ಕುಡಿಯುವ ನೀರೇ ವಿಷವಾಯ್ತಾ? – ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ಕರ್ನಾಟಕ ದೇಶದಲ್ಲಿಯೇ ನಂಬರ್ 1​!

ಕುಡಿಯುವ ನೀರೇ ವಿಷವಾಯ್ತಾ? – ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ಕರ್ನಾಟಕ ದೇಶದಲ್ಲಿಯೇ ನಂಬರ್ 1​!

ರಾಜ್ಯದಲ್ಲಿ ಒಂದ್ಕಡೆ ವಾಯುಗುಣಮಟ್ಟ ಕಳಪೆಯಾಗಿದೆ. ಉಸಿರಾಡುವ ಗಾಳಿಯೇ ವಿಷವಾಗುತ್ತಿದೆ. ಮತ್ತೊಂದ್ಕಡೆ ಕುಡಿಯುವ ನೀರಿನಲ್ಲಿ ವಿಷಕಾರಿ ಅಂಶ, ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಇದೀಗ ಮತ್ತೊಂದು ಶಾಕಿಂಗ್‌ ಸುದ್ದಿಯೊಂದು ರಿವೀಲ್‌ ಆಗಿದೆ. ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್​ 1 ಸ್ಥಾನದಲ್ಲಿದೆ.

ಇದನ್ನೂ ಓದಿ: ಏಜ್‌ ಈಸ್‌ ಜಸ್ಟ್‌ ಎ ನಂಬರ್‌! – ಯುವಕರನ್ನೂ ನಾಚಿಸುವಂತಿದೆ 90 ವರ್ಷದ ಅಜ್ಜಿ ಕಾರ್‌ ಡ್ರೈವಿಂಗ್‌!

ಅತಿ ಹೆಚ್ಚು ಟೈಫಾಯ್ಡ್ ಹಾಗೂ ಅತಿಸಾರ ಕೇಸ್​​ಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಟೈಫಾಯ್ಡ್ ಪೈಕಿ ಮೂರನೇ ಸ್ಥಾನ ಮತ್ತು ಅತಿಸಾರ ಪ್ರಕರಣಗಳಲ್ಲಿ 5ನೇ ನಂಬರ್​ನ ಕರ್ನಾಟಕ ಪಡೆದಿದ್ದು, ‌ಹಳ್ಳಿಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಯಾವ ವರ್ಷದಲ್ಲಿ ಎಷ್ಟು ಪ್ರಕರಣ?

ವರ್ಷ                  ಅತಿಸಾರ ಕೇಸ್​       ಟೈಫಾಯ್ಡ್ ಕೇಸ್​

  • 2025                            8 ಲಕ್ಷ               39,348
  • 2024                            8 ಲಕ್ಷ               45,641
  • 2023                            4 ಲಕ್ಷ               42,096
  • 2022                            3 ಲಕ್ಷ               28232

ಅಕ್ಯುಟ್ಡಯಾರಿಯಲ್ಡಿಸೀಸ್ಲಕ್ಷಣಗಳು ಏನು?

  • ಭೇದಿ
  • ವಾಕರಿಕೆ ಜೊತೆಗೆ ವಾಂತಿ
  • ಕಿಬ್ಬೊಟ್ಟೆಯ ಸೆಳೆತ
  • ಹೊಟ್ಟೆನೋವು
  • ಜ್ವರ ಮತ್ತಿತರೆ ಲಕ್ಷಣ
  • ಮಕ್ಕಳು ಮತ್ತು ಹಿರಿಯರಲ್ಲೇ ಅಧಿಕ

2021ರಿಂದ 2025ರ ತನಕ ಕರ್ನಾಟಕದಲ್ಲಿ ಅತಿಹೆಚ್ಚು ಟೈಫಾಯ್ಡ್ ಹಾಗೂ ಅತಿಸಾರ ಖಾಯಿಲೆಗಳು ಪತ್ತೆಯಾಗಿದ್ದು, ರಾಜಧಾನಿಯಲ್ಲಿ ಕಲುಷಿತ ನೀರಿನ ಕಾರಣ ಪ್ರತಿ ದಿನ ಟೈಫಾಯ್ಡ್ ಹಾಗೂ ಅತಿಸಾರ ಕೇಸ್​​ಗಳು ಮೇಲಿಂದ ಮೆಲೆ ವರದಿಯಾಗ್ತಿವೆ. ಈ ನಡುವೆ ಬೇಸಿಗೆಯಲ್ಲಿ ಪ್ರಕರಣಗಳು ಮತ್ತಷ್ಟು ಹೆಚ್ಚಳ ಆಗುವ ಆತಂಕ ಕೂಡ ಇದ್ದು, ಪ್ರತಿ ದಿನ ಕನಿಷ್ಠ 10 ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಟ್ಯಾಂಕರ್ ವಾಟರ್, ಡ್ರೈನೇಜ್ ಮಿಶ್ರಿತ ನೀರು, ಪ್ಯಾಕೇಡ್ಜ್ ವಾಟರ್, ಪೈಪ್ ಲೈನ್​​ಗಳ ಕಲುಷಿತ ನೀರಿನಿಂದ ಅತಿಸಾರ ಪ್ರಕರಣಗಳು ದ್ವಿಗುಣಗೊಂಡಿವೆ. ಇದರಿಂದ ವಾಂತಿ, ಭೇದಿಯಂತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಜನ ಸಂಖ್ಯೆ ಹೆಚ್ಚಳವಾಗಿದೆ.‌ ಮಕ್ಕಳು ಮತ್ತು ಹಿರಿಯರಲ್ಲೇ ಈ ಸಮಸ್ಯೆ ಅಧಿಕವಾಗಿದೆ ಎನ್ನಲಾಗಿದೆ.

Shwetha M

Leave a Reply

Your email address will not be published. Required fields are marked *