಸೈಬರ್ ಕೇಸ್
ನಮ್ಮ ರಾಜ್ಯದಲ್ಲಿ ಕಳೆದ 8 ತಿಂಗಳಲ್ಲೇ12.356 ಸೈಬರ್ ಕೇಸ್ ದಾಖಲಾಗಿದ್ದು, 1242 ಕೋಟಿ ವಂಚಕರ ಪಾಲಾಗಿದೆ.ಇನ್ನೊಂದು ವಿಷ್ಯ ಅಂದ್ರೆ ವಂಚಕರು ಹಬ್ಬದ ದಿನಗಳಲ್ಲಿ ಸೈಬರ್ ವಂಚನೆ ಮಾಡುತ್ತಿಲ್ಲ. ಯಾಕಂದ್ರೆ ಹಬ್ಬದ ಟೈಂನಲ್ಲಿ ಫ್ಯಾಮೀಲಿ ಜೊತೆ ಇರ್ತಾರೆ. ಒಟ್ಟಾಗಿ ಇರ್ತಾರೆ ಅನ್ನೋ ಕಾರಣಕ್ಕೆ ಹಬ್ಬದ ದಿನಗಳಲ್ಲಿ ವಂಚನೆ ಮಾಡುತ್ತಿಲ್ಲವಂತೆ. ಈ ದಸರಾ ಟೈಂನಲ್ಲಿ ರಾಜ್ಯದಲ್ಲಿ ಹೆಚ್ಚು ಸೈಬರ್ ಕ್ರೈಂ ಕೇಸ್‌ಗಳು ದಾಖಲಾಗಿಲ್ವಂತೆ. ಬೇರೆ ದಿನ 150 ರಿಂದ 200 ಕೇಸ್ ದಾಖಲಾಗಿದ್ರೆ, ಹಬ್ಬ ಬಂದ್ರೆ 2-3 ಕೇಸ್ ಮಾತ್ರ ದಾಖಲಾಗುತ್ತಿವೆ. ಸೈಬರ್ ವಂಚಕು ಸಾಕಷ್ಟು ಪ್ಲ್ಯಾನ್ ಮಾಡಿ ವಂಚನೆ ಮಾಡುತಿದ್ದು, ನೀವು ಸಾಕಷ್ಟು ಹುಷಾರಾಗಿರಿ.